ನೂತನ ಸಾರಿಗೆ ಬಸ್ ಸಂಚಾರಕ್ಕೆ ಶಾಸಕ ಎಚ್.ಟಿ.ಮಂಜು ಹಸಿರು ನಿಶಾನೆ

| Published : Mar 27 2025, 01:01 AM IST

ನೂತನ ಸಾರಿಗೆ ಬಸ್ ಸಂಚಾರಕ್ಕೆ ಶಾಸಕ ಎಚ್.ಟಿ.ಮಂಜು ಹಸಿರು ನಿಶಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಸಾರಿಗೆ ಸಂಚಾರಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಯಾವುದೇ ಬಸ್ ಸಂಚಾರ ಮಾರ್ಗ ಉಳಿದುಕೊಳ್ಳಬೇಕಾದರೆ ಬಸ್ ಮಾರ್ಗದ ಆದಾಯ ಲಾಭದಾಯಿಕವಾಗಿರಬೇಕು. ಬಸ್ ಸಂಚಾರ ಮಾರ್ಗ ಲಾಭದಾಯಕವಾಗಬೇಕಾದರೆ ಬಸ್ಸುಗಳಲ್ಲಿಯೇ ಸಂಚರಿಸಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಮಡುವಿನಕೋಡಿ ಗ್ರಾಮದಲ್ಲಿ ಕೆ.ಆರ್.ಪೇಟೆಯಿಂದ ಹರಿಹರಪುರ-ಮಡುವಿನಕೋಡಿ ಮಾರ್ಗವಾಗಿ ಬೂಕನಕೆರೆ ಸಂಪರ್ಕಿಸುವ ನೂತನ ಸಾರಿಗೆ ಬಸ್ ಸಂಚಾರಕ್ಕೆ ಶಾಸಕ ಎಚ್.ಟಿ.ಮಂಜು ಹಸಿರು ನಿಶಾನೆ ತೋರಿದರು.

ನಂತರ ಮಾತನಾಡಿದ ಶಾಸಕರು, ತಾಲೂಕಿನ ಗ್ರಾಮೀಣ ಬಸ್ ಮಾರ್ಗದ ಸಮಸ್ಯೆಗಳು ಮತ್ತು ಅವಶ್ಯಕತೆಗಳ ಸಂಬಂಧ ನಾನು ಕಳೆದ ಎರಡು ದಿನಗಳ ಹಿಂದೆ ಮೈಸೂರು ಸಾರಿಗೆ ವಿಭಾಗೀಯ ನಿಯಂತ್ರಕರ ಸಮ್ಮುಖದಲ್ಲಿ ಅಧಿಕಾರಿಗಳ ಸಭೆ ಕರೆದು ಮಾತನಾಡಿದ್ದೆ ಎಂದರು.

ನನ್ನ ಸಲಹೆ ಮತ್ತು ಸೂಚನೆಗಳನ್ನು ಪರಿಗಣಿಸಿ ಸಾರಿಗೆ ಇಲಾಖೆ ಇಂದು ಕೆ.ಆರ್.ಪೇಟೆ-ಹರಿಹರಪುರ-ಮಡುವಿನಕೋಡಿ ಮಾರ್ಗವಾಗಿ ಬೂಕನಕೆರೆ ಗ್ರಾಮಕ್ಕೆ ಮತ್ತು ಕೆ.ಆರ್.ಪೇಟೆಯಿಂದ ಕಿಕ್ಕೇರಿ-ಐಕನಹಳ್ಳಿ-ಸಾಸಲು ಮಾರ್ಗವಾಗಿ ಪುರಾಣ ಪ್ರಸಿದ್ಧ ಶ್ರವಣಬೆಳಗೊಳಕ್ಕೆ ಹೊಸ ಬಸ್ ಮಾರ್ಗವನ್ನು ರೂಪಿಸಿ ಬಸ್ ಸಂಚಾರ ಆರಂಭಿಸಿದೆ ಎಂದರು.

ಗ್ರಾಮೀಣ ಸಾರಿಗೆ ಸಂಚಾರಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಯಾವುದೇ ಬಸ್ ಸಂಚಾರ ಮಾರ್ಗ ಉಳಿದುಕೊಳ್ಳಬೇಕಾದರೆ ಬಸ್ ಮಾರ್ಗದ ಆದಾಯ ಲಾಭದಾಯಿಕವಾಗಿರಬೇಕು. ಬಸ್ ಸಂಚಾರ ಮಾರ್ಗ ಲಾಭದಾಯಕವಾಗಬೇಕಾದರೆ ಜನಸಾಮಾನ್ಯರು ತಮ್ಮ ದೈನಂದಿನ ವ್ಯವಹಾರಗಳಿಗೆ ಖಾಸಗಿ ವಾಹನಗಳಲ್ಲಿ ಸಂಚರಿಸುವ ಬದಲು ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿಯೇ ಸಂಚರಿಸಬೇಕು ಎಂದರು.

ಈ ವೇಳೆ ಸಾರಿಗೆ ಇಲಾಖೆ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಬಿ.ನಾಗರಾಜು, ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ಪರಮೇಶ್ವರಪ್ಪ, ಕೆ.ಆರ್.ಪೇಟೆ ಬಸ್ ಡಿಪೋ ವ್ಯವಸ್ಥಾಪಕಿ ವನಿತ, ತಾಪಂ ಮಾಜಿ ಸದಸ್ಯ ಕೃಷ್ಣೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಕೃಷಿ ಪತ್ತಿನ ಸಹಕಾರ ಸಂಘದ ಧ್ಯಕ್ಷ ವಿಜಯಕುಮಾರ್, ನಿರ್ದೇಶಕ ಶೇಖರ್, ಐಕನಹಳ್ಳಿ ಉದಯ್, ಗ್ರಾಪಂ ಉಪಾಧ್ಯಕ್ಷತೆ ರತಿ, ಗ್ರಾ.ಪಂ ಸದಸ್ಯರಾದ ರವಿ, ನಾಗರಾಜು, ಅನ್ನಪೂರ್ಣ, ಮುಖಂಡರಾದ ಸುದರ್ಶನ್, ಸಂಜು, ಪ್ರಸನ್ನ, ಪಿ.ಡಿ.ಓ ಮಹೇಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.