ಸಾರಾಂಶ
ಬಾಗೂರು ಹೋಬಳಿ ಕೇಂದ್ರದಲ್ಲಿ ಶಾಸಕ ಸಿಎನ್ ಬಾಲಕೃಷ್ಣ ಅವರ 56ನೇ ಹುಟ್ಟುಹಬ್ಬವನ್ನು ಜೆಡಿಎಸ್ ಮುಖಂಡರು ಕಾರ್ಯಕರ್ತರು ಅರ್ಥಪೂರ್ಣವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಬಾಗೂರು ಶಿವಣ್ಣ ಮಾತನಾಡಿ, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಸತತ 3 ಬಾರಿ ಶಾಸಕರಾಗುವ ಮೂಲಕ ತಾಲೂಕಿನ ಜನರ ವಿಶ್ವಾಸ ಗಳಿಸಿದ್ದಾರೆ. ಮುಂಬರುವ ದಿನಗಳಲ್ಲೂ ಅವರಿಗೆ ದೇವರು ರಾಜಕೀಯವಾಗಿ ಹೆಚ್ಚು ಶಕ್ತಿ ನೀಡಲಿ ಉನ್ನತ ಸ್ಥಾನಮಾನ ದೊರಕಿಸಲಿ ಎಂದು ಹಾರೈಸಿದರು.
ಬಾಗೂರು: ಹೋಬಳಿ ಕೇಂದ್ರದಲ್ಲಿ ಶಾಸಕ ಸಿಎನ್ ಬಾಲಕೃಷ್ಣ ಅವರ 56ನೇ ಹುಟ್ಟುಹಬ್ಬವನ್ನು ಜೆಡಿಎಸ್ ಮುಖಂಡರು ಕಾರ್ಯಕರ್ತರು ಅರ್ಥಪೂರ್ಣವಾಗಿ ಆಚರಿಸಿದರು.
ಹೋಬಳಿ ಕೇಂದ್ರದ ಶ್ರೀ ಸಂತೇಕಾಳೇಶ್ವರಿ ಚಿಕ್ಕಮ್ಮ ದೇವಾಲಯದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣರವರು ದೇವರಿಗೆ ಹುಟ್ಟುಹಬ್ಬ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿದರು. ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಶಾಸಕರಿಗೆ ಹುಟ್ಟುಹಬ್ಬದ ಶುಭಕೋರಿ ಶಾಸಕರಿಂದ ಕೇಕ್ ಕತ್ತರಿಸಿ ಸಂಭ್ರಮ ಪಟ್ಟರು.ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಬಾಗೂರು ಶಿವಣ್ಣ ಮಾತನಾಡಿ, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಸತತ 3 ಬಾರಿ ಶಾಸಕರಾಗುವ ಮೂಲಕ ತಾಲೂಕಿನ ಜನರ ವಿಶ್ವಾಸ ಗಳಿಸಿದ್ದಾರೆ. ಮುಂಬರುವ ದಿನಗಳಲ್ಲೂ ಅವರಿಗೆ ದೇವರು ರಾಜಕೀಯವಾಗಿ ಹೆಚ್ಚು ಶಕ್ತಿ ನೀಡಲಿ ಉನ್ನತ ಸ್ಥಾನಮಾನ ದೊರಕಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಚನ್ನರಾಯಪಟ್ಟಣ ಪುರಸಭಾ ಅಧ್ಯಕ್ಷ ಮೋಹನ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಪೇಗೌಡ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಓಬಳಾಪುರ ಬಸವರಾಜ್, ಯುವ ಮುಖಂಡರಾದ ಭುವನಹಳ್ಳಿ ಯೋಗೇಶ್, ಮರುವನಹಳ್ಳಿ ಉದ್ಯಮಿ ದೇವರಾಜ್, ಸ್ಟುಡಿಯೋ ರಘು, ಮಲ್ಲೇಶ್, ಹರೀಶ್, ಮನು, ಸೇರಿದಂತೆ ಇತರರು ಹಾಜರಿದ್ದರು.ಫೋಟೋ ಸುದ್ದಿ :