ಕಾಂಗ್ರೆಸ್ಸಿಂದಲೇ ಪವಿತ್ರ ಸಂವಿಧಾನದ ದುರುಪಯೋಗ: ಪಿ.ರಾಜೀವ್‌ ಆರೋಪ

| Published : Nov 30 2024, 12:47 AM IST

ಕಾಂಗ್ರೆಸ್ಸಿಂದಲೇ ಪವಿತ್ರ ಸಂವಿಧಾನದ ದುರುಪಯೋಗ: ಪಿ.ರಾಜೀವ್‌ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರು ನಗರದ ಮಾ ಆಶಾಪೂರಿ ಕಲ್ಯಾಣ ಮಂಟಪದಲ್ಲಿ ಸಂವಿಧಾನ ಸನ್ಮಾನ ಅಭಿಯಾನ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯರ್ಶಿ ಪಿ.ರಾಜೀವ್‌ ಮಾತನಾಡಿದರು.

ಕನ್ನಡಪ್ರಭ ವಾರ್ತೆ ರಾಯಚೂರುಪ್ರಪಂಚದ ಅತ್ಯಂತ ಪವಿತ್ರವಾದ ಭಾರತ ದೇಶದ ಸಂವಿಧಾನವನ್ನು ದುರುಪಯೋಗ ಪಡಿಸಿಕೊಂಡಿದ್ದೇ ಕಾಂಗ್ರೆಸ್ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌ ಅಪಾದಿಸಿದರು.ಸ್ಥಳೀಯ ಮಾ ಆಶಾಪೂರಿ ಕಲ್ಯಾಣ ಮಂಟಪದಲ್ಲಿ ಸಿಟಿಜನ್‌ ಫಾರ್‌ ಸೋಷಿಯಲ್‌ ಜಸ್ಟೀಸ್‌ ಸಂಸ್ಥೆಯಿಂದ ದೇಶದ ಸಂವಿಧಾನಕ್ಕೆ 75 ವರ್ಷ ತುಂಬಿದ ಪ್ರಯುಕ್ತ ಸಂವಿಧಾನ ಸನ್ಮಾನ ಅಭಿಯಾನ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಶುಕ್ರವಾರ ಮಾತನಾಡಿದ ಅವರು, 1949ರ ನ.29 ರಂದು ಸಂವಿಧಾನವನ್ನು ಅಂಗೀಕರಿಸಿದ ದಿನವನ್ನು ಕಾಂಗ್ರೆಸ್ ಕೇವಲ ಕಾನೂನು ದಿನವನ್ನಾಗಿ ಆಚರಿಸುತ್ತಾ ಬಂದಿತ್ತು. ದೇಶದಲ್ಲಿ 65 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರನ್ನು ದೇಶದ ಜನ ಹೆಚ್ಚುಸಲ ನೆನಪಿಸಿಕೊಳ್ಳಬಾರದು ಎನ್ನುವ ದುರುದ್ದೇಶ ಹೊಂದಿದ್ದರು. ಇಂದಿರಾ ಗಾಂಧಿ ಅವರು ತಮ್ಮ ಪ್ರಧಾನಿ ಹುದ್ದೆಯನ್ನು ತೊರೆಯ ಬೇಕಾಗುತ್ತದೆ ಎನ್ನುವ ಕಾರಣಕ್ಕೆ ಅನಗತ್ಯವಾಗಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿ ತಮಗೆ ಅನುಕೂಲವಾಗುವಂತಹ ರೀತಿಯಲ್ಲಿ ಸಂವಿಧಾನವನ್ನು ತಿದ್ದುಪಡಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕೈಯಲ್ಲಿ ಸಂವಿಧಾನದ ಪುಸ್ತಕವನ್ನು ಹಿಡಿದು ತಿರುಗಾಡಿದರೆ ಸಾಲದು ಅದನ್ನು ಓದುವ ಕೆಲಸವನ್ನೂ ಮಾಡಬೇಕು ಎಂದರು.ದೇಶದಲ್ಲಿ ಸಂವಿಧಾನವನ್ನು ದುರುಪಯೋಗ ಪಡಿಸಿಕೊಂಡ ಕಾಂಗ್ರೆಸ್‌ನ ಕುತಂತ್ರದ ರಾಜಕೀಯ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್ ಅವರಿಗೆ ಮಾಡಿದಂತಹ ಅಪಮಾನದ ಸಂಗತಿಗಳನ್ನು ನಾವೆಲ್ಲರೂ ಅರಿತುಕೊಳ್ಳಬೇಕು ಇದರ ಜೊತೆಗೆ ಜನಸಾಮಾನ್ಯರಿಗೂ ತಿಳಿಸುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಎಂಎಲ್ಸಿ ಎನ್‌.ಶಂಕ್ರಪ್ಪ, ಮುಖಂಡರಾದ ಅರುಣ ಶಹಾಪೂರೆ,ಶರಣು ತಳ್ಳಿಕೇರಿ, ರವೀಂದ್ರ ಜಲ್ದಾರ್, ಎನ್‌.ವಿರೂಪಾಕ್ಷಿ,ಶಂಕರಗೌಡ ಮಿರ್ಜಾಪುರ, ರಾಘವೇಂದ್ರ ಉಟಕನೂರು ಸೇರಿದಂತೆ ಅನೇಕರು ಇದ್ದರು.ಸಂವಿಧಾನದ ನಿಜ ರಕ್ಷಕರು ನಾವೇ..

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಡಳಿತಕ್ಕೆ ಬಂದ ಬಳಿಕ 2015ರಲ್ಲಿ ನ.29 ರಂದು ಕಾಂಗ್ರೆಸ್‌ ಆಚರಿಸುತ್ತಿದ್ದ ಕಾನೂನು ದಿನವನ್ನು ಬದಲಿಸಿ ಸಂವಿಧಾನ ಸಮರ್ಪಣ ದಿನವನ್ನಾಗಿ ಆಚರಿಸಲು ಆದೇಶಿಸಿದ್ದಾರೆ. ಸಂವಿಧಾನದಡಿಯಲ್ಲಿಯೇ ಆಡಳಿತ ನಡೆಸಿಕೊಂಡು ಬರುತ್ತಿರುವ ಮೋದಿ ಅವರು ಅಂಬೇಡ್ಕರ್ ವಿರೋಧಿಸಿದ್ದ 370 ಕಲಂನ್ನು ರದ್ದು ಪಡಿಸಿ , ಅವರ ಆಶಯವನ್ನು ಎತ್ತಿ ತೋರಿಸುವ ಕಾರ್ಯವನ್ನು ಮಾಡಿದ್ದಾರೆ. ಆದರೆ ಕಾಂಗ್ರೆಸ್‌ ಡಾ.ಬಿ.ಆರ್.ಅಂಬೇಡ್ಕರ್ ನಾವೇ ಸಂವಿಧಾನದ ರಕ್ಷಕರು ಎಂದು ಸುಳ್ಳು ಹೇಳುತ್ತಾ ಬಂದಿದ್ದಾರೆ ಎಂದು ರಾಜೀವ್‌ ದೂರಿದರು.