ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ ಕೆ.ಎಸ್.ಈಶ್ವರಪ್ಪನವರು ಶರಣರ ನಾಡಿನಲ್ಲಿ ತಮ್ಮ ಸ್ವಾರ್ಥಕ್ಕಾಗಿ ಹಿಂದುಳಿದ, ದಲಿತ ಸಮುದಾಯಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೋರಾಟಗಾರ ಯಲ್ಲಪ್ಪ ಹೆಗಡೆ ಕಿಡಿಕಾರಿದರು. ನವನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪನವರು ಪ್ರಸಕ್ತ ಹಿಂದುಳಿದ, ದಲಿತ ಹಾಗೂ ಸಮಗ್ರ ಹಿಂದೂ ಸಮಾಜದ ಸಮಸ್ಯೆಗಳ ಮತ್ತು ಸವಾಲುಗಳ ಚಿಂತನ-ಮಂಥನ ಸಭೆ ಮಾಡುವ ಬದಲು, ಪ್ರಸಕ್ತ ರಾಜಕಾರಣದಲ್ಲಿ ಈಶ್ವರಪ್ಪನವರು ಕುಟುಂಬವು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಚಿಂತನ ಮಂಥನ ಸಭೆ ನಡೆಸಿದರೇ ಉಪಯುಕ್ತವಾಗುತ್ತಿತ್ತು ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕೆ.ಎಸ್.ಈಶ್ವರಪ್ಪನವರು ಶರಣರ ನಾಡಿನಲ್ಲಿ ತಮ್ಮ ಸ್ವಾರ್ಥಕ್ಕಾಗಿ ಹಿಂದುಳಿದ, ದಲಿತ ಸಮುದಾಯಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೋರಾಟಗಾರ ಯಲ್ಲಪ್ಪ ಹೆಗಡೆ ಕಿಡಿಕಾರಿದರು.ನವನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪನವರು ಪ್ರಸಕ್ತ ಹಿಂದುಳಿದ, ದಲಿತ ಹಾಗೂ ಸಮಗ್ರ ಹಿಂದೂ ಸಮಾಜದ ಸಮಸ್ಯೆಗಳ ಮತ್ತು ಸವಾಲುಗಳ ಚಿಂತನ-ಮಂಥನ ಸಭೆ ಮಾಡುವ ಬದಲು, ಪ್ರಸಕ್ತ ರಾಜಕಾರಣದಲ್ಲಿ ಈಶ್ವರಪ್ಪನವರು ಕುಟುಂಬವು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಚಿಂತನ ಮಂಥನ ಸಭೆ ನಡೆಸಿದರೇ ಉಪಯುಕ್ತವಾಗುತ್ತಿತ್ತು ಎಂದು ತಿಳಿಸಿದರು.ತಾವು ರಾಜಕಾರಣ ಮಾಡುವ ಶಿವಮೊಗ್ಗ ಜಿಲ್ಲೆಯಲ್ಲಿ ಸಮಾವೇಶ, ಚಿಂತನ ಮಂಥನ ಸಭೆ ನಡೆಸಬೇಕು. ಅಧಿಕಾರ ವಂಚಿತ ಆದ ಮೇಲೆ ದಲಿತ, ಹಿಂದುಳಿದವರ ಕಾಳಜಿ ಅವರಿಗೆ ಬಂದಿದೆ. ಬಿಜೆಪಿಯಿಂದ ಅವರಿಗೆ ಟಿಕೆಟ್ ಸಿಗದೇ ಇದ್ದಾಗ ಅವರ ಪರವಾಗಿ ಎಲ್ಲಿಯೂ ಪಕ್ಷದ ವ್ಯಾಪ್ತಿಯಲ್ಲಿ ಹೋರಾಟ ನಡೆಯಲಿಲ್ಲ. ಈಶ್ವರಪ್ಪನವರು ಬ್ರಿಗೇಡ್ ಸಂಘಟನೆಯನ್ನು ಕೂಡಲಸಂಗಮದಲ್ಲಿ ಉದ್ಘಾಟನೆ ಮಾಡುವ ಮೊದಲು ರಾಜ್ಯದಲ್ಲಿ ಪಶ್ಚಾತ್ತಾಪ ಯಾತ್ರೆ ಮಾಡಿ ಇಲ್ಲಿಯವರೆಗೆ ನಡೆದ ತನ್ನ ಕೋಮು ದ್ವೇಷದ ನಡೆಗಳ ಬಗ್ಗೆ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ರಾಯಣ್ಣ ಮತ್ತು ಚನ್ನಮ್ಮಳನ್ನು ಸ್ವಾರ್ಥಕ್ಕಾಗಿ ಒಂದು ಜಾತಿ ಮತ್ತು ಧರ್ಮಕ್ಕೆ ಸೀಮಿತಗೊಳಿಸಬೇಡಿ. ಅವರು ನಾಡಿನ ಸಮಸ್ತ ಜನರ ಆಸ್ತಿಯಾಗಿದ್ದಾರೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ಶೇಖರ ಕಾಂಬಳೆ, ಕೃಷ್ಣಾ ಮುಧೋಳ, ಸುರೇಶ ಕಿಲಾರಿ ಇದ್ದರು