ಕನ್ನಡಪ್ರಭ ವಾರ್ತೆ ವಿಜಯಪುರಇ-ಫಾರ್ಮಸಿ ಮತ್ತು ರಿಯಾಯಿತಿಗಳನ್ನು ವಿರೋಧಿಸಿ ಆಲ್ ಇಂಡಿಯಾ ಆರ್ಗನೈಸೇಷನ್ ಆಫ್ ಕೆಮಿಸ್ಟ್ಸ್ಅಂಡ್ ಡ್ರಗ್ಸ್ ವತಿಯಿಂದ ಮೆಡಿಕಲ್ ಶಾಪ್ ಬಂದ್‌ಗೆ ನೀಡಿದ್ದ ಕರೆಗೆ ವಿಜಯಪುರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಇ-ಫಾರ್ಮಸಿ ಮತ್ತು ರಿಯಾಯಿತಿಗಳನ್ನು ವಿರೋಧಿಸಿ ಆಲ್ ಇಂಡಿಯಾ ಆರ್ಗನೈಸೇಷನ್ ಆಫ್ ಕೆಮಿಸ್ಟ್ಸ್ಅಂಡ್ ಡ್ರಗ್ಸ್ ವತಿಯಿಂದ ಮೆಡಿಕಲ್ ಶಾಪ್ ಬಂದ್‌ಗೆ ನೀಡಿದ್ದ ಕರೆಗೆ ವಿಜಯಪುರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ಜಿಲ್ಲಾದ್ಯಂತ ಎಂದಿನಂತೆ ಬಹುತೇಕ ಮೆಡಿಕಲ್‌ಗಳು ತೆರೆದಿದ್ದು, ಕೆಲವೊಂದು ಮಾತ್ರ ಮುಚ್ಚಲ್ಪಟ್ಟಿದ್ದವು. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಜಿಲ್ಲಾ ಫಾರ್ಮಾ ರಿಟೇಲರ್ಸ್ & ಫಾರ್ಮಾ ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಷನ್ ನವರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಮೆಡಿಕಲ್‌ಗಳಲ್ಲಿ ಸೇವೆ ಸಲ್ಲಿಸಿ ಸಾಂಕೇತಿಕವಾಗಿ ಬೆಂಬಲಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ಮೆಡಿಕಲ್ ಮಾಲೀಕರ ಹೋರಾಟಕ್ಕೆ ಸಾಂಕೇತಿಕವಾಗಿ ಬೆಂಬಲಿಸಿದ ಮೆಡಿಕಲ್ ಅಂಗಡಿಗಳ ಮಾಲೀಕರು ಹಾಗೂ ಕೆಲಸಗಾರರು ಮೆಡಿಕಲ್ ಶಾಪ್ ನಲ್ಲೇ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿರೋಧ ವ್ಯಕ್ತಪಡಿಸಿದರು. ಹಲವೆಡೆ ಸ್ಥಳೀಯವಾಗಿ ಇರುವ ಮೆಡಿಕಲ್ ಶಾಪ್ ಬಂದ್ ಮಾಡಲಾಗಿದ್ದು, ಕೆಲವೆಡೆ ಫ್ರಾಂಚೈಸಿ ಹೊಂದಿರುವ ಮೆಡಿಕಲ್ ಶಾಪ್ ಗಳು ಓಪನ್ ಇರುವುದು ಕಂಡುಬಂದಿತು. ಮೆಡ್ ಪ್ಲಸ್, ಅಪೋಲೋ ಸೇರಿ ಹಲವು ಮೆಡಿಕಲ್ ಶಾಪ್‌ಗಳು ಓಪನ್ ಇರುವುದರಿಂದ ಮೆಡಿಕಲ್ ಶಾಪ್ ಬಂದ್ ಬಿಸಿ ಜನಸಾಮಾನ್ಯರ ತಟ್ಟಿರಲಿಲ್ಲ.ನಮ್ಮ ಬೇಡಿಕೆಗಳ ಇಡೇರಿಕೆಗಾಗಿ ನಾವು ಹೋರಾಟಕ್ಕೆ ಬೆಂಬಲ ಸೂಚಿಸಿದ್ದೇವೆ. ಆದರೆ, ನಮ್ಮ ಹೋರಾಟದಿಂದ ರೋಗಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ನಮ್ಮ ಅಸೋಸಿಯೇಷನ್ ನ ಎಲ್ಲ ಔಷಧಿ ಅಂಗಡಿಗಳನ್ನು ತೆರೆಯಲಾಗಿದೆ. ಔಷಧ ಅಂಗಡಿಯಲ್ಲೇ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಹೋರಾಟಕ್ಕೆ ಸಾಂಕೇತಿಕವಾಗಿ ಬೆಂಬಲ ಸೂಚಿಸಲಾಗಿದೆ.-ಬಸವರಾಜ ಅಳ್ಳಗಿ, ಜಿಲ್ಲಾ ಫಾರ್ಮಾ ರಿಟೇಲರ್ಸ್ ಮತ್ತು ಫಾರ್ಮಾ ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಷನ್ ಅಧ್ಯಕ್ಷ.