ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ನಿಡಘಟ್ಟ ಗ್ರಾಮದಿಂದ ಮದ್ದೂರಿನ ಕೊಲ್ಲಿ ವೃತ್ತವರೆಗೆ ಹಳೆ ಬೆಂಗಳೂರು- ಮೈಸೂರು ಚತುಷ್ಪಥ ರಾಜ್ಯ ಹೆದ್ದಾರಿಯ ಮರು ಡಾಂಬರೀಕರಣ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಶುಕ್ರವಾರ ಚಾಲನೆ ನೀಡಿದರು.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 7.9 ಕೋಟಿ ರು. ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಗೆ ಸ್ಥಳಿಯ ಜನಪ್ರತಿನಿಧಿಗಳೊಂದಿಗೆ ಶಾಸಕ ಉದಯ್ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಅಧಿಕಾರವಧಿಯಲ್ಲಿ ಬೆಂಗಳೂರು- ಮೈಸೂರು ಚರ್ತಷ್ಪಥ ರಸ್ತೆಯನ್ನು ನಿರ್ಮಿಸಲಾಗಿತ್ತು. ಈ ರಸ್ತೆಗೆ ಒಂದರೆರಡು ಬಾರಿ ಡಾಂಬರೀಕರಣ ಮಾಡಲಾಗಿತ್ತು. ಆದರೆ, ಲಘು ಮತ್ತು ಭಾರೀ ವಾಹನಗಳ ಸಂಚಾರದಿಂದಾಗಿ ರಸ್ತೆ ಗುಂಡಿ ಬಿದ್ದುಹಾಳಾಗಿತ್ತು. ಈ ಬಗ್ಗೆ ತಾವು ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಗತ್ಯ 7.9 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದೆ ಎಂದರು.ನಿಡಘಟ್ಟದಿಂದ ರುದ್ರಾಕ್ಷಿಪುರ, ಸೋಮನಹಳ್ಳಿ, ಕೆಸ್ತೂರು ಕ್ರಾಸ್, ಶಿವಪುರದಿಂದ ಕೊಲ್ಲಿ ವೃತ್ತದವೆಗೆ ರಾಜ್ಯ ಚುತುಷ್ಪಥ ರಸ್ತೆಯ ಮರು ಡಾಂಬರೀಕರಣ ಕಾರ್ಯ ಕೈಗೊಳ್ಳಲಾಗಿದೆ. ಮಳೆಗಾಲ ಹೊರತುಪಡಿಸಿ ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಗ್ರಾಪಂ ಅಧ್ಯಕ್ಷ ತಿಮ್ಮೇಗೌಡ, ಮಾಜಿ ಅಧ್ಯಕ್ಷ ಎನ್.ಎಂ.ಪ್ರಕಾಶ್, ಮುಂಖಡರಾದ ದೊರೆಸ್ವಾಮಿ, ಶಿವು, ಮಹದೇವು, ರಾಜಣ್ಣ, ಯತೀಶ್, ಸತೀಶ್ ಸೇರಿದಂತೆ ಇತರರು ಇದ್ದರು.ಗೋವಾ ತಮ್ನಾರ್ ಯೋಜನೆಗೆ ಕದಂಬ ಸೈನ್ಯ ವಿರೋಧ
ಕನ್ನಡಪ್ರಭ ವಾರ್ತೆ ಮಂಡ್ಯಮಹದಾಯಿ ಯೋಜನೆಗೆ ನಿರಂತರವಾಗಿ ತಕರಾರು ತೆಗೆಯುತ್ತಿರುವ ಗೋವಾ ರಾಜ್ಯದ ಹೆಚ್ಚುವರಿ ವಿದ್ಯುತ್ ಮಾರ್ಗಕ್ಕೆ ಕರ್ನಾಟಕದ ೪೩೫ ಎಕರೆ ಅರಣ್ಯ ಬಳಕೆಯಾಗುವ ಗೋವಾ ತಮ್ನಾರ್ ೪೦೦ ಕೆವಿ ವಿದ್ಯುತ್ ಮಾರ್ಗಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಷರತ್ತುಬದ್ಧ ಒಪ್ಪಿಗೆ ನೀಡಿರುವುದಕ್ಕೆ ಕದಂಬಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ವಿರೋಧ ವ್ಯಕ್ತಪಡಿಸಿದ್ದಾರೆ.ವನ್ಯಜೀವಿ ಮಂಡಳಿ ತೀರ್ಮಾನ ಕರ್ನಾಟಕಕ್ಕೆ ವಿರುದ್ಧವಾಗಿದೆ. ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಯೋಜನೆ ವಿಚಾರವಾಗಿ ಇನ್ನೂ ತೀರ್ಮಾನವನ್ನೇ ಕೈಗೊಳ್ಳದಿರುವಾಗ ರಾಷ್ಟ್ರೀಯ ವನ್ಯಜೀವಿ ಮಂಡಳಿ ತರಾತುರಿಯಲ್ಲಿ ನಿರ್ಧಾರ ಕೈಗೊಂಡಿರುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿದೆ. ಗೋವಾ ರಾಜ್ಯದ ಈ ಯೋಜನೆಯನ್ನು ರಾಜ್ಯಸರ್ಕಾರ, ವಿರೋಧಪಕ್ಷಗಳು, ಸಂಸದರು, ಕೇಂದ್ರ ಮಂತ್ರಿಗಳು ಪಕ್ಷಬೇಧ ಮರೆತು ವಿರೋಧಿಸುವ ಗಟ್ಟಿತನವಿಲ್ಲದಿರುವುದೇ ಕಾರಣವೆಂದು ಆರೋಪಿಸಿದ್ದಾರೆ.ಕನ್ನಡಿಗರ ಜೀವನದಿಗಳಾಆದ ಕಾವೇರಿ, ಮಹದಾಯಿ ಯೋಜನೆ ವಿಚಾಆರದಲ್ಲಿ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಗೋವಾ ರಾಜ್ಯದವರಿಗೆ ಪಕ್ಷಾತೀತವಾಗಿ ಸ್ವಾಭಿಮಾನವಿದೆ, ಛಲವಿದೆ. ಅವರೂ ತಮಿಳುನಾಡಿನವರಂತೆ ಯಶಸ್ವಿಯಾಗುತ್ತಿದ್ದಾರೆ. ಅವರಂತೆ ನಮ್ಮವರಿಗೆ ಏಕೆ ಆ ಗಟ್ಟಿತನವಿಲ್ಲ. ಕೇವಲ ರಾಜಕೀಯ ಆರೋಪ-ಪ್ರತ್ಯಾರೋಪಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ರಾಜಕೀಯ ಮಾಡದೆ ಪಕ್ಷಾತೀತವಾಗಿ ಎಲ್ಲರೂ ಪ್ರತಿಭಟಿಸುವಂತೆ ಸಂಘಟನೆಯ ರಾಜ್ಯ ಸಹಕಾರ್ಯದರ್ಶಿ ಬಿ.ಶಿವಕುಮಾರ್, ಜಿಲ್ಲಾ ಸಂಚಾಲಕ ಸಲ್ಮಾನ್ ಪಾಷ ಆಗ್ರಹಿಸಿದ್ದಾರೆ.