ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ರೈತರ ಜೀವನಾಡಿ ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಹಾಗೂ ಕಾವೇರಿ ಮಾತೆಗೆ ಪೂಜೆ ಸಲ್ಲಿಸುವ ಕಾರ್‍ಯಕ್ರಮಕ್ಕೆ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗೈರಾಗಿ ವಿದೇಶಕ್ಕೆ ತೆರಳಿದ್ದಾರೆ.ಚುನಾವಣೆಯಲ್ಲಿ ಗೆದ್ದ ನಂತರ ರೈತರು ಧ್ವನಿಯಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದ ದರ್ಶನ್ ಪುಟ್ಟಣ್ಣಯ್ಯ, ಕ್ಷೇತ್ರದಲ್ಲಿ ಇದ್ದು ರೈತರ ಪರವಾಗಿ ಕೆಲಸ ಮಾಡಿದಕ್ಕಿಂತೆ ವಿದೇಶಕ್ಕೆ ತೆರಳುತ್ತಿರುವುದು ಹೆಚ್ಚಾಗಿದೆ ಎಂದು ಕ್ಷೇತ್ರದ ಜನತೆ ಆಕ್ರೋಶ ಹೊರಹಾಕಿದ್ದಾರೆ.
ಕೆಆರ್‌ಎಸ್ ಅಣೆಕಟ್ಟೆ ವರುಣನ ಕೃಪೆಯಿಂದ ಭರ್ತಿಯಾಗಿದ್ದು ಅದಕ್ಕೆ ಬಾಗಿನ ಅರ್ಪಿಸಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಜಿಲ್ಲೆಯ ಸಚಿವರು, ಶಾಸಕರು ಆಗಮಿಸಿ ಕಾವೇರಿಗೆ ಬಾಗಿನ ಅರ್ಪಿಸುವ ಜತೆಗೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ.ಕಳೆದ ಶುಕ್ರವಾರ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾವೇರಿಕೊಳ್ಳದ ವ್ಯಾಪ್ತಿಯ ನಾಲೆಗಳ ಆಧುನೀಕರಣಕ್ಕೆ ಸಂಬಂಧಿಸಿದಂತೆ ಕಾವೇರಿಕೊಳ್ಳದ ಶಾಸಕರ ಸಭೆಗೂ ಸಹ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಗೈರಾಗಿದ್ದಾರೆ. ಶಾಸಕರಾದ ಮೊದಲ ಬಾರಿಗೆ ಬಾಗಿನ ಅರ್ಪಿಸುವ ಕಾರ್‍ಯಕ್ರಮಕ್ಕೆ ಅವಕಾಶ ಸಿಕ್ಕಿದ್ದರೂ ಸಹ ವಿದೇಶಕ್ಕೆ ತೆರಳಿ ಗೈರು ಹಾಜರಾಗುವ ಮೂಲಕ ಜನರ, ರೈತರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಗೆದ್ದ ಬಳಿಕ 7ನೇ ಬಾರಿಗೆ ವಿದೇಶಕ್ಕೆ ತೆರಳಿದ್ದಾರೆ. ಶಾಸಕರಾದ ಬಳಿಕ ಸರ್ಕಾರಿ ಕಾರ್‍ಯಕ್ರಮಗಳಲ್ಲಿ ಪಾಲ್ಗೊಂಡಿದ್ದೆ ಕಡಿಮೆ. ಮೊದಲ ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಕೆಂಪೇಗೌಡ ಜಯಂತಿ ಸೇರಿದಂತೆ ಬಹುತೇಕ ಜಯಂತಿಗಳಿಗೆ ಗೈರಾಗಿರುವುದು ಕ್ಷೇತ್ರದಲ್ಲಿ ಶಾಸಕರ ವಿರುದ್ಧ ಸಾಕಷ್ಟು ವಿರೋಧವ್ಯಕ್ತವಾಗುತ್ತಿದೆ.ನದಿ ಪಾತ್ರದ ಹಲವು ಗ್ರಾಮಗಳಲ್ಲಿ ನೆರೆ ಪರಿಸ್ಥಿತಿ ಮುನ್ನಚ್ಚರಿಕೆ ವಹಿಸಲು ಸೂಚನೆಕನ್ನಡಪ್ರಭ ವಾರ್ತೆ ಮಂಡ್ಯಕೆಆರ್‌ಎಸ್ ಅಣೆಕಟ್ಟೆಯಿಂದ 1.50 ಲಕ್ಷಕ್ಕೂ ಹೆಚ್ಚಿನ ಕ್ಯುಸೆಕ್ ನೀರನ್ನು ಕಾವೇರಿ ನದಿ ಬಿಡುತ್ತಿರುವುದರಿಂದ ಜಿಲ್ಲೆಯ ಹಲವು ಗ್ರಾಮಗಳಲ್ಲಿ ನೆರೆ, ಪ್ರವಾಹ ಪರಿಸ್ಥಿತಿ ಉಂಟಾಗಲಿದೆ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಿಂದ ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಮುನ್ನೆಚ್ಚರಿಕೆಯಾಗಿ ಜಲಾಶಯದಿಂದ 1,50,000 ಕ್ಯುಸೆಕ್ ನೀರು ಬಿಡಲು ನಿರ್ಧರಿಸಲಾಗಿದೆ.ಶ್ರೀರಂಗಪಟ್ಟಣ ತಾಲೂಕಿನ 53 ಗ್ರಾಮಗಳು, ಪಾಂಡವಪುರ ತಾಲೂಕಿನ 15 ಗ್ರಾಮಗಳು ಹಾಗೂ ಮಳವಳ್ಳಿ ತಾಲೂಕಿನ 21 ಗ್ರಾಮಗಳು ಹಾಗೂ ಹೇಮಾವತಿ ಜಲಾನಯನ ಪ್ರದೇಶದ ಕೆ.ಆರ್.ಪೇಟೆ ತಾಲೂಕಿನ 3 ಗ್ರಾಮಗಳು ಸೇರಿ 92 ಗ್ರಾಮಗಳಲ್ಲಿ ನೆರೆ, ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ ಎಂದು ಗುರುತಿಸಲಾಗಿದೆ.ಪ್ರವಾಹ ಪರಿಸ್ಥಿತಿ ಎದುರಿಸಲು ಕಂಟ್ರೋಲ್ ರೂಂಗಳನ್ನು ರಚಿಸಿದ್ದು, ಜಿಲ್ಲಾಧಿಕಾರಿ ಕಚೇರಿ ದೂ-08232-224655, ಮಂಡ್ಯ ತಾಲೂಕು ದೂ-08232-291655, ಮದ್ದೂರು- 08232-291466, ಮಳವಳ್ಳಿ 08231-242267, ಪಾಂಡವಪುರ - 08236-255128, ಶ್ರೀರಂಗಪಟ್ಟಣ - 08236 - 253001, ನಾಗಮಂಗಲ 08234-298105, ಕೆ.ಆರ್.ಪೇಟೆ 08230 - 262227 ಹಾಗೂ ಕೃಷ್ಣರಾಜ ಸಾಗರ ಕಾರ್ಯಪಾಲಕ ಅಭಿಯಂತರು - 08236-257976, ಬನ್ನೂರು ಕಾರ್ಯಪಾಲಕ ಅಭಿಯಂತರರು - 9480442830, ಮಂಡ್ಯ ಕಾರ್ಯಪಾಲಕ ಅಭಿಯಂತರರು - 9742454353, ಹೆಚ್ ಎಲ್ ಬಿಸಿ ಕೆಆರ್ ಪೇಟೆ ಕಾರ್ಯಪಾಲಕ ಅಭಿಯಂತರರು - 9242229448 ಸಂಪರ್ಕಿಸಬಹುದು.ಟೋಲ್ ಫ್ರೀ ನಂಬರ್- 1912, 9448994777, 888,999, ಕಾರ್ಯಪಾಲಕ ಅಭಿಯಂತರರು ಶ್ರೀರಂಗಪಟ್ಟಣ ಮತ್ತು ಪಾಂಡವಪುರ - 9448994893, ಮಳವಳ್ಳಿ ಕಾರ್ಯಪಾಲಕ ಅಭಿಯಂತರರು - 9448994828, ಕೆ.ಆರ್.ಪೇಟೆ ಕಾರ್ಯಪಾಲಕ ಅಭಿಯಂತರರು - 9480844740 ತೆರೆಯಲಾಗಿದೆ.
ಕೆಆರ್ ಎಸ್ - ಕಬಿನಿಯಿಂದ 2 ಲಕ್ಷ ಕ್ಯುಸೆಕ್ ನೀರು ಬಿಡುವ ಸಾಧ್ಯತೆಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈಗಾಗಲೇ ಕೆಆರ್ ಎಸ್ ನಿಂದ 1,10,000 ಕ್ಯುಸೆಕ್ ಹಾಗೂ ಕಬಿನಿ ಜಲಾಶಯದಿಂದ 80 ಸಾವಿರ ಕ್ಯುಸೆಕ್ ಗೂ ಅಧಿಕ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ. ನೀರಿನ ಪ್ರಮಾಣವು ಸುಮಾರು 2 ಲಕ್ಷ ಕ್ಯುಸೆಕ್ ಗಿಂತ ಏರಿಕೆಯಾಗುವ ಸಂಭವವಿದೆ.
ಆದ್ದರಿಂದ ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಜನರು ಹಾಗೂ ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿರುವ ನದಿ ದಂಡೆಯ ಸಾರ್ವಜನಿಕರು ತಮ್ಮ ಆಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು.ಸೂಕ್ತ ಮುಂಜಾಗೃತೆ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಲು ಸಂಬಂಧಪಟ್ಟ ಜಿಲ್ಲಾಡಳಿತದ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಕಾವೇರಿ ನೀರಾವರಿ ನಿಗಮದ ಅಧೀಕ್ಷಕರು ತಿಳಿಸಿದ್ದಾರೆ.