ಗದ್ದೆಯಲ್ಲಿ ಭತ್ತ ನಾಟಿ ಮಾಡಿದ ಶಾಸಕ ಡಾ.ರಂಗನಾಥ್

| Published : Aug 27 2024, 01:31 AM IST

ಸಾರಾಂಶ

ತಾಲೂಕಿನ ಯಡವಣಿ ಗ್ರಾಮದಲ್ಲಿ ಕುಣಿಗಲ್ ಶಾಸಕ ಡಾ.ರಂಗನಾಥ್ ಗದ್ದೆ ನಾಟಿ ಮಾಡುವ ಮೂಲಕ ಕೃಷಿ ಚಟುವಟಿಕೆಗೆ ಚಾಲನೆ ನೀಡಿದರು.

ಕುಣಿಗಲ್: ತಾಲೂಕಿನ ಯಡವಣಿ ಗ್ರಾಮದಲ್ಲಿ ಕುಣಿಗಲ್ ಶಾಸಕ ಡಾ.ರಂಗನಾಥ್ ಗದ್ದೆ ನಾಟಿ ಮಾಡುವ ಮೂಲಕ ಕೃಷಿ ಚಟುವಟಿಕೆಗೆ ಚಾಲನೆ ನೀಡಿದರು.

ತಾಲೂಕಿನ ಅಮೃತೂರು ಹೋಬಳಿಯ ಎಡವಾಣಿ ಗ್ರಾಮದ ರೈತ ರಾಜೇಶ್ ಎಂಬುವರ ಗದ್ದೆಯಲ್ಲಿ ಕೃಷಿ ಕಾರ್ಮಿಕರಂತೆ ಕೆಲಸ ಮಾಡಿದರು. ಗ್ರಾಮದಲ್ಲಿ ರೈತ ಮಹಿಳೆಯರು ಗದ್ದೆ ನಾಟಿ ಮಾಡುವುದನ್ನು ಕಂಡು ತಾವು ಕೂಡ ತಕ್ಷಣ ಕೆಸರು ಗದ್ದೆಗಿಳಿದು ಭತ್ತದ ಪೈರುಗಳನ್ನು ನಾಟಿ ಮಾಡಿ ರೈತರ ಕೂಲಿ ಕಾರ್ಮಿಕರ ಮತ್ತು ಕೃಷಿ ಚಟುವಟಿಕೆಗಳ ಅನುಭವವನ್ನು ಪಡೆದುಕೊಂಡರು.

ಈ ಕುರಿತು ಶಾಸಕ ಡಾ.ರಂಗನಾಥ್ ಮಾತನಾಡಿ, ಈ ಸುಂದರವಾದ ಪರಿಸರದಲ್ಲಿ ಕೆಲಸ ಮಾಡುವುದು ನನಗೆ ವಿಶೇಷ ಎನಿಸಿತ್ತು. ಕೃಷಿ ಅನುಭವ ಪ್ರತಿಯೊಬ್ಬರಿಗೂ ಅಗತ್ಯವಾಗಿ ಬೇಕಾಗಿದೆ. ರೈತರಿಗೆ ಉತ್ತಮವಾದ ಗುಣಮಟ್ಟದ ಬೀಜ ಮತ್ತು ರಸಗೊಬ್ಬರ ಸಕಾಲಕ್ಕೆ ಒದಗಿಸುವಂತೆ ಅಧಿಕಾರಿಗಳಿಗೆ ಚುರುಕು ಮುಟ್ಟಿಸಲಾಗುವುದು. ಕೃಷಿ ಕ್ಷೇತ್ರದಲ್ಲಿ ಹೆಚ್ಚಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರಿಂದ ಇತ್ತೀಚಿಗೆ ಉಂಟಾಗುತ್ತಿರುವ ಕೃಷಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.