ಶಿರಹಟ್ಟಿ ಕ್ಷೇತ್ರಕ್ಕೆ ವಿವಿಧ ಅನುದಾನ ಬಿಡುಗಡೆಗೆ ಶಾಸಕ ಡಾ. ಲಮಾಣಿ ಆಗ್ರಹ

| Published : Mar 21 2025, 12:32 AM IST

ಶಿರಹಟ್ಟಿ ಕ್ಷೇತ್ರಕ್ಕೆ ವಿವಿಧ ಅನುದಾನ ಬಿಡುಗಡೆಗೆ ಶಾಸಕ ಡಾ. ಲಮಾಣಿ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಹಟ್ಟಿ ಮತಕ್ಷೇತ್ರದಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಸಭಾಧ್ಯಕ್ಷರ ಮೂಲಕ ಸಚಿವರಿಗೆ ಶಾಸಕ ಡಾ. ಚಂದ್ರು ಲಮಾಣಿ ಮನವಿ ಮಾಡಿದರು.

ಲಕ್ಷ್ಮೇಶ್ವರ: ಶಿರಹಟ್ಟಿ ಮತಕ್ಷೇತ್ರದಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಸಭಾಧ್ಯಕ್ಷರ ಮೂಲಕ ಸಚಿವರಿಗೆ ಶಾಸಕ ಡಾ. ಚಂದ್ರು ಲಮಾಣಿ ಮನವಿ ಮಾಡಿದರು.

ರಾಜ್ಯ ವಿಧಾನಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಭಾಷಣದಲ್ಲಿನ ಚರ್ಚೆ ವೇಳೆ ಅವರು ಮಾತನಾಡಿದರು.

ವಿಧಾನಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಮಾ. 8ರಂದು ಹಾಗೂ 12ರಂದು ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಮುಂಡರಗಿ ತಾಲೂಕಿನ ಹತ್ತಿರ ಇರುವ ಮದಲಗಟ್ಟಿ ಬಳಿ ಆಂಜನೇಯನ ದೇವಸ್ಥಾನದ ಹತ್ತಿರದ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ಶಿರಹಟ್ಟಿ ತಾಲೂಕಿನ ವರವಿ ಗ್ರಾಮದ ಗುರುನಾಥ ಬಡಿಗೇರ, ಶರಣಪ್ಪ ಬಡಿಗೇರ, ಮಹೇಶ ಬಡಿಗೇರ ಹಾಗೂ ವಿನೋದಕುಮಾರ ಹಿರೇಮಠ ಮತ್ತು 3 ತಿಂಗಳ ಹಿಂದೆ ಮಕ್ತುಂಪುರ ಗ್ರಾಮದ ಯುವಕನು ತನ್ನ ಮಕ್ಕಳು ಹಾಗೂ ತನ್ನ ತಂಗಿಯ ಮಗನನ್ನು ಕೊರ್ಲಹಳ್ಳಿ ಸೇತುವೆ ಮೇಲಿಂದ ಎಸೆದು ತಾನು ಮೃತಪಟ್ಟ ಹಿನ್ನೆಲೆಯಲ್ಲಿ ಶಿರಹಟ್ಟಿ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಅವರು ವಿಷಯವನ್ನು ಪ್ರಸ್ತಾಪಿಸಿ ಕೊರ್ಲಹಳ್ಳಿ ಹಾಗೂ ಹಮ್ಮಿಗಿ ಸೇತುವೆಗಳ ಬಳಿ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಹಾಗೂ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಸರ್ಕಾರ ನೀಡಲು ಒತ್ತಾಯಿಸಿದರು.

ಸೂರಣಗಿ ಹಾಗೂ ಹೊಳೆ ಇಟಗಿ ಕೆ.ಇ.ಬಿ(KEB) ಗ್ರಿಡ್ ಗಳನ್ನು 33 ಕೆ.ವಿ.ಯಿಂದ 110 ಕೆ.ವಿ.ಯ ವರೆಗೆ ಅಪ್‌ಗ್ರೇ ಡ್ ಮಾಡಲು ಹಾಗೂ ಶಿರಹಟ್ಟಿ ಪಟ್ಟಣದಲ್ಲಿ AEE ಸಬ್ ಡಿವಿಜನ್ ವಿಭಾಗವನ್ನು ಪ್ರತ್ಯೇಕವಾಗಿ ಮಾಡಲು ಜೊತೆಗೆ ಹೆಬ್ಬಾಳ ಗ್ರಾಮದ ಸಮೀಪದಲ್ಲಿ ಸಬ್ ಸ್ಟೇಷನ್ ಮಾಡುವುದು. ಗಂಗಾ ಕಲ್ಯಾಣ ಯೋಜನೆಯಲ್ಲಿ ರೈತರಿಗೆ ಪ್ರತ್ಯೇಕ ಟ್ರಾನ್ಸಫಾರ್ಮರ್ ಅಳವಡಿಸುವ ಕುರಿತು ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ SCP/TSP ಯೋಜನೆ ಅಡಿಯಲ್ಲಿ ಮೀಸಲಿಟ್ಟ ಹಣವು ನಿಗಮದ ಯೋಜನೆಗಳಿಗೆ ಅಷ್ಟೇ ಅಲ್ಲದೆ, ಅಭಿವೃದ್ಧಿ ಕಾಮಗಾರಿಗಳಿಗೂ ಸದರಿ ಮೀಸಲಿಟ್ಟ ಹಣವು ಸಾಕಾಗುತ್ತಿಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆ ಅಡಿಯಲ್ಲಿ ಬರುವ ರಸ್ತೆಗಳು ಹದಗೆಟ್ಟಿದ್ದು ಹಾಗೂ ಪ್ರಗತಿಪಥ ರಸ್ತೆಗಳ ನಿರ್ಮಾಣ ಹಾಗೂ ಪೌರಾಡಳಿತ ಇಲಾಖೆ ಅಡಿಯಲ್ಲಿ ಬರುವ ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳಿಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ, ಹೊಸ ತಾಲೂಕು ಲಕ್ಷ್ಮೇಶ್ವರ ಪಟ್ಟಣದ ಆಸ್ಪತ್ರೆಯನ್ನು ಆದಷ್ಟು ಬೇಗನೆ ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆ ಏರಿಸುವ. ಬೆಳ್ಳಟ್ಟಿ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಬನ್ನಿಕೊಪ್ಪ, ಕಡಕೋಳ ಅಥವಾ ಮಜ್ಜೂರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡಬೇಕು. ಆಶಾ ಕಾರ್ಯಕರ್ತರಿಗೆ ಪ್ರತಿ ತಿಂಗಳು 10,000 ₹ ನೀಡಬೇಕು, SCP/TSP ಯೋಜನೆ ಅಡಿಯಲ್ಲಿ ಮೀಸಲಿಟ್ಟ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ನೀಡಲು ಹಾಗೂ ಬೇರೆ ಯಾವುದೇ ಗ್ಯಾರಂಟಿ ಯೋಜನೆಗಳಿಗೆ ಉಪಯೋಗ ಮಾಡಿಕೊಳ್ಳದಂತೆ. ಕಿತ್ತೂರು ಕರ್ನಾಟಕ ಬಯಲು ಸೀಮೆ ಅಡಿಯಲ್ಲಿ ಬರುವಂತ ಜಿಲ್ಲೆಗಳಿಗ ಅಭಿವೃದ್ಧಿಗೆ ಅನುದಾನ ನೀಡಬೇಕು. ನೀರಾವರಿ ಯೋಜನೆಗಳಾದ ಜಾಲವಾಡಗಿ ಏತ ನೀರಾವರಿಗೆ 197 ಕೋಟಿ ₹ ಅನುದಾನ ಬಿಡುಗಡೆ ಮಾಡಲು ಹಾಗೂ 20 ಕೆರೆ ತುಂಬಿಸುವ ಯೋಜನೆ ಅಡಿಯಲ್ಲಿ ಕಾಮಗಾರಿ ಪೂರ್ಣಗೊಳಿಸದೆ ಬಿಲ್ಲನ್ನು ಪಾವತಿಸಿದ್ದನ್ನು ಪರಿಶೀಲಿಸಲು ಸಭಾಧ್ಯಕ್ಷರ ಮೂಲಕ ಮನವಿ ಸಲ್ಲಿಸಿ ಮಾತನಾಡಿದರು.

ಶುದ್ಧ ಕುಡಿಯುವ ನೀರಿನ ಘಟಕಗಳು ಕ್ಷೇತ್ರದಲ್ಲಿ ಯಾವುದೇ ರೀತಿಯಾಗಿ ಸರಿಯಾಗಿ ಕಾರ್ಯ ನಿರ್ವಹಿಸದೆ ಇರುವ ಕುರಿತು ಮಾತನಾಡಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಆದಷ್ಟು ಬೇಗನೆ ಶುದ್ಧ ಕುಡಿಯುವ ನೀರಿನ ಘಟಕಗಳ ಕುರಿತು ಮಾಹಿತಿ ಸಂಗ್ರಹಿಸಿ, ಸಮಸ್ಯೆ ಪರಿಹರಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡಿಸಲು ಸೂಚಿಸುತ್ತೇವೆ ಎಂದು ಹೇಳಿದರು.