ಸಾರಾಂಶ
ಲಕ್ಷ್ಮೇಶ್ವರ ಪಟ್ಟಣದ ಸೋಮಶೇಖರ ಗಾಂಜಿ ಅವರ ತೋಟಕ್ಕೆ ಭಾನುವಾರ ಸಂಜೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ತೋಟದಲ್ಲಿ ಬೆಳೆದಿದ್ದ ವಿವಿಧ ರೀತಿಯ ಹಣ್ಣಿನ ಗಿಡಗಳು, ಬೆಲೆ ಬಾಳುವ ಮರಗಳು ಅಪಾರ ಹಾನಿ ಸಂಭವಿಸಿದ ಮಾಹಿತಿ ತಿಳಿದು ಶಾಸಕ ಡಾ. ಚಂದ್ರು ಲಮಾಣಿ ಸೋಮವಾರ ಸೋಮಶೇಖರ ಗಾಂಜಿ ಅವರ ಹೊಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಲಕ್ಷ್ಮೇಶ್ವರ: ಪಟ್ಟಣದ ಸೋಮಶೇಖರ ಗಾಂಜಿ ಅವರ ತೋಟಕ್ಕೆ ಭಾನುವಾರ ಸಂಜೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ತೋಟದಲ್ಲಿ ಬೆಳೆದಿದ್ದ ವಿವಿಧ ರೀತಿಯ ಹಣ್ಣಿನ ಗಿಡಗಳು, ಬೆಲೆ ಬಾಳುವ ಮರಗಳು ಅಪಾರ ಹಾನಿ ಸಂಭವಿಸಿದ ಮಾಹಿತಿ ತಿಳಿದು ಶಾಸಕ ಡಾ. ಚಂದ್ರು ಲಮಾಣಿ ಸೋಮವಾರ ಸೋಮಶೇಖರ ಗಾಂಜಿ ಅವರ ಹೊಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, ಯಾರೋ ಕಿಡಿಗೇಡಿಗಳು ಹಚ್ಚಿದ ಬೆಂಕಿಯು ಗಾಳಿಯ ವೇಗಕ್ಕೆ ಬೆಂಕಿಯು ತೋಟದಲ್ಲಿನ ಬೆಳೆ ಹಾಗೂ ನೀರಾವರಿಯ ಪೈಪುಗಳು ಸುಟ್ಟು ಕರಕಲಾಗಿವೆ. ಬೆಲೆ ಬಾಳುವ ಮರಗಳು ಹಾಗೂ ವಿವಿಧ ರೀತಿಯ ಹಣ್ಣಿನ ಗಿಡಗಳು ಸುಟ್ಟು ಹೋಗಿದ್ದರಿಂದ ಲಕ್ಷಾಂತರ ರು. ನಷ್ಟವಾಗಿದೆ. ಇದರಿಂದ ರೈತರಿಗೆ ಆಗಿರುವ ಹಾನಿಗೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಸೂಕ್ತ ಪರಿಹಾರ ಕೊಡಿಸುವುದಾಗಿ ಹೇಳಿದರು.ಈ ವೇಳೆ ತಹಸೀಲ್ದಾರ್ ವಾಸುದೇವ ಸ್ವಾಮಿ, ಸೋಮಶೇಖರ ಗಾಂಜಿ, ಗ್ರಾಮಲೆಕ್ಕಾಧಿಕಾರಿ ಎಸ್.ಡಿ.ಕುಲಕರ್ಣಿ ಹಾಗೂ ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ ಇದ್ದರು.