ಶಿಗ್ಲಿಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಪ್ರೊ. ಎಸ್.ವಿ. ಸಂಕನೂರ ಅವರ ಪರವಾಗಿ ಶಾಸಕ ಡಾ. ಚಂದ್ರು ಲಮಾಣಿ ಗುರುವಾರ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ನಡೆಸಿದರು.

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಶಿಗ್ಲಿಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಪ್ರೊ. ಎಸ್.ವಿ. ಸಂಕನೂರ ಅವರ ಪರವಾಗಿ ಶಾಸಕ ಡಾ. ಚಂದ್ರು ಲಮಾಣಿ ಗುರುವಾರ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ನಡೆಸಿದರು.

ಮುಂದಿನ ದಿನಗಳಲ್ಲಿ ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಹಾಗೂ ಪದವೀಧರ ಸಮಸ್ಯೆಗಳ ಧ್ವನಿ ಎತ್ತುವ ಕಾರ್ಯ ಮಾಡಲಿದ್ದಾರೆ. ಪ್ರಜ್ಞಾವಂತ ಮತದಾರರಾದ ಪದವೀಧರರ ಹಾಗೂ ನೌಕರರ ಬಗ್ಗೆ ಸಾಕಷ್ಟು ವಿಧಾನಸೌಧದಲ್ಲಿ ಮತ್ತು ಹೊರಗಡೆ ಸಹ ಪ್ರೊ. ಎಸ್.ವಿ.ಸಂಕನೂರ ಹೋರಾಟ ಮಾಡಿದ್ದಾರೆ. ಅವರನ್ನು ಇನ್ನೊಂದು ಸಲ ಬೆಂಬಲಿಸಬೇಕೆಂದು ಶಾಸಕ ಡಾ. ಚಂದ್ರು ಮನವಿ ಮಾಡಿದರು.

ಈ ವೇಳೆ ಮಂಡಲದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಗಂಗಾಧರ ಮೆಣಸಿನಕಾಯಿ, ಡಿ.ವೈ. ಹುನಗುಂದ, ಅಶೋಕ ಶಿರಹಟ್ಟಿ, ವೀರಣ್ಣ ಅಕ್ಕೂರ, ಶಂಭು ಹುನಗುಂದ, ಪ್ರವೀಣ ಪಾಟೀಲ, ಎಚ್.ಎನ್. ಹೂಗಾರ, ಮರಿಯಪ್ಪ ಛಬ್ಬಿ, ಶಂಕರ ಮಳಗಿ, ಪ್ರವೀಣ ಬೊಮಲೆ, ಸಂತೋಷ ಜಾವೂರ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.ಶಿರಹಟ್ಟಿಯಲ್ಲಿ ಸಂಕನೂರ ಪರ ಜೆಡಿಎಸ್ ಮುಖಂಡರ ಮತಯಾಚನೆ

ವಿಧಾನಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಸ್.ವಿ. ಸಂಕನೂರ ಪರವಾಗಿ ಜೆಡಿಎಸ್ ಮುಖಂಡರು ಶಿರಹಟ್ಟಿಯಲ್ಲಿ ಚುನಾವಣಾ ಪ್ರಚಾರ ನಡೆಸಿದರು.ಈ ವೇಳೆ ಜೆಡಿಎಸ್ ರಾಜ್ಯ ವಕ್ತಾರ ಗೋವಿಂದಗೌಡ್ರ, ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಶರಣಪ್ಪ ಹೂಗಾರ ಮಾತನಾಡಿ, ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಸಂಕನೂರ ಬೆಂಬಲಿಸುವಂತೆ ಮನವಿ ಮಾಡಿದರು. ಶಿಕ್ಷಣ ಕ್ಷೇತ್ರದ ಪ್ರಗತಿ, ಪದವೀಧರರ ಕಲ್ಯಾಣ, ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ಕ್ಷೇತ್ರದ ಅಭಿವೃದ್ಧಿ ಕುರಿತು ತಿಳಿಸಿದರು.ಎಸ್.ವಿ. ಸಂಕನೂರ ವಿಧಾನಪರಿಷತ್ತಿನಲ್ಲಿ ಪದವೀಧರರ ಸಮಸ್ಯೆಗಳು, ನಿರುದ್ಯೋಗ, ಸರ್ಕಾರಿ ಹುದ್ದೆಗಳ ನೇಮಕಾತಿ ಹಾಗೂ ಸರ್ಕಾರಿ ನೌಕರರ ಹಿತಾಸಕ್ತಿಗಳ ಕುರಿತು ಧ್ವನಿ ಎತ್ತಿದ್ದಾರೆ. ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುವುದು, ಶಿಕ್ಷಣ ಕ್ಷೇತ್ರದ ಸುಧಾರಣೆ ಹಾಗೂ ಯುವಕರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಹೇಳಿದರು.

ಪದವೀಧರ ಮತದಾರರು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು. ಎನ್‌ಡಿಎ ಅಭ್ಯರ್ಥಿ ಎಸ್.ವಿ. ಸಂಕನೂರ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವ ಮೂಲಕ ಬೆಂಬಲಿಸಬೇಕು ಎಂದು ಮನವಿ ಮಾಡಿದರು.ಜಿ.ಕೆ. ಕಳ್ಳಿಮಠ, ಫಕೀರಪ್ಪ, ಬಾಬುಸಾಬ್ ಕನಕವಾಡ, ಮುನ್ನಾ ಡಾಲಾಯತ್, ಬಸವರಾಜ ಕಲ್ಲಪ್ಪನವರ್, ಶಿವನಗೌಡ ಪಾಟೀಲ್, ಬಸವರಾಜ ಅಡ್ರಕಟ್ಟಿ, ಮಾಂತೇಶ್ ಹುಲಕಡ್ಡಿ, ಗುರು ಸರ್ಜಾಪುರ್ ಸೇರಿದಂತೆ ಇತರೆ ಕಾರ್ಯಕರ್ತರು, ಮುಖಂಡರು ಮತ್ತು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.