ಶಾಸಕರ ದರ್ಶನ್ ಪುಟ್ಟಣ್ಣಯ್ಯ ಪತ್ನಿ ಆರೋಗ್ಯ ಸುಧಾರಣೆಗಾಗಿ ಮೃತ್ಯುಂಜಯ ಹೋಮ

| Published : Aug 28 2024, 12:52 AM IST

ಶಾಸಕರ ದರ್ಶನ್ ಪುಟ್ಟಣ್ಣಯ್ಯ ಪತ್ನಿ ಆರೋಗ್ಯ ಸುಧಾರಣೆಗಾಗಿ ಮೃತ್ಯುಂಜಯ ಹೋಮ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕ ದರ್ಶನ್ ಪುಟ್ಟಣ್ಣಯ್ಯ ಪತ್ನಿ ಶಿಲ್ಪಾ ಆರೋಗ್ಯ ಸುಧಾರಣೆಗಾಗಿ ಡಾಮಡಹಳ್ಳಿಯ ರೈತಸಂಘ ಕಾರ್ಯಕರ್ತರು ಮೃತ್ಯುಂಜಯ ಹೋಮ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಅನಾರೋಗ್ಯಕ್ಕೀಡಾಗಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಪತ್ನಿ ಶಿಲ್ಪಾರ ಆರೋಗ್ಯ ಸುಧಾರಣೆಗಾಗಿ ತಾಲೂಕಿನ ಡಾಮಡಹಳ್ಳಿಯ ರೈತಸಂಘ ಕಾರ್ಯಕರ್ತರು ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಸೋಮವಾರ ಮೃತ್ಯುಂಜಯ ಹೋಮ ನೆರವೇರಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಅರ್ಚಕರಾದ ನಾಗೇಂದ್ರ ಮತ್ತು ವೇಣು ಅವರ ತಂಡ ಪೂಜಾ ಕೈಂಕರ್ಯಗಳನ್ನು ಕೈಗೊಂಡರು. ಆ ಬಳಿಕ ಶಿಲ್ಪಾ ಅವರ ಹೆಸರಿನಲ್ಲಿ ಮೃತ್ಯುಂಜಯ ಹೋಮ ನೆರವೇರಿಸಿ ಪೂರ್ಣಾಹುತಿ ಸಲ್ಲಿಸಿದ ನಂತರ ದೇವರಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ದರ್ಶನ್ ಪುಟ್ಟಣ್ಣಯ್ಯ ಕುಟುಂಬದ ಪರವಾಗಿ ಅವರ ಸಹೋದರ ರಾಘವ ಪ್ರಕಾಶ್ ಯಾಗದಲ್ಲಿ ಪಾಲ್ಗೊಂಡು ತಮ್ಮ ಅತ್ತಿಗೆಯ ಆರೋಗ್ಯ ಚೇತರಿಕೆಯಾಗಿ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಹೋಮಕ್ಕೆ ಪೂರ್ಣಹುತಿ ಸಲ್ಲಿಸಿದರು.

ಪೂಜಾ ಕೈಕಂರ್ಯ ಮುಗಿದ ಬಳಿಕ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು. ಬಳಿಕ ಜನರಿಗೆ ಅನ್ನ ಸಂತಾರ್ಪಣೆ ಮಾಡಲಾಯಿತು.

ಈ ವೇಳೆ ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಎಣ್ಣೆಹೊಳೆಕೊಪ್ಪಲು ಮಂಜು, ವೈ.ಜಿ.ರಘು, ಕ್ಯಾಂಟೀನ್ ಜಯರಾಮು, ಡಿ.ಕೆ.ಜಯರಾಮು, ಸ್ವಾಮಿಗೌಡ, ಅಶೋಕ್, ಗೌಡಪ್ಪ ಇತರರು ಇದ್ದರು.ಕೆಆರ್ ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ

ಇಂದಿನ ಮಟ್ಟ – 123.76 ಅಡಿ

ಒಳ ಹರಿವು – 4,537 ಕ್ಯುಸೆಕ್

ಹೊರ ಹರಿವು – 4,853 ಕ್ಯುಸೆಕ್

ನೀರಿನ ಸಂಗ್ರಹ – 48.008 ಟಿಎಂಸಿ