ವಿಶೇಷ ಲಾರ್ವ ಸಮೀಕ್ಷೆ ಜಾಗೃತಿ ಜಾಥಾಕ್ಕೆ ಶಾಸಕ ಬಿ.ಪಿ.ಹರೀಶ್ ಚಾಲನೆ

| Published : Jun 30 2024, 12:47 AM IST

ವಿಶೇಷ ಲಾರ್ವ ಸಮೀಕ್ಷೆ ಜಾಗೃತಿ ಜಾಥಾಕ್ಕೆ ಶಾಸಕ ಬಿ.ಪಿ.ಹರೀಶ್ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಹರಿಹರದ ಹರ್ಲಾಪುರದಲ್ಲಿ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಲಾರ್ವಾ ಜಾಗೃತಿ ಜಾಥಾಕ್ಕೆ ಶಾಸಕ ಬಿ.ಪಿ.ಹರೀಶ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಹರಿಹರ: ಸಾರ್ವಜನಿಕರು ಹಾಗೂ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಹರಿಹರ ತಾಲೂಕನ್ನು ಲಾರ್ವ ಮುಕ್ತ ಮಾಡುವಂತೆ ಶಾಸಕ ಬಿ.ಪಿ.ಹರೀಶ್ ಮನವಿ ಮಾಡಿದರು.

ತಾಲೂಕು ಆರೋಗ್ಯ ಇಲಾಖೆ ವತಿಯಿಂದ ನಗರದ ಪಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿ ಪ್ರದೇಶಗಳಲ್ಲಿ ಹಮ್ಮಿಕೊಂಡಿದ್ದ ವಿಶೇಷ ಲಾರ್ವ ಸಮೀಕ್ಷೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಅನಂತರ ಅವರು ಮಾತನಾಡಿದರು. ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗಳಿಗೆ ಭೇಟಿ ಮಾಡಿ, ಡೆಂಘೀಜ್ವರ ಹರಡುವ ಬಗೆ ಹಾಗೂ ರೋಗ ಲಕ್ಷಣಗಳು- ನಿಯಂತ್ರಣದ ಬಗ್ಗೆ ಮಾಹಿತಿ ನೀಡಬೇಕು ಎಂದರು.

ದಾವಣಗೆರೆ ಜಿಲ್ಲೆಯ ಒಬ್ಬ ವಿದ್ಯಾರ್ಥಿನಿ ಡೆಂಘೀಜ್ವರಕ್ಕೆ ಬಲಿಯಾಗಿದ್ದು, ತ್ವರಿತ ಗತಿಯಲ್ಲಿ ಸಾರ್ವಜನಿಕರಿಗೆ ಮುಂಜಾಗೃತಾ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು. ಆ ಮೂಲಕ ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದು ಇಲಾಖೆ ಸಿಬ್ಬಂದಿಗೆ ಸೂಚನೆ ನೀಡಿದರು.

ಇದೇ ವೇಳೆ ಶಾಸಕರು ಹರ್ಲಾಪುರದ ಕೆಲವು ಮನೆಗಳಿಗೆ ಭೇಟಿ ನೀಡಿ, ಸ್ವಚ್ಛತೆ ಪರಿಶೀಲಿಸಿದರು. ಮಳೆಗಾಲ ಆರಂಭವಾಗಿದ್ದು, ಮನೆ, ಸುತ್ತಮುತ್ತಲ ಜಾಗಗಳಲ್ಲಿ ಆದಷ್ಟು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಲಾರ್ವ ಉತ್ಪತ್ತಿಗೆ ಅವಕಾಶ ನೀಡದಂತೆ ಜಾಗೃತಿ ಮೂಡಿಸಿದರು.

ನಗರಸಭಾ ಸದಸ್ಯ ಸೈಯದ್ ಅಲೀಂ, ಟಿಎಚ್‌ಒ ಡಾ.ಅಬ್ದುಲ್ ಖಾದರ್, ಇಒ ರಾಮಕೃಷ್ಣಪ್ಪ, ಡಾ.ವಿಶ್ವನಾಥ್ ಕುಂದಗೋಳ ಮಠ, ಡಾ.ಕಲ್ಲೇಶ್, ಡಾ.ಗಿರಿಜಾ, ಎಂ.ಉಮ್ಮಣ್ಣ, ಶಶಿಕಾಂತ್, ಸುಧಾ, ಶಾಂತಮ್ಮ, ಅಶ್ವಿನಿ, ಕವಿತಾ, ವಸಂತ, ಮಂಜುನಾಥ, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.