₹40 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಚಾಲನೆ

| Published : Jul 15 2024, 01:47 AM IST

ಸಾರಾಂಶ

ಹೊಳಲ್ಕೆರೆ ತಾಲೂಕಿನ ವಿಶ್ವನಾಥನಹಳ್ಳಿ ಸಮೀಪದ ಆರನಕಟ್ಟೆ ಹಳ್ಳಕ್ಕೆ ಬ್ಯಾರೇಜ್‌ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆತಾಲೂಕಿನ ಆವಿನಹಟ್ಟಿ ವಿಶ್ವನಾಧನಹಳ್ಳಿ ಸಮೀಪದ ಅರನಕಟ್ಟೆ ಹಳ್ಳಕ್ಕೆ ನಿರ್ಮಿಸಲು ಉದ್ದೇಶಿಸಿರುವ ₹40 ಲಕ್ಷ ವೆಚ್ಚದ ಬ್ಯಾರೇಜ್‌ ನಿರ್ಮಾಣದ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಚಾಲನೆ ನೀಡಿದರು.

ತಾಲೂಕಿನ 30ಕ್ಕೂ ಹೆಚ್ಚು ಚೆಕ್‌ ಡ್ಯಾಂ, ಬ್ಯಾರೇಜ್‌, ನೂತನ ಕೆರೆಗಳನ್ನು ನಿರ್ಮಾಣ ಮಾಡಿದ ಪ್ರಯುಕ್ತ ಹೆಚ್ಚು ನೀರು ಸಂಗ್ರಹವಾಗಿದ್ದರಿಂದ ಬರಗಾಲವಿದ್ದರೂ ತೋಟಗಳು ಉಳಿದು ಕೊಂಡಿವೆ. ಸಾಂತೇನಹಳ್ಳಿ ಗುಡ್ಡದ ಅರಣ್ಯ ಪ್ರದೇಶದಲ್ಲಿ ದೊಡ್ಡ ಬ್ಯಾರೇಜ್‌ ನಿರ್ಮಿಸಿರುವುದರಿಂದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಂತರ್ಜಲ ಹೆಚ್ಚಾಗಿದ್ದು, ಈ ಭಾಗದ ಅಡಿಕೆ ತೋಟಗಳಿಗೆ ಅನುಕೂಲ ಆಗಲಿದೆ ಎಂದು ಶಾಸಕರು ಹೇಳಿದರು.

ಈ ವೇಳೆ ಬಸವರಾಜ್‌ ಯಾದವ್‌, ಅವಿನ ಹಟ್ಟಿಕುಮಾರ್‌, ಬಂಗಾರಪ್ಪ, ರಂಗಸ್ವಾಮಿ, ವೆಂಕಟೇಶಯ್ಯ ಹಾಗೂ ಗ್ರಾಮಸ್ಥರು ಇದ್ದರು.