ಸಿಬಿಎಸ್‍ಇ 10ನೇ ಕ್ಲಾಸ್‌ ಪರೀಕ್ಷೆಯಲ್ಲಿ ಎಂಕೆಇಟಿ ಶಾಲೆಗೆ ಶೇ.100 ಫಲಿತಾಂಶ

| Published : May 16 2025, 01:56 AM IST

ಸಿಬಿಎಸ್‍ಇ 10ನೇ ಕ್ಲಾಸ್‌ ಪರೀಕ್ಷೆಯಲ್ಲಿ ಎಂಕೆಇಟಿ ಶಾಲೆಗೆ ಶೇ.100 ಫಲಿತಾಂಶ
Share this Article
  • FB
  • TW
  • Linkdin
  • Email

ಸಾರಾಂಶ

ಸಿಬಿಎಸ್‍ಸಿ 10ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಹರಿಹರ ನಗರದ ಎಂಕೆಇಟಿ ಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ.

- 117 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 26 ಡಿಸ್ಟಿಂಕ್ಷನ್‍ ಸಾಧನೆ

- - -

ಹರಿಹರ: ಸಿಬಿಎಸ್‍ಸಿ 10ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಹರಿಹರ ನಗರದ ಎಂಕೆಇಟಿ ಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ.

ಶಾಲಾ ವಿದ್ಯಾರ್ಥಿನಿ ಸಾದಿಯಾ ಅಮೀನಾ ಶೇ.93 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಪಾವನಿ ಜೆ. ಶೆಟ್ಟಿ ಹಾಗೂ ಉನ್ನತಿ ತೋಲಾರ್ ಅವರು ಶೇ.92.2 ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ಪ್ರಗತಿ ಎನ್. ಸಿರಿಗಿರಿ ಶೇ.91.6 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ಅದೇ ರೀತಿ ಉತ್ಸವ್ ತೋಲಾರ್ ಶೇ.91.4, ಅದಿತಿ ಎಲ್.ಎಚ್. ಮತ್ತು ದಿಶಾ ಎಂ. ಕುಲಕರ್ಣಿ ಶೇ.90.6, ಲಿಖಿತಾ ಎಚ್.ಎ. ಶೇ.90.4 ಅಂಕ ಹಾಗೂ ಎಚ್. ಅಭಿರಾಮ್ ಶೇ.90 ಅಂಕಗಳನ್ನು ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ಈ ವರ್ಷ ಶಾಲೆಯಿಂದ ಒಟ್ಟು 117 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 26 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍, 66 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 16 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 9 ವಿದ್ಯಾರ್ಥಿಗಳು ಉತ್ತೀರ್ಣ ಶ್ರೇಣಿಯಲ್ಲಿ ತೇರ್ಗಡೆ ಆಗಿದ್ದಾರೆಂದು ಪ್ರಾಂಶುಪಾಲ ಮಂಜುನಾಥ್ ಕುಲಕರ್ಣಿ ತಿಳಿಸಿದ್ದಾರೆ.

ಶಾಲೆ ಆಡಳಿತಾಧಿಕಾರಿ ಡಾ. ಬಿ.ಟಿ. ಅಚ್ಯುತಾ, ಪ್ರಾಂಶುಪಾಲ ಮಂಜುನಾಥ್ ಕುಲಕರ್ಣಿ ಹಾಗೂ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯನಿ ಅರ್ಚನಾ ಮುಳಗುಂದ್, ಶಿಕ್ಷಕರು ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಅಭಿನಂದನೆ ತಿಳಿಸಿದ್ದಾರೆ.

- - - -15ಎಚ್‍ಆರಆರ್03:

ಶೇ.90ಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಎಂಕೆಇಟಿ, ಸಿಬಿಎಸ್‍ಇ ಶಾಲೆ ವಿದ್ಯಾರ್ಥಿಗಳು.