ಸಾರಾಂಶ
ಪರಿಸರ, ಆರೋಗ್ಯ ಮತ್ತು ಶಿಕ್ಷಣದಲ್ಲಿ ಅತ್ಯುತ್ತಮ ಸಮುದಾಯ ಸೇವೆಗಳಿಗಾಗಿ ಮಾಹೆ - ಎಂಐಟಿ ಇದರ ಎನ್ಎಸ್ಎಸ್ ಯೂನಿಟ್‌ಗಳಿಗೆ ಪ್ರತಿಷ್ಠಿತ ರೋಟರಿ ಶ್ರೇಷ್ಠತಾ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಈ ಗೌರವಾನ್ವಿತ ಮನ್ನಣೆಯನ್ನು ರೋಟರಿ ಇಂಟರ್ನ್ಯಾಷನಲ್ - ರೋಟರಿ ಕ್ಲಬ್ ಮಣಿಪಾಲ್ ಹಿಲ್ಸ್ ನೀಡಿದೆ.
ಕನ್ನಡಪ್ರಭ ವಾರ್ತೆ ಮಣಿಪಾಲ
ಪರಿಸರ, ಆರೋಗ್ಯ ಮತ್ತು ಶಿಕ್ಷಣದಲ್ಲಿ ಅತ್ಯುತ್ತಮ ಸಮುದಾಯ ಸೇವೆಗಳಿಗಾಗಿ ಮಾಹೆ - ಎಂಐಟಿ ಇದರ ಎನ್ಎಸ್ಎಸ್ ಯೂನಿಟ್‌ಗಳಿಗೆ ಪ್ರತಿಷ್ಠಿತ ರೋಟರಿ ಶ್ರೇಷ್ಠತಾ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಈ ಗೌರವಾನ್ವಿತ ಮನ್ನಣೆಯನ್ನು ರೋಟರಿ ಇಂಟರ್ನ್ಯಾಷನಲ್ - ರೋಟರಿ ಕ್ಲಬ್ ಮಣಿಪಾಲ್ ಹಿಲ್ಸ್ ನೀಡಿದೆ.ಎಂಐಟಿಯ ನಿರ್ದೇಶಕ ಕಮಾಂಡರ್ ಡಾ. ಅನಿಲ್ ರಾಣಾ, ಎನ್ಎಸ್ಎಸ್ ತಂಡದ ಮುಖ್ಯಸ್ಥೆ ಅಕ್ಷತಾ ಕುರಾನಾ, ಎನ್ಎಸ್ಎಸ್ ತಂಡದ ಸದಸ್ಯ ಎಂ.ಎಸ್. ಸಮೃದ್ಧಿ, ಎನ್ಎಸ್‌ಎಸ್ ತಂಡದ ಸದಸ್ಯೆ ಡಾ. ಬಾಲಕೃಷ್ಣ ಎಸ್. ಮದ್ದೋಡಿ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಪ್ರಶಸ್ತಿಯನ್ನು ಸ್ವೀಕರಿಸಿದವರು.ಈ ಸಾಧನೆಯು ಸಮುದಾಯದಲ್ಲಿ ಸಕಾರಾತ್ಮಕ ಪರಿಣಾಮ ಬೀರುವ ನಿಟ್ಟಿನಲ್ಲಿ ಮಾಹೆ - ಎಂಐಟಿ ಇದರ ಎನ್ಎಸ್ಎಸ್ ಯೂನಿಟ್‌ಗಳ ಸ್ವಯಂಸೇವಕರ ಅವಿಶ್ರಾಂತ ಪ್ರಯತ್ನಗಳು ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಇಡೀ ತಂಡಕ್ಕೆ ನಮ್ಮ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಮಣಿಪಾಲ್ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷೆ ಸುಪರ್ಣ ಶೆಟ್ಟಿ ಅಭಿನಂದಿಸಿದರು.