ಸೋಮವಾರಪೇಟೆ: ಇಂದಿರಾ ಕ್ಯಾಂಟೀನ್ ಗೆ ಶಾಸಕ ಚಾಲನೆ

| Published : May 22 2025, 01:13 AM IST / Updated: May 22 2025, 01:14 AM IST

ಸೋಮವಾರಪೇಟೆ: ಇಂದಿರಾ ಕ್ಯಾಂಟೀನ್ ಗೆ ಶಾಸಕ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟೀನ್‌ ಅನ್ನು ಶಾಸಕ ಉದ್ಘಾಟಿಸಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆ ವತಿಯಿಂದ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟೀನ್‌ನನ್ನು ಶಾಸಕ ಡಾ.ಮಂತರ್‌ಗೌಡ ಉದ್ಘಾಟಿಸಿದರು.ಸೋಮವಾರಪೇಟೆ ಪಟ್ಟಣ ಹಾಗು ಸುತ್ತಮುತ್ತಲಿನ ಬಡವರು, ಕಾರ್ಮಿಕರು, ರೈತರು, ಗ್ರಾಮೀಣ ಜನರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ ಜನತೆ ಇಂದಿರಾ ಕ್ಯಾಂಟೀನ್ ಸೌಲಭ್ಯ ಪಡೆದುಕೊಳ್ಳಬೇಕು. ನನ್ನ ಕ್ಷೇತ್ರ ಹಸಿವು ಮುಕ್ತವಾಗಬೇಕು ಎಂಬ ಬದ್ದತೆಯಿಂದ ಮೂರು ಇಂದಿರಾ ಕಾಂಟೀನ್‌ನನ್ನು ತಂದಿದ್ದೇನೆ. ಬೆಳಗ್ಗೆ ಒಬ್ಬರು ಸೇವಿಸುವ ತಿಂಡಿಗೆ ಸರ್ಕಾರ 45 ರು..ಗಳನ್ನು ಖರ್ಚು ಮಾಡುತ್ತಿದೆ. ಗ್ರಾಹಕರು ಕೇವಲ 5 ರು. ಗಳನ್ನು ನೀಡಿದರೆ ಸಾಕು. ಮಧ್ಯಾಹ್ನ ಹಾಗು ರಾತ್ರಿಯ ಊಟಕ್ಕೆ 55 ರು. ಗಳನ್ನು ನೀಡುತ್ತದೆ. ಕೇವಲ 10 ರು. ಗಳನ್ನು ನೀಡಿ ಊಟ ಮಾಡಬಹುದು. ಇಂತಹ ಜನಕಲ್ಯಾಣ ಯೋಜನೆಗಳು ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕ್ಯಾಂಟೀನ್ ನಡೆಸುವವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ವಚ್ಛತೆಯನ್ನು ಕಾಪಾಡದಿದ್ದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಶುಚಿ, ರುಚಿಯಾದ ಊಟವನ್ನು ಮಾತ್ರ ಇಲ್ಲಿನ ಜನತೆ ಇಷ್ಟಪಡುತ್ತಾರೆ. ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಕಿವಿಮಾತು ಹೇಳಿದರು. ವೇದಿಕೆಯಲ್ಲಿ ತಿಂಡಿ ತಿಂದ ಶಾಸಕರು ರುಚಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉಪ್ಪಿಟ್ಟು ತುಂಬಾ ಟೇಸ್ಟ್ ಇದೆ. ನಮ್ಮ ಮನೆಯಲ್ಲಿ ಉಪ್ಪಿಟ್ಟು ತಿನ್ನಲು ಭಯವಾಗುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.ಇಂದಿರಾಗಾಂದಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ.ನಾಗರಾಜ್ ಅವರು ಇಂದಿರಾ ಕ್ಯಾಂಟೀನ್ ಸ್ಥಾಪನೆಗಾರ ಸಂಘದ ಹೋರಾಟ ಮಾಡಿದನ್ನು ನೆನಪಿಸಿದರು. ಮುಖ್ಯಮಂತ್ರಿಗಳು ಹಾಗು ಶಾಸಕರಿಗೆ ಬಡವರ ಪರವಾಗಿ ಕೃತಜ್ಞತೆ ಸಲ್ಲಿಸಿದರು.ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಉಪಾಧ್ಯಕ್ಷೆ ಮೋಹಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್. ಮಹೇಶ್, ಸದಸ್ಯರಾದ ಶೀಲಾ ಡಿಸೋಜ, ಬಿ.ಸಿ.ವೆಂಕಟೇಶ್, ಪಿ.ಕೆ.ಚಂದ್ರು, ಮೃತ್ಯುಂಜಯ, ಕಿರಣ್ ಉದಯ್‌ಶಂಕರ್, ಎಸ್.ಕೆ.ವಿನಿ, ತಹಸೀಲ್ದಾರ್ ಕೃಷ್ಣಮೂರ್ತಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ.ಕಾಂತಾರಾಜು, ಸುಡಾ ಅಧ್ಯಕ್ಷ ಕೆ.ಎ.ಆದಂ, ಇಒ ಪರಮೇಶಕುಮಾರ್, ಸಿಒ ಸತೀಶ್, ಇಂಜಿನಿಯರ್ ಹೇಮಂತ್ ಇದ್ದರು