ತಂಬಾಕು ಸಸಿ ಟ್ರೇ ನಾಶವಾಗಿದ್ದ ರೈತ ದಂಪತಿಗೆ ಬ್ರಿಗೇಡ್‌ ಪದಾಧಿಕಾರಿಗಳಿಂದ ಆರ್ಥಿಕ ಸಹಾಯ

| Published : May 01 2025, 12:45 AM IST

ತಂಬಾಕು ಸಸಿ ಟ್ರೇ ನಾಶವಾಗಿದ್ದ ರೈತ ದಂಪತಿಗೆ ಬ್ರಿಗೇಡ್‌ ಪದಾಧಿಕಾರಿಗಳಿಂದ ಆರ್ಥಿಕ ಸಹಾಯ
Share this Article
  • FB
  • TW
  • Linkdin
  • Email

ಸಾರಾಂಶ

ಆರಾಧ್ಯ ಬ್ರಿಗೇಡ್ ಸಂಸ್ಥಾಪಕ ಗೌರವಾಧ್ಯಕ್ಷ ಪ್ರತಿಧ್ವನಿ ಪ್ರಸಾದ್ ಅವರ ನೇತೃತ್ವದಲ್ಲಿ ನಷ್ಟ ಉಂಟಾಗಿದ್ದ ರೈತ ದಂಪತಿಗೆ ಆರ್ಥಿಕ ಸಹಾಯ

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣಕಿಡಿಗೇಡಿಗಳ ಕೃತ್ಯಕ್ಕೆ ಅಪಾರ ಪ್ರಮಾಣದ ತಂಬಾಕು ಸಸಿ ಟ್ರೇ ನಾಶವಾಗಿದ್ದ ಕೆಲ್ಲೂರು ಗ್ರಾಮದ ರೈತ ದಂಪತಿ ಚಂದ್ರಶೇಖರ್ ಆರಾಧ್ಯ, ಪುಷ್ಪಾವತಿ ಅವರ ನಿವಾಸಕ್ಕೆ ಪ್ರತಿಧ್ವನಿ ಪ್ರಸಾದ್ ಅವರ ನೇತೃತ್ವದಲ್ಲಿ ಆರಾಧ್ಯ ಬ್ರಿಗೇಡ್ ಪದಾಧಿಕಾರಿಗಳು ಭೇಟಿ ನೀಡಿ ಸಾಂತ್ವನ ಹೇಳಿ ಆರ್ಥಿಕ ಸಹಾಯ ನೀಡಿದರು.ಚಂದ್ರಶೇಖರ್ ಆರಾಧ್ಯ ಅವರ ಜಮೀನಿನಲ್ಲಿ ನಾಟಿ ಮಾಡಲು ಸಿದ್ಧವಾಗಿದ್ದ ತಂಬಾಕು ಸಸಿ ಟ್ರೇ ಗಳಿಗೆ ಕೆಲ ದಿನಗಳ ಹಿಂದೆ ಕಿಡಿಗೇಡಿಗಳು ಕಳೆನಾಶಕ ಸಿಂಪಡಿಸಿದ್ದರಿಂದ ಲಕ್ಷಾಂತರ ರು. ನಷ್ಟವಾಗಿದ್ದ ಹಿನ್ನೆಲೆ ಮೈಸೂರಿನ ಕೆ.ಆರ್ ಬ್ಯಾಂಕ್ ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕರು ಆರಾಧ್ಯ ಬ್ರಿಗೇಡ್ ಸಂಸ್ಥಾಪಕ ಗೌರವಾಧ್ಯಕ್ಷ ಪ್ರತಿಧ್ವನಿ ಪ್ರಸಾದ್ ಅವರ ನೇತೃತ್ವದಲ್ಲಿ ನಷ್ಟ ಉಂಟಾಗಿದ್ದ ರೈತ ದಂಪತಿಗೆ ಆರ್ಥಿಕ ಸಹಾಯ ನೀಡಿ ಸಾಂತ್ವನ ಹೇಳಿದರು.ಪ್ರತಿದ್ವನಿ ಪ್ರಸಾದ್ ಮಾತನಾಡಿ, ಆರಾಧ್ಯ ಸಮುದಾಯದ ರೈತರಿಗೆ ತಂಬಾಕು ಬೆಳೆ ನಷ್ಟವಾಗಿದ್ದ ಬಗ್ಗೆ ಪತ್ರಿಕೆಯಲ್ಲಿ ವರದಿ ಓದಿ ಅವರ ಕಷ್ಟದಲ್ಲಿ ಭಾಗಿಯಾಗುವ ಉದ್ದೇಶದಿಂದ ಕೈಲಾದ ಸಹಾಯ ಮಾಡಲಾಗಿದೆ ಎಂದರು.ಆರಾಧ್ಯ ಬ್ರಿಗೇಡ್ ಅಧ್ಯಕ್ಷ ನಿರಂಜನ್, ಪತ್ರಕರ್ತ ಬೆಕ್ಕರೆ ಸತೀಶ್ ಆರಾಧ್ಯ, ಆರಾಧ್ಯ ಬ್ರಿಗೇಡ್ ಸಂಚಾಲಕ ಉಮಾಶಂಕರ್ ಆರಾಧ್ಯ, ಪ್ರೌಢಶಾಲಾ ಮುಖ್ಯ ಶಿಕ್ಷಕ ಶಿವಕುಮಾರ್ ಆರಾಧ್ಯ, ಕೆಲ್ಲೂರು ಗ್ರಾಮದ ಯಜಮಾನರಾದ ಪುಟ್ಟಸೋಮರಾಧ್ಯ, ಹರಳಹಳ್ಳಿ ಗುರುಮಠದ ಶ್ರೀಕಂಠಾರಾಧ್ಯ, ಪಾಪಣ್ಣ, ಲೋಕೇಶ್ ಆರಾಧ್ಯ, ಅಕ್ಷಯ್ ಇದ್ದರು.