ಸಾರಾಂಶ
ಲಕ್ಷ್ಮೇಶ್ವರ ಪಟ್ಟಣದ ಬಾಲಾಜಿ ಆಸ್ಪತ್ರೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ನಡೆದ ಬೇಸಿಗೆ ಶಿಬಿರದಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಜೀವಶಾಸ್ತ್ರದ ಪಠ್ಯ ಬೋಧನೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರದ ಲಾಭ ಪಡೆದುಕೊಳ್ಳುವಂತೆ ಕರೆ ನೀಡಿದರು.
ಲಕ್ಷ್ಮೇಶ್ವರ: ಪಟ್ಟಣದ ಬಾಲಾಜಿ ಆಸ್ಪತ್ರೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ನಡೆದ ಬೇಸಿಗೆ ಶಿಬಿರದಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಜೀವಶಾಸ್ತ್ರದ ಪಠ್ಯ ಬೋಧನೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರದ ಲಾಭ ಪಡೆದುಕೊಳ್ಳುವಂತೆ ಕರೆ ನೀಡಿದರು.
ಸೋಮವಾರ ಶಾಸಕ ಡಾ। ಚಂದ್ರು ಲಮಾಣಿ ಅವರು ಮಾನವನ ಶ್ವಾಸಕಾಂಗವ್ಯೂಹ ಎಂಬ ಪಾಠದ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದರು. ಬೇಸಿಗೆ ಶಿಬಿರದಲ್ಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಡಾ. ಚಂದ್ರು ಲಮಾಣಿ ಅವರ ಅಭಿಮಾನಿ ಬಳಗದ ಬಾಲಾಜಿ ಆಸ್ಪತ್ರೆಯ ಮೇಲ್ಭಾಗದಲ್ಲಿ ಉಚಿತ ಬೇಸಿಗೆ ಶಿಬಿರ ಏರ್ಪಡಿಸುವ ಮೂಲಕ ಮಕ್ಕಳು ಬೇಸಿಗೆಯ ಅವಧಿ ಹಾಳು ಮಾಡಿಕೊಳ್ಳುವ ಬದಲು ಪಠ್ಯ ವಿಷಯದ ಬೋಧನಾ ಶಿಬಿರ ಹಮ್ಮಿಕೊಂಡಿದ್ದು ಮೆಚ್ಚುವ ಸಂಗತಿಯಾಗಿತ್ತು.ಸೋಮವಾರ ಬೆಳಗ್ಗೆ 10 ಗಂಟೆಗೆ ಶಾಸಕ ಡಾ. ಚಂದ್ರು ಲಮಾಣಿ ಅವರು ಮಾನವನ ಶ್ವಾಸಕಾಂಗವ್ಯೂಹದಲ್ಲಿ ಬರುವ ಅಂಶಗಳು ಅಂದರೆ ಅಪಧಮನಿ ಅಭಿದಮನಿ, ರಕ್ತ ಶುದ್ಧೀಕರಣ ಹೃದಯಕ್ಕೆ ಸಂಬಂಧಿಸಿದ ರಕ್ತ ನಾಳಗಳು, ಶುದ್ಧರಕ್ತ ಅಶುದ್ಧರಕ್ತ, ಆಮ್ಲಜನಕ ವಾಯು ಉಸಿರಾಟಕ್ರಿಯೆಗಳು ಎಂಬ ವಿಷಯದ ಕುರಿತು ಪಾಠ ಬೋಧನೆ ಮಾಡಿ ವಿದ್ಯಾರ್ಥಿಗಳಿಗೆ ಅಭ್ಯಾಸ ಹೇಗೆ ಮಾಡಬೇಕು. ಯಾವ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂಬ ವಿಷಯದ ಕುರಿತು ಸವಿಸ್ತಾರವಾಗಿ ತಿಳಿಸಿಕೊಟ್ಟರು. ಅವರಿಗೆ ಎಷ್ಟೇ ಕೆಲಸದ ಒತ್ತಡವಿದ್ದರೂ ಸಹ ತಮಗೆ ವಿದ್ಯಾರ್ಥಿಗಳಿಗೆ ಸಮಯ ಮಾಡಿಕೊಂಡು ಆಗಾಗ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಿದರು.
ಈ ವೇಳೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.