ದೊಡ್ಡ ಹೆಜ್ಜೂರು ಶ್ರೀ ವೀರಾಂಜನೇಯ ಸ್ವಾಮಿಯ ಅದ್ದೂರಿ ರಥೋತ್ಸವ- ಶಾಸಕ ಜಿ.ಡಿ. ಹರೀಶ್ ಗೌಡ ರಥ ಎಳೆಯುವ ಮೂಲಕ ಚಾಲನೆ

| Published : Jan 17 2024, 01:46 AM IST

ದೊಡ್ಡ ಹೆಜ್ಜೂರು ಶ್ರೀ ವೀರಾಂಜನೇಯ ಸ್ವಾಮಿಯ ಅದ್ದೂರಿ ರಥೋತ್ಸವ- ಶಾಸಕ ಜಿ.ಡಿ. ಹರೀಶ್ ಗೌಡ ರಥ ಎಳೆಯುವ ಮೂಲಕ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ರಥೋತ್ಸವಕ್ಕೂ ಮುನ್ನ ಮಂದಿರದಿಂದ ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀ ವೀರಾಂಜನೇಯ ಉತ್ಸವ ಮೂರ್ತಿಯನ್ನು ಮಂಗಳವಾದ್ಯದೊಂದಿಗೆ ಹೊತ್ತು ತಂದು, ರಥದ ಸುತ್ತ ಪ್ರದಕ್ಷಿಣೆ ಹಾಕಿ ನಂತರ ಮಧ್ಯಾಹ್ನ 1.20ರ ವೇಳೆಗೆ ಶ್ರೀ ವೀರಾಂಜನೇಯ ಉತ್ಸವ ಮೂರ್ತಿಯನ್ನು ರಥಕ್ಕೆ ಏರಿಸಲಾಯಿತು. ನಂತರ ಶಾಸಕರಾದಿಯಾಗಿ ಸಾವಿರಾರು ಭಕ್ತರು ಸ್ವಾಮಿಗೆ ಜೈಕಾರ ಹಾಕುತ್ತಾ ರಥ ಹಗ್ಗವನ್ನಿಡಿದು ಎಳೆದರು.

ಕನ್ನಡಪ್ರಭ ವಾರ್ತೆ ಹುಣಸೂರು

ತಾಲೂಕಿನ ಹನಗೂಡು ಹೋಬಳಿ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಶ್ರೀ ವೀರಾಂಜನೇಯ ಸ್ವಾಮಿಯ ಅದ್ದೂರಿ ರಥೋತ್ಸವಕ್ಕೆ ನೆರವೇರಿತು.

ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ಶಾಸಕ ಜಿ.ಡಿ. ಹರೀಶ್ ಗೌಡ ಅವರು ರಥವನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ದೇವಸ್ಥಾನ ಕೆಡವಿ ಹೊಸ ದೇವಾಲಯ ನಿರ್ಮಾಣ ಮಾಡಿರುವುದರಿಂದ ಇದೀಗ ನಿರ್ಮಿಸಿರುವ ಹೊಸ ದೇವಾಲಯದಲ್ಲಿ ಮುಂಜಾನೆಯಿಂದಲೇ ಉತ್ಸವ ಮೂರ್ತಿಯನ್ನಿಟ್ಟು ಅಲ್ಲಿ ವಿಶೇಷ ಪೂಜಾ ಕೈಂಕರ್ಯ, ಅಭಿಷೇಕಗಳು ನೆರವೇರಿಸಿದರು. ರಥೋತ್ಸವಕ್ಕೂ ಮುನ್ನ ಮಂದಿರದಿಂದ ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀ ವೀರಾಂಜನೇಯ ಉತ್ಸವ ಮೂರ್ತಿಯನ್ನು ಮಂಗಳವಾದ್ಯದೊಂದಿಗೆ ಹೊತ್ತು ತಂದು, ರಥದ ಸುತ್ತ ಪ್ರದಕ್ಷಿಣೆ ಹಾಕಿ ನಂತರ ಮಧ್ಯಾಹ್ನ 1.20ರ ವೇಳೆಗೆ ಶ್ರೀ ವೀರಾಂಜನೇಯ ಉತ್ಸವ ಮೂರ್ತಿಯನ್ನು ರಥಕ್ಕೆ ಏರಿಸಲಾಯಿತು. ನಂತರ ಶಾಸಕರಾದಿಯಾಗಿ ಸಾವಿರಾರು ಭಕ್ತರು ಸ್ವಾಮಿಗೆ ಜೈಕಾರ ಹಾಕುತ್ತಾ ರಥ ಹಗ್ಗವನ್ನಿಡಿದು ಎಳೆದರು.

ಭಕ್ತರು ರಥವನ್ನು ದೇವಾಲಯದ ಸುತ್ತ ಒಂದು ಸುತ್ತು ಎಳೆದು ತಂದು ಸ್ವಸ್ಥಾನಕ್ಕೆ ನಿಲ್ಲಿಸಿದರು. ರಥೋತ್ಸವದ ವೇಳೆ ನವ ದಂಪತಿಗಳು ಸೇರಿದಂತೆ ನೆರೆದಿದ್ದ ಭಕ್ತರು ಹಣ್ಣು ಜವನ ಎಸೆದು ಭಕ್ತಿ ಭಾವ ಮೆರೆದರು. ಹೊಸದಾಗಿ ಮದುವೆಯಾದ ದಂಪತಿಗಳು ಹಣ್ಣು ಜವಾನ ಎಸೆಯುವುದು ವಿಶೇಷವಾಗಿತ್ತು.

ಎಪಿಎಂಸಿ ಮಾಜಿ ಅಧ್ಯಕ್ಷ ಸುಭಾಷ್, ಬಸವರಾಜ್, ಗ್ರಾಪಂ ಮಾಜಿ ಅಧ್ಯಕ್ಷ ದಾ.ರಾ. ಮಹೇಶ್, ಶಿವಶಂಕರ್, ಸಮಿತಿ ಅಧ್ಯಕ್ಷ ಶೇಖರಗೌಡ, ನಾಗೇಶ್, ಮಂಜು, ರವಿ, ರಾಜೇಗೌಡ ಭಾಗವಹಿಸಿದ್ದರು.