ಸಾರಾಂಶ
ಜಲಾಶಯ ಭರ್ತಿಯಾಗಿರುವುದು ಸಂತಸದ ವಿಷಯ, ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು
ಮುಂಡಗೋಡ: ವರ್ಷವಿಡೀ ಮುಂಡಗೋಡ ನಗರಕ್ಕೆ ಕುಡಿಯುವ ನೀರು ಪೂರೈಸುವ ಹಾಗೂ ಸನವಳ್ಳಿ ಭಾಗದ ನೂರಾರು ಎಕರೆ ರೈತರ ಭೂಮಿಗೆ ನೀರುಣಿಸುವ ಜಲಾಶಯ ಭರ್ತಿಯಾಗಿರುವುದು ಸಂತಸದ ವಿಷಯ, ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಬುಧವಾರ ತಾಲೂಕಿನ ಸನವಳ್ಳಿ ಜಲಾಶಯಕ್ಕೆ ಗಂಗಾ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಬಳಿಕ ಮಾತನಾಡಿದ ಅವರು, ಜಲಾಶಯ ನಿರ್ವಹಣೆ ಹಾಗೂ ಅಭಿವೃದ್ಧಿಯ ಬಗ್ಗೆ ಚಿಕ್ಕ ನೀರಾವರಿ ಇಲಾಖೆಯೊಂದಿಗೆ ಮುಂಡಗೋಡ ಪಟ್ಟಣದ ಪಂಚಾಯತನವರು ಕೂಡ ಕೈಜೋಡಿಸಬೇಕಿದೆ ಎಂದರು.ಸಂದರ್ಭದಲ್ಲಿ ಮಾಜಿ ಶಾಸಕರಾದ ವಿ.ಎಸ್. ಪಾಟೀಲ್, ಪಪಂ ಅಧ್ಯಕ್ಷೆ ಜಯಸುಧಾ ಭೋವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಟಿ.ವೈ. ದಾಸನಕೊಪ್ಪ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ರಿಯಾಜ ದಫೇದಾರ ಮತ್ತು ಆರ್.ಎನ್. ನಾಯ್ಕ, ಎಚ್.ಎಂ. ನಾಯ್ಕ, ರವಿಗೌಡ ಪಾಟೀಲ್, ರಾಜು ಗುಬ್ಬಕ್ಕನವರ್, ಮಲ್ಲಿಕಾರ್ಜುನ ಗೌಳಿ, ರಜಾ ಪಠಾಣ ಮುಂತಾದವರು ಉಪಸ್ಥಿತರಿದ್ದರು.
ಶಾಸಕ ಶಿವರಾಮ ಹೆಬ್ಬಾರ ಬುಧವಾರ ಮುಂಡಗೋಡ ತಾಲೂಕಿನ ಸನವಳ್ಳಿ ಜಲಾಶಯಕ್ಕೆ ಗಂಗಾ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.