ಸಾರಾಂಶ
ಜು. ೨೯ರಂದು ಮನೆಗೆ ನುಗ್ಗಿ ತನ್ನೊಂದಿಗೆ ಅಕ್ರಮ ಸಂಬಂಧ ಹೊಂದುವಂತೆ ಆರೋಪಿ ಮೃತಳಿಗೆ ಆಗ್ರಹಿಸಿದ್ದ. ಅದನ್ನು ತನ್ನ ತಾಯಿ ಕಾಶವ್ವ ಹಾಗೂ ನೀಲವ್ವ ನೋಡಿದ್ದಾರೆ. ಆಗ ಇಬ್ಬರು ಕಿರುಚಿಕೊಂಡಿದ್ದಾರೆ. ಕೂಡಲೇ ಆತ ಓಡಿ ಹೋಗಿದ್ದಾನೆ.
ಕುಂದಗೋಳ:
ಕಾಣೆಯಾಗಿದ್ದ ಮಹಿಳೆ ಬೆಣ್ಣಿಹಳ್ಳದಲ್ಲಿ ಶವವಾಗಿ ಪತ್ತೆಯಾದ ಘಟನೆ ತಾಲೂಕಿನ ದ್ಯಾವನೂರ ಗ್ರಾಮದ ಬಳಿ ನಡೆದಿದೆ. ಇದು ಕೊಲೆ ಎಂದು ಮೃತಳ ಪತಿ ಠಾಣೆಯಲ್ಲಿ ದೂರು ನೀಡಿದ್ದಾರೆ.ತಾಲೂಕಿನ ವಿಠಲಾಪುರದ ಮಂಜುಳಾ ಚಂದ್ರುಗೌಡ ಹುತ್ತನಗೌಡ (೨೮) ಜು. ೨೯ರಂದು ಕಾಣೆಯಾಗಿದ್ದಳು. ಈಕೆಯನ್ನು ಹೊಸಕಟ್ಟಿ ಗ್ರಾಮದ ಸಿದ್ದು ಅಲಿಯಾಸ್ ಸಿದ್ರಾಮೇಶ್ವರ ವಿಘ್ನೇಶ ಮಲ್ಲಿಗವಾಡ ಎಂಬಾತನೇ ಕೊಲೆ ಮಾಡಿದ್ದಾನೆ. ಕೊಲೆಗೆ ಆರೋಪಿ ತಂದೆ ವಿಘ್ನೇಶ ಕುಮ್ಮಕ್ಕು ನೀಡಿದ್ದಾನೆ ಎಂದು ದೂರಿನಲ್ಲಿ ಮೃತಳ ಪತಿ ಚಂದ್ರುಗೌಡ ಹುತ್ತನಗೌಡ ತಿಳಿಸಿದ್ದಾನೆ.ಜು. ೨೯ರಂದು ಮನೆಗೆ ನುಗ್ಗಿ ತನ್ನೊಂದಿಗೆ ಅಕ್ರಮ ಸಂಬಂಧ ಹೊಂದುವಂತೆ ಆರೋಪಿ ಮೃತಳಿಗೆ ಆಗ್ರಹಿಸಿದ್ದ. ಅದನ್ನು ತನ್ನ ತಾಯಿ ಕಾಶವ್ವ ಹಾಗೂ ನೀಲವ್ವ ನೋಡಿದ್ದಾರೆ. ಆಗ ಇಬ್ಬರು ಕಿರುಚಿಕೊಂಡಿದ್ದಾರೆ. ಕೂಡಲೇ ಆತ ಓಡಿ ಹೋಗಿದ್ದಾನೆ. ಮೃತ ಮಂಜುಳಾ ಕೂಡ ಕಾಣೆಯಾಗಿ ಶವವಾಗಿ ಪತ್ತೆಯಾಗಿದ್ದಾಳೆ. ಅವಳನ್ನು ಸಿದ್ರಾಮೇಶ್ವರನೇ ತನ್ನ ತಂದೆ ವಿಘ್ನೇಶ ಕುಮ್ಮಕ್ಕಿನಿಂದ ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾನೆ.ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಕುಂದಗೋಳ ಠಾಣೆಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.