ಸಾರಾಂಶ
ಪಟ್ಟಣದ ವಿವಿಧ ವಾರ್ಡ್‌ಗಳ ವಿವಿಧ ಕಾಮಗಾರಿಗಳಿಗೆ ಶಾಸಕಿ ಈ. ಅನ್ನಪೂರ್ಣ ತುಕಾರಾಂ ಗುರುವಾರ ಭೂಮಿಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಸಂಡೂರು
ಪಟ್ಟಣದ ವಿವಿಧ ವಾರ್ಡ್‌ಗಳ ವಿವಿಧ ಕಾಮಗಾರಿಗಳಿಗೆ ಶಾಸಕಿ ಈ. ಅನ್ನಪೂರ್ಣ ತುಕಾರಾಂ ಗುರುವಾರ ಭೂಮಿಪೂಜೆ ನೆರವೇರಿಸಿದರು.ಕಾಮಗಾರಿಗಳ ವಿವರ:
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅನುದಾನ ₹೨.೫೦ ಕೋಟಿ ಅನುದಾನದಲ್ಲಿ ಒಂದನೇ ವಾರ್ಡಿನ ಸ್ಕಂದಪುರ ಬಡಾವಣೆಯಲ್ಲಿನ ಒಂದರಿಂದ ನಾಲ್ಕನೇ ಮುಖ್ಯ ಹಾಗೂ ಅಡ್ಡರಸ್ತೆಗಳಲ್ಲಿ ಸಿಸಿ ರಸ್ತೆ ಕಾಮಗಾರಿ, ಕೆಕೆಆರ್‌ಡಿಬಿ ಮೈಕ್ರೋ ಯೋಜನೆ ಅನುದಾನ ₹೧ ಕೋಟಿ ವೆಚ್ಚದಲ್ಲಿ ಶ್ರೀನಿವಾಸ ಟಾಕೀಸ್‌ದಿಂದ ಕನಕಭವನದ ನಿವೇಶನದವರೆಗೆ, ಬಚಾವತ್ ಮನೆಯಿಂದ ಹಾಸ್ಟೆಲ್‌ವರೆಗೆ ಮತ್ತು ಹಾಸ್ಟೆಲ್‌ದಿಂದ ಜಿಲಾನ್ ಮನೆಯವರೆಗೆ ರಸ್ತೆ ಅಭಿವೃದ್ಧಿ.ಕೆಕೆಆರ್‌ಡಿಬಿ ಮೈಕ್ರೋ ಯೋಜನೆ ಅನುದಾನ ₹೧.೧೦ ಕೋಟಿ ವೆಚ್ಚದಲ್ಲಿ ಕೃಷ್ಣಾನಗರ ಆಶ್ರಯ ಕಾಲನಿಯ ಚನ್ನಾದಾಸರ ಕಾಲನಿಯಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ, ₹೬೫ ಲಕ್ಷ ವೆಚ್ಚದಲ್ಲಿ ೩ನೇ ವಾರ್ಡಿನ ಜಾಮಿಯಾ ಮಸೀದಿಯಿಂದ ಬಂಗಾಳಿ ಗಿಡ್ಡನ ಮನೆಯವರೆಗೆ ಮತ್ತು ಅಗಸರ ಓಣಿಯಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ, ₹೬೦ ಲಕ್ಷ ವೆಚ್ಚದಲ್ಲಿ ಬಳ್ಳಾರಿ ಸಂಡೂರು ಮುಖ್ಯ ರಸ್ತೆಯಿಂದ ವಿರಕ್ತಮಠದವರೆಗಿನ ಚರಂಡಿಗೆ ಕವರ್ ಸ್ಲಾಬ್ ಮತ್ತು ರಸ್ತೆ ಬದಿಯಲ್ಲಿ ಫೇವರ್ ಅಳವಡಿಸುವ ಕಾಮಗಾರಿ.
₹೩೦.೦೨ ಲಕ್ಷ ವೆಚ್ಚದಲ್ಲಿ ವಿಠೋಬ ದೇವಸ್ಥಾನದಿಂದ ಹಳ್ಳದವರೆಗೆ ರಾಜ ಕಾಲುವೆಗೆ ಕವರ್ ಸ್ಲ್ಯಾಬ್ ಅಳವಡಿಸುವುದು, ₹೩೫ ಲಕ್ಷ ವೆಚ್ಚದಲ್ಲಿ ಪೊಲೀಸ್ ಠಾಣೆ ಪಕ್ಕದಿಂದ ಕಬರ್ ಸ್ಥಾನದವರೆಗೆ ಮತ್ತು ಕಪ್ಪಗಲ್‌ಕುಂಟೆ ರಸ್ತೆಯಿಂದ ಚರ್ಚ್ ಶಾಲೆ ರಸ್ತೆವರೆಗಿನ ಚರಂಡಿಗೆ ಕವರ್ ಸ್ಲ್ಯಾಬ್ ಅಳವಡಿಸಿ, ಫೇವರ್ ಅಳವಡಿಸುವ ಕಾಮಗಾರಿ, ೪೫ ಲಕ್ಷ ವೆಚ್ಚದಲ್ಲಿ ಸಾಧನಾ ಬೋಯಿಟೆ ಮನೆಯಿಂದ ತಳವಾರ ವೆಂಕಟೇಶ ಮತ್ತು ಕೆ.ಜಿ. ಸುಬ್ರಮಣ್ಯ ಮನೆಯವರೆಗೆ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಹಾಗೂ ₹೯೦ ಲಕ್ಷ ವೆಚ್ಚದಲ್ಲಿ ಶ್ರೀಶೈಲೇಶ್ವರ ವಿದ್ಯಾಕೇಂದ್ರ ಶಾಲೆ ಹಿಂಭಾಗದ ಅಂಗನವಾಡಿಯಿಂದ ವೆಂಕಟೇಶ್ವರ ದೇವಸ್ಥಾನದವರೆಗೆ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ.ಇದೇ ಸಂದರ್ಭ ಶಾಸಕರು ₹೪೮.೧೬ ಲಕ್ಷ ವೆಚ್ಚದಲ್ಲಿ ೧೪ನೇ ವಾರ್ಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ ಎರಡು ನೂತನ ಕೊಠಡಿ ಉದ್ಘಾಟಿಸಿದರು.
ಪುರಸಭೆ ಅಧ್ಯಕ್ಷ ಎಸ್. ಸಿರಾಜ್ ಹುಸೇನ್, ಉಪಾಧ್ಯಕ್ಷೆ ಎಂ.ಸಿ. ಲತಾ, ವಿವಿಧ ವಾರ್ಡ್‌ಗಳ ಸದಸ್ಯರು, ಮುಖಂಡರಾದ ಆಶಾಲತಾ ಸೋಮಪ್ಪ, ಶೈಲಜಾ ನಿಕ್ಕಂ, ಕೆ. ಸತ್ಯಪ್ಪ, ಜಯರಾಂ, ಬಿ.ಜಿ. ಸಿದ್ದನಗೌಡ ಮುಂತಾದವರು ಉಪಸ್ಥಿತರಿದ್ದರು.