ಸಾರಾಂಶ
ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ 75 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನಕ್ಕೆ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಗುದ್ದಲಿ ಪೂಜೆ ನೆರವೇರಿಸಿದರು.
₹75 ಲಕ್ಷ ರು. ವೆಚ್ಚದಲ್ಲಿ ಅಂಬೇಡ್ಕರ್ ಭವನ । ಮತ್ತೆ ಅನುದಾನದ ಭರವಸೆ ನೀಡಿದ ಶಾಸಕ ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಬೇಗೂರು ಗ್ರಾಮದಲ್ಲಿ 75 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನಕ್ಕೆ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಗುದ್ದಲಿ ಪೂಜೆ ನೆರವೇರಿಸಿದರು.ಮೈಸೂರು-ಊಟಿ ಹೆದ್ದಾರಿಯಲ್ಲಿನ ಬೇಗೂರು ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ (ಐಟಿಐ) ಬಳಿ ೧೦ ಗುಂಟೆ ಜಾಗದಲ್ಲಿ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ದಿವಂಗತ ಎಚ್.ಎಸ್. ಮಹದೇವಪ್ರಸಾದ್ ಕಾಲದಲ್ಲಿಯೇ ಡಾ.ಬಿ.ಆರ್.ಅಂಬೇಡ್ಕರ್ ಜಾಗ ಮಂಜೂರು ಮಾಡಿಸಿದ್ದರು ಎಂದರು. ಬೇಗೂರು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ₹75 ಲಕ್ಷ ಅನುದಾನ ಬಿಡುಗಡೆಯಾಗಿದೆ ಕಾಮಗಾರಿ ಆರಂಭಿಸಿ, ಅನುದಾನ ಸಾಲದೆ ಇದ್ದರೆ ಮತ್ತೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ತಾಪಂ ಮಾಜಿ ಸದಸ್ಯರಾದ ನೀಲಕಂಠಪ್ಪ, ಮಲ್ಲಿದಾಸ್, ಬೇಗೂರು ಗ್ರಾಪಂ ಅಧ್ಯಕ್ಷೆ ಜಯಮ್ಮ, ಗ್ರಾಪಂ ಮಾಜಿ ಅಧ್ಯಕ್ಷೆ ಇಂದಿರಾ ಸುರೇಶ್, ಗ್ರಾಪಂ ಸದಸ್ಯರಾದ ಬಿ.ಎನ್.ಪುನೀತ್‌ಕುಮಾರ್, ಸೋಮಶೇಖರ್, ಎಂ.ಮಹೇಶ್, ಗುರುಸ್ವಾಮಿ, ನಾಗಮ್ಮ, ಗ್ರಾಪಂ ಮಾಜಿ ಉಪಾಧ್ಯಕ್ಷ ಸದಾಶಿವಮೂರ್ತಿ, ಕೆ.ಮಹದೇವಶೆಟ್ಟಿ, ಮುಖಂಡರಾದ ಹೋಟೆಲ್ ನಟರಾಜು, ಯಜಮಾನ ಶಿವಮೂರ್ತಿ, ಎ.ರವಿ, ಬಾಸ್ಕರ್, ರಾಜುಗೌಡ, ಶಿವಯ್ಯ, ಕೃಷ್ಣಯ್ಯ, ಮಹದೇವಯ್ಯ, ಬಸವಯ್ಯ, ಶಾಂತರಾಜು, ನಾಗಮಲಯ್ಯ, ಮಹೇಂದ್ರ, ಚಂದ್ರು, ಶಿವು, ಸೆಲ್ ಕಾಂ ಸಿದ್ದು,ಡಾ.ಬಿ.ಆರ್. ಅಂಬೇಡ್ಕರ್ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.ಹಿರೀಕಾಟೀಲಿ ಅಂಗನವಾಡಿ
ಕೇಂದ್ರಕ್ಕೆ ಗುದ್ದಲಿ ಪೂಜೆ ಗುಂಡ್ಲುಪೇಟೆ: ತಾಲೂಕಿನ ಹಿರೀಕಾಟಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರಕ್ಕೆ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಗುದ್ದಲಿ ಪೂಜೆ ನೆರವೇರಿಸಿದರು.
ಶಾಸಕರೊಂದಿಗೆ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್, ಹೊರೆಯಾಲ ಗ್ರಾಪಂ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷೆ ಚನ್ನಮ್ಮ,ತಾಪಂ ಮಾಜಿ ಅಧ್ಯಕ್ಷ ಎಚ್.ಎನ್. ಬಸವರಾಜು, ಕಾಂಗ್ರೆಸ್ ಮುಖಂಡರಾದ ಹಿರೀಕಾಟಿ ಪುರುಷೋತ್ತಮ್, ಸಿದ್ದರಾಜು, ಚಿನ್ನಯ್ಯ, ಸಿದ್ದಪ್ಪ, ದೊಡ್ಡಹುಂಡಿ ಪ್ರಕಾಶ್, ಉಮೇಶ್, ಇಂದ್ರನಾಯಕ, ರೇವಣ್ಣ, ಗ್ರಾಪಂ ಸದಸ್ಯ ಅಂಕೇಶ್, ಸಿ.ಮಹೇಶ್, ಸಿಡಿಪಿಒ ಎಂ. ಹೇಮಾವತಿ, ಪಿಡಿಒ ಮಂಜುನಾಥ ರಾವ್ ಸೇರಿದಂತೆ ಹಲವರಿದ್ದರು.