ಇಸ್ರೇಲ್‌ನಲ್ಲಿರುವ ಕಾಪುವಿನ ರೋಹಣಿಗೆ ಧೈರ್ಯ ತುಂಬಿದ ಶಾಸಕ ಗುರ್ಮೆ
1 Min read
Author : KannadaprabhaNewsNetwork
Published : Oct 13 2023, 12:16 AM IST
Share this Article
FB
TW
Linkdin
Whatsapp
ರೋಹಿಣಿ ಅವರಿಗೆ ವಿಡಿಯೋ ಕಾಲ್ ಮೂಲಕ ದೈರ್ಯ ಹೇಳಿದ ಗುರ್ಮೆ | Kannada Prabha
Image Credit: KP
ಯುದ್ಧಪೀಡಿತ ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿರುವ ಕಾಪು ವಿಧಾನಸಭಾ ಕ್ಷೇತ್ರದ ಪಡುಬಿದ್ರಿಯ ನಡ್ಸಾಲು ಗ್ರಾಮದ ನಿವಾಸಿ ರೋಹಿಣಿ ಅವರಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ವಿಡಿಯೋ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದರು.
ಕನ್ನಡಪ್ರಭ ವಾರ್ತೆ ಕಾಪು ಯುದ್ಧಪೀಡಿತ ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿರುವ ಕಾಪು ವಿಧಾನಸಭಾ ಕ್ಷೇತ್ರದ ಪಡುಬಿದ್ರಿಯ ನಡ್ಸಾಲು ಗ್ರಾಮದ ನಿವಾಸಿ ರೋಹಿಣಿ ಅವರಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ವಿಡಿಯೋ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದರು. ನಿಮ್ಮೊಂದಿಗೆ ನಾವಿದ್ದೇವೆ, ಧೈರ್ಯದಿಂದಿರಿ, ಯಾವುದೇ ಸಮಸ್ಯೆಯಾದರೆ ನಮಗೆ ಕರೆ ಮಾಡಿ, ನಿಮ್ಮ ಮನೆಯವರಿಗೂ ಹೇಳಿ, ಎರಡೂ ದೇಶಗಳ ಮಧ್ಯೆ ಸಂಧಾನವಾಗಿ ಶಾಂತಿ ನೆಲೆಸಲಿ ಎಂದು ನಾವೆಲ್ಲ ಹಾರೈಸುತಿದ್ದೇವೆ ಎಂದು ಶಾಸಕರು ರೋಹಿಣಿ ಅವರಿಗೆ ಹೇಳಿದರು. ಕೇಂದ್ರ ಸರ್ಕಾರ ಕೂಡ ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಆಪರೇಶನ್ ಆರಂಭಿಸಿದೆ, ಅಗತ್ಯವಿದ್ದರೆ ಏರ್ ಲಿಫ್ಟ್ ಮಾಡುವುದಾಗಿಯೂ ಹೇಳಿದೆ. ಆದ್ದರಿಂದ ಯಾವುದೇ ಆತಂಕ ಬೇಡ ಎಂದರು. ನಮ್ಮ ಬಗ್ಗೆ ಊರಲ್ಲೆಲ್ಲಾ ಗಾಬರಿಯಾಗಿದ್ದಾರೆ, ಆದರೆ ತಾವೆಲ್ಲರೂ ಸುರಕ್ಷಿತವಾಗಿದ್ದೇವೆ, ನಮ್ಮ ಮನೆಯವರಿಗೆ, ಸಂಬಂಧಿಕರಿಗೆ ಮನವರಿಕೆ ಮಾಡಿ ಎಂದು ರೋಹಿಣಿ ಅವರು ಶಾಸಕರಿಗೆ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.