ಸಾರಾಂಶ
ಬಾದಾಮಿ: ಸಮೀಪದ ಬನಶಂಕರಿ ದೇವಸ್ಥಾನಕ್ಕೆ ತೆರಳುವ 5 ಕಿ.ಮೀ ರಸ್ತೆಯ ಇಕ್ಕೆಲುಗಳಲ್ಲಿ ಹಾಕಲಾಗಿರುವ ಬೀದಿ ದೀಪಗಳಿಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಶುಕ್ರವಾರ ಸಂಜೆ ಚಾಲನೆ ನೀಡಿದರು.ಜ.25ರಂದು ಸುಪ್ರಸಿದ್ಧ ಬಾದಾಮಿ-ಬನಶಂಕರಿದೇವಿ ಜಾತ್ರೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಜರುಗಿದ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಬೀದಿ ದೀಪಗಳನ್ನು ಕೂಡಲೇಹಾಕಬೇಕು. ಭಕ್ತಾಧಿಗಳಿಗೆ ಬೆಳಕಿನ ವ್ಯವಸ್ಥೆ ಮಾಡಬೇಕೆಂದು ಸೂಚನೆ ನೀಡಿದ್ದರು. ಲೋಕೋಪಯೋಗಿ ಇಲಾಖೆಯ ₹ 2 ಕೋಟಿ ವೆಚ್ಚದಲ್ಲಿ 20 ಹೈಮಾಸ್ಟ್, 150 ಬೀದಿದೀಪಗಳನ್ನು ನಗರದ ಅಂಬೇಡ್ಕರ್ ವೃತ್ತದಿಂದ ಹಾದಿಮನಿ ಪೆಟ್ರೋಲ್ ಬಂಕ್‌ವರೆಗೆ ಬನಶಂಕರಿ ದೇವಸ್ಥಾನಕ್ಕೆ ತೆರಳುವ ಪಾದಯಾತ್ರಿಗಳಿಗೆ ಸಂಚರಿಸಲು ಅನಕೂಲವಾಗಲಿದೆ.
ಕನ್ನಡಪ್ರಭವಾರ್ತೆ ಬಾದಾಮಿ
ಸಮೀಪದ ಬನಶಂಕರಿ ದೇವಸ್ಥಾನಕ್ಕೆ ತೆರಳುವ 5 ಕಿ.ಮೀ ರಸ್ತೆಯ ಇಕ್ಕೆಲುಗಳಲ್ಲಿ ಹಾಕಲಾಗಿರುವ ಬೀದಿ ದೀಪಗಳಿಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಶುಕ್ರವಾರ ಸಂಜೆ ಚಾಲನೆ ನೀಡಿದರು.ಜ.25ರಂದು ಸುಪ್ರಸಿದ್ಧ ಬಾದಾಮಿ-ಬನಶಂಕರಿದೇವಿ ಜಾತ್ರೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಜರುಗಿದ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಬೀದಿ ದೀಪಗಳನ್ನು ಕೂಡಲೇಹಾಕಬೇಕು. ಭಕ್ತಾಧಿಗಳಿಗೆ ಬೆಳಕಿನ ವ್ಯವಸ್ಥೆ ಮಾಡಬೇಕೆಂದು ಸೂಚನೆ ನೀಡಿದ್ದರು.
ಲೋಕೋಪಯೋಗಿ ಇಲಾಖೆಯ ₹ 2 ಕೋಟಿ ವೆಚ್ಚದಲ್ಲಿ 20 ಹೈಮಾಸ್ಟ್, 150 ಬೀದಿದೀಪಗಳನ್ನು ನಗರದ ಅಂಬೇಡ್ಕರ್ ವೃತ್ತದಿಂದ ಹಾದಿಮನಿ ಪೆಟ್ರೋಲ್ ಬಂಕ್‌ವರೆಗೆ ಬನಶಂಕರಿ ದೇವಸ್ಥಾನಕ್ಕೆ ತೆರಳುವ ಪಾದಯಾತ್ರಿಗಳಿಗೆ ರಸ್ತೆಯಲ್ಲಿ ಸಂಚರಿಸಲು ಬೆಳಕಿನ ಅನುಕೂಲವಾಗಲಿದೆ.ಈ ಯೋಜನೆ ಸಿಎಂ ಸಿದ್ದರಾಮಯ್ಯ ಬಾದಾಮಿ ಮತಕ್ಷೇತ್ರದ ಶಾಸಕರಾಗಿದ್ದಾಗ ಮಂಜೂರಿ ಮಾಡಿಸಿದ್ದೀರಿ. ಇದೀಗ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ವಿಶೇಷ ಆಸಕ್ತಿ ವಹಿಸಿ ಜಾತ್ರೆಯ ಸಂದರ್ಭದಲ್ಲಿ ಬೆಳಗುವಂತೆ ಮಾಡಿದ್ದು, ಭಕ್ತರಿಗೆ ಮತ್ತು ಸ್ಥಳೀಯ ನಾಗರಿಕರಿಗೆ ಸಂತಸ ತಂದಿದೆ.
ಜಿಪಂ ಸಿಇಒ ಶಶಿಧರ ಕುರೇರ, ಪುರಸಭೆ ಸದಸ್ಯರಾದ ಮಂಜುನಾಥ ಹೊಸಮನಿ, ಶಂಕರ ಕನಕಗಿರಿ, ಪಾಂಡು ಕಟ್ಟಿಮನಿ, ಫಾರೂಕ್ ದೊಡಮನಿ, ಸಂಜಯ ಬರಗುಂಡಿ, ಶಿವು ಹಿರೇಮಠ, ರಜಾಕ್ ರಾಜೂರ, ಬಸವರಾಜ ತಳವಾರ, ಗೋಪಾಲ ಜಾಧವ ಸೇರಿದಂತೆ ಲೋಕೋಪಯೋಗಿ ಇಲಾಖೆಯ ಎಇಇ ದೇವೆಂದ್ರಗೌಡ ಮೇಟಿ, ಅಭಿಯಂತರ ಮಂಜುನಾಥ ಚಿತ್ತರಗಿ, ಪುರಸಭೆ ಮುಖ್ಯಾಧಿಕಾರಿ ಬಂದೆನವಾಜ್ ಡಾಂಗೆ, ಗುತ್ತಿಗೆದಾರ ಸುರೇಶ ಇತರರು ಉಪಸ್ಥಿತರಿದ್ದರು.