ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಶಾಸಕ ಕೆ.ಎಂ.ಉದಯ್ ಚಾಲನೆ

| Published : Aug 05 2025, 11:45 PM IST

ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಶಾಸಕ ಕೆ.ಎಂ.ಉದಯ್ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಮದ್ದೂರು ನಗರವನ್ನು ಸ್ವಚ್ಛವಾಗಿ ಇಡಲು ನಗರದಿಂದ ದೂರದಲ್ಲಿ ಕಸವನ್ನು ವಿಲೇವಾರಿ ಮಾಡಿ ಯಾವುದೇ ಘನತ್ಯಾಜ ವಸ್ತುಗಳು ಸಾರ್ವಜನಿಕವಾಗಿ ತೊಂದರೆ ಆಗದ ಹಾಗೆ ಇಲ್ಲಿ ಘಟಕವನ್ನು ಸ್ಥಾಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಮದ್ದೂರು ಪುರಸಭೆ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ಘನತ್ಯಾಜ್ಯ ವಿಲೇವಾರಿ ಮಾಡಲು ಎಂ.ಆರ್.ಎಫ್. ಘಟಕ ನಿರ್ಮಾಣ ಮಾಡುವ ಕಾಮಗಾರಿಗೆ ಹಾಗೂ ತ್ಯಾಜ್ಯ ವಿಲೇವಾರಿ ಘಟಕದ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಶಾಸಕ ಕೆ.ಎಂ.ಉದಯ್ ಗುದ್ದಲಿ ಪೂಜೆ ನೆರವೇರಿಸಿದರು.

ತಾಲೂಕಿನ ಹೂತಗೆರೆ ವ್ಯಾಪ್ತಿಯ ಅವಸರದಹಳ್ಳಿ ಸಮೀಪ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ವಚ್ಛ ಭಾರತ್ ಅನುದಾನದ 2024-25ನೇ ಸಾಲಿನ 15ನೇ ಹಣಕಾಸು ಅನುದಾನದಡಿ 112.5 ಲಕ್ಷಗಳಿಗೆ ಅನುದಾನ ಬಿಡುಗಡೆಯಾಗಿದ್ದು. ಘಟಕ ‘ಮೆಟೀರಿಯಲ್ ರಿಕವರಿ ಘಟಕ’ದ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಹಿಂದೆ ಪಟ್ಟಣ ಚಿಕ್ಕದಾಗಿತ್ತು, ದಿನೇ ದಿನೇ ನಗರವಾಗಿ ಬೆಳೆಯುತ್ತಿದೆ ಕಸ ವಿಲೇವಾರಿ ಮಾಡಲು ವಿಂಗಡಿಸಲು ಮದ್ದೂರು ತಾಲೂಕಿನ ಹೂತಗೆರೆ ಸಮೀಪ ಜಮೀನು ಖರೀದಿ ಮಾಡಿದರು. ಅಲ್ಲಿ ಸಂಪರ್ಕ ರಸ್ತೆ ಹಾಗೂ ಘನತ್ಯಾಜ್ಯ ವಿಂಗಡಿಸುವ ಸಲುವಾಗಿ ಘಟಕ ನಿರ್ಮಾಣಕ್ಕೆ ಒಂದು ಕೋಟಿ ಹನ್ನೆರಡು ಲಕ್ಷ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭ ಮಾಡುತ್ತಿದ್ದು, ನಗರವನ್ನು ಸ್ವಚ್ಛವಾಗಿ ಇಡಲು ನಗರದಿಂದ ದೂರದಲ್ಲಿ ಕಸವನ್ನು ವಿಲೇವಾರಿ ಮಾಡಿ ಯಾವುದೇ ಘನತ್ಯಾಜ ವಸ್ತುಗಳು ಸಾರ್ವಜನಿಕವಾಗಿ ತೊಂದರೆ ಆಗದ ಹಾಗೆ ಇಲ್ಲಿ ಘಟಕವನ್ನು ಸ್ಥಾಪಿಸಲಾಗಿದೆ ಎಂದರು.

ಇದರ ನಿರ್ವಹಣೆಯನ್ನು ಸಂಪೂರ್ಣ ಪುರಸಭೆಯವರೇ ಮಾಡುತ್ತಾರೆ ಎಂದರು.

ಈ ವೇಳೆ ಪುರಸಭಾ ಅಧ್ಯಕ್ಷ ಕೋಕಿಲ ಅರುಣ್ ಕುಮಾರ್. ಉಪಾಧ್ಯಕ್ಷ ಟಿ.ಆರ್. ಪ್ರಸನ್ ಕುಮಾರ್. ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ. ಸದಸ್ಯರಾದ ಸರ್ವಮಂಗಳ, ಸಚಿನ್, ಸಿದ್ದರಾಜು,ಬಸವರಾಜು, ಪ್ರಮೀಳಾ, ಪ್ರಭಾರ ಮುಖ್ಯಾಧಿಕಾರಿ ಶ್ರೀಧರ್, ಎಂಜಿನಿಯರ್ ಅರ್ಚನಾ. ಸ್ಥಳೀಯ ಮುಖಂಡರಾದ ಶಂಕರ್ ಲಿಂಗಯ್ಯ, ಮಹೇಶ್‌ ಸೇರಿದಂತೆ ಹಲವರು ಹಾಜರಿದ್ದರು.