ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಹೊಸಕನ್ನಂಬಾಡಿಯ ಶ್ರೀವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸೇರಿದಂತೆ ತಾಲೂಕಿನ ವಿವಿಧ ಗ್ರಾಮದಲ್ಲಿ ಅಂದಾಜು 5.45 ಕೋಟಿ ರು. ವೆಚ್ಚದ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಶನಿವಾರ ಭೂಮಿ ಪೂಜೆ ನೆರವೇರಿಸಿದರು.ಹೊಸಕನ್ನಂಬಾಡಿ ಗ್ರಾಮದಿಂದ ಕೆಆರ್‌ಎಸ್ ಹಿನ್ನೀರು ಶ್ರೀವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಯೋಜನೆಯಡಿ ಅಂದಾಜು 4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಚಾಲನೆ ನೀಡಿದರು.
ಇದೇ ವೇಳೆ ಕೆಆರ್‌ಐಡಿಎಲ್ ನಿಗಮದಿಂದ ಚಲುವರಸನಕೊಪ್ಪಲು ಗ್ರಾಮದಲ್ಲಿ 10 ಲಕ್ಷ, ಚಿಕ್ಕಾಯರಹಳ್ಳಿಯಲ್ಲಿ 35 ಲಕ್ಷ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ದಿ, 1 ಕೋಟಿ ವೆಚ್ಚದಲ್ಲಿ ಅಶೋಕನಗರ, ಮೊಳ್ಳೇನಹಳ್ಳಿ ಹಾಗೂ ಇಳ್ಳೇನಹಳ್ಳಿ ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆ ಅಭಿವೃದ್ದಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.ಬಳಿಕ ಮಾತನಾಡಿದ ಶಾಸಕ ದರ್ಶನ್‌ಪುಟ್ಟಣ್ಣಯ್ಯ, ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ತಾಲೂಕಿನ ಹೊಸಕನ್ನಂಬಾಡಿ ಗ್ರಾಮದಿಂದ ಕೆಆರ್‌ಎಸ್ ಹಿನ್ನೀರು ಶ್ರೀವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದರು.
ಈ ರಸ್ತೆಯಲ್ಲಿ ನಿತ್ಯ ನೂರಾರು ಪ್ರವಾಸಿಗರು ಓಡಾಡುತ್ತಿದ್ದರು. ರಸ್ತೆ ಗುಂಡಿಬಿದ್ದು ಜನರು ಸಂಚರಿಸಲಾಗದೆ ಪರದಾಡುವ ಸ್ಥಿತಿ ಎದುರಾಗಿತ್ತು. ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಸ್ಥಳೀಯರಿಂದ ಸಾಕಷ್ಟು ಒತ್ತಡ ಇದ್ದ ಕಾರಣ ಲೋಕೋಪಯೋಗಿ ಇಲಾಖೆಯಿಂದ 4 ಕೋಟಿ ಅನುದಾನ ಬಿಡುಗಡೆ ಮಾಡಿಸಿ ರಸ್ತೆಯನ್ನು ಅಭಿವೃದ್ಧಿಪಡಿಸಲು ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.ಜತೆಗೆ ಅಭಿವೃದ್ಧಿ ಹಲವು ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆಗಳನ್ನು ಅಭಿವೃದ್ಧಿಗೆ ಗುದ್ದಲಿ ಪೂಜೆಸಲ್ಲಿಸಲಾಗಿದೆ. ಸಾರ್ವಜನಿಕರು ಒಗ್ಗಟ್ಟಿನಿಂದ ರಸ್ತೆಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು.
ಚಿಕ್ಕಾಯರಹಳ್ಳಿ ಕಾವೇರಿ ಡ್ಯಾಂ ಪಕ್ಕದಲ್ಲಿಯೇ ಇದ್ದರೂ ಕುಡಿಯಲು ಕಾವೇರಿ ನೀರಿನ ಅನುಕೂಲ ಮಾಡಿಕೊಟ್ಟಿಲ್ಲ ಎಂದು ಮನವಿ ಮಾಡಿದ್ದಾರೆ. ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾವೇರಿ ನದಿ ನೀರು ಒದಗಿಸಿಕೊಡುವಂತೆ ಸೂಚನೆ ನೀಡಲಾಗಿದೆ ಎಂದರು.ಬೇಸಿಗೆ ಕ್ರಮಿಸುತ್ತಿರುವುದರಿಂದ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗದಂತೆ ಕ್ರಮವಹಿಸಲಾಗುತ್ತಿದೆ. ಬೋರ್‌ವೆಲ್‌ಗಳ ಟಿಸಿ ಸುಟ್ಟು ಹೋಗುತ್ತಿರುವ ಸಮಸ್ಯೆಗಳು ಹೆಚ್ಚಾಗಿರುವುದರಿಂದ ಅಗತ್ಯವಾಗಿ ಬೇಕಿರುವ ಟಸಿಗಳನ್ನು ಒದಗಿಸಿಕೊಂಡುವಂತೆ ಸೆಸ್ಕ್ ಅಧ್ಯಕ್ಷರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದರು.
ಈ ವೇಳೆ ಕಟ್ಟೇರಿ ಮಹದೇವು, ಅಮೃತಿ ರಾಜಶೇಖರ್, ಗ್ರಾಪಂ ಸದಸ್ಯರಾದ ಲೋಕೇಶ್, ಪುಟ್ಟಸಿದ್ದಮ್ಮ, ಚೇತನ್, ಗುತ್ತಿಗೆದಾರ ಆರ್.ಪಿ.ರೇವಣ್ಣ, ಎಇಇ ಜೈಕುಮಾರ್, ಎಇ ಅಕಿಲೇಶ್, ರಾಜೇಶ್, ಮನೋಹರ್, ಕುಮಾರ, ನರಸಿಂಹೇಗೌಡ, ಸಿದ್ದೇಗೌಡ, ಕೆಆರ್‌ಐಡಿಎಲ್ ಎಇ ಪ್ರಜ್ವಲ್, ಗುತ್ತಿಗೆದಾರ ನವೀನ್‌ನಾಯ್ಕ್, ಚಿನಕುರಳಿ ಚಂದ್ರಶೇಖರ್, ಬನ್ನಂಗಾಡಿ ಬಿ.ಕೆ.ಶ್ರೀನಿವಾಸ್, ಕಟ್ಟೇರಿ ಪಿಡಿಒ ಕುಮಾರ್, ಚಿನಕುರಳಿ ಗ್ರಾಪಂ ಕಾರ್‍ಯದರ್ಶಿ ವಿಶ್ವನಾಥಚಾರಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.