ಸ್ವಾರ್ಥ ರಾಜಕಾರಣಕ್ಕೆ ವ್ಯಕ್ತಿಯೊಬ್ಬರು ಪಕ್ಷಾಂತರ ಮಾಡಿ ಶಾಸಕರ ಬಗ್ಗೆ ತಪ್ಪು ಸಂದೇಶ ನೀಡುತ್ತಿರುವ ಬಗ್ಗೆ ಕೆಪಿಸಿಸಿ ಸಂಯೋಜಕ ನಟೇಶ್ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಶಾಲನಗರ : ಸ್ವಾರ್ಥ ರಾಜಕಾರಣಕ್ಕೆ ವ್ಯಕ್ತಿಯೊಬ್ಬರು ಪಕ್ಷಾಂತರ ಮಾಡಿ ಶಾಸಕರ ಬಗ್ಗೆ ತಪ್ಪು ಸಂದೇಶ ನೀಡುತ್ತಿರುವ ಬಗ್ಗೆ ಕೆಪಿಸಿಸಿ ಸಂಯೋಜಕ ನಟೇಶ್ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಬ್ಬಾಲೆ ಗ್ರಾಪಂ ಮಾಜಿ ಅಧ್ಯಕ್ಷರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಕ್ಷೇತ್ರ ಶಾಸಕರ ಕಾರ್ಯವೈಖರಿಯ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವುದು ಸಮಂಜಸವಲ್ಲ. ಕಾಂಗ್ರೆಸ್ ಪಕ್ಷದಲ್ಲಿದ್ದ ಸಂದರ್ಭ ಶಾಸಕರಿಂದ ಹಲವು ಅನುಕೂಲಗಳನ್ನು ಪಡೆದು ಇದೀಗ ಬಿಜೆಪಿ ಮುಖಂಡರನ್ನು ಮೆಚ್ಚಿಸುವ ಸಲುವಾಗಿ ಹಾಲಿ ಶಾಸಕರ ಅವಹೇಳನ‌ ಮಾಡುವುದು ಸರಿಯಲ್ಲ ಎಂದರು.

ತಾನು ಕೂಡ ಹೆಬ್ಬಾಲೆ ಜಿಪಂ ಕ್ಷೇತ್ರಕ್ಕೆ ಆಕಾಂಕ್ಷಿಯಾಗಿದ್ದೇನೆ ಎಂದು ತಿಳಿಸಿದರು. ವಿ ಪಿ ಶಶಿಧರ್ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ನಟೇಶ್ ಗೌಡ, ಶಶಿಧರ್ ಹಿರಿಯ ಮುಖಂಡರಾಗಿದ್ದು ಅವರ ಸೇವೆ ಇನ್ನೂ ಪಕ್ಷಕ್ಕೆ ಅಗತ್ಯವಿದೆ, ಎಲ್ಲವೂ ಸರಿ ಹೋಗುತ್ತದೆ ಎಂದರು.ಸಾಮಾಜಿಕ ಕಾರ್ಯಕರ್ತ, ಹಕ್ಕೆ‌ ಮೋಹನ್ ಮಾತನಾಡಿ, ಶಾಸಕ ಮಂತರ್ ಗೌಡ ಅವರ ಕಾರ್ಯವೈಖರಿ ಮೆಚ್ಚಿ ಹಲವರು ಈಗಾಗಲೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ. ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.ಹೆಬ್ಬಾಲೆ ಗ್ರಾಪಂ ಮಾಜಿ ಜನಪ್ರತಿನಿಧಿ ಮಹದೇವ್ ಮಾತನಾಡಿ, ಶಾಸಕ ಮಂತರ್ ಗೌಡ ಅವರ ಅಭಿವೃದ್ಧಿ ಕಾರ್ಯಗಳಿಂದ ಪ್ರೇರಿತರಾಗಿ ಕಾಂಗ್ರೆಸ್ ಸೇರ್ಪಡೆಯಾಗಿರುವ ಬಗ್ಗೆ ತಿಳಿಸಿದರು.