ಸಾರಾಂಶ
ಬಸವ ತತ್ವಗಳು ಜಗತ್ತಿಗೆ ಮಾದರಿಯಾಗಿವೆ. ಅದಕ್ಕಾಗಿ ನಮ್ಮ ಸರ್ಕಾರ ಬಸವ ಜಯಂತಿಯನ್ನು ರಾಜ್ಯಮಟ್ಟದಲ್ಲಿ ಅತ್ಯಂತ ವೈಭವದಿಂದ ಆಚರಣೆ ಮಾಡಲಾಗುತ್ತಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ಬಸವ ತತ್ವಗಳು ಜಗತ್ತಿಗೆ ಮಾದರಿಯಾಗಿವೆ. ಅದಕ್ಕಾಗಿ ನಮ್ಮ ಸರ್ಕಾರ ಬಸವ ಜಯಂತಿಯನ್ನು ರಾಜ್ಯಮಟ್ಟದಲ್ಲಿ ಅತ್ಯಂತ ವೈಭವದಿಂದ ಆಚರಣೆ ಮಾಡಲಾಗುತ್ತಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ನಗರದ ವಿಜಯ ಮಹಾಂತೇಶ್ವರ ಶ್ರೀಮಠದ ಮುಂದೆ ಬಸವ ಜಯಂತಿ ನಿಮಿತ್ತ ಕರ್ನಾಟಕ ಸರ್ಕಾರ ಆರಂಭಿಸಿದ ಬಸವ ರಥವನ್ನು ಅಣ್ಣ ಬಸವಣ್ಣನವರ ವಚನ ಕಟ್ಟುಗಳನ್ನು ತೆಲೆಯ ಮೇಲೆ ಹೊತ್ತು ರಥವನ್ನು ಸ್ವಾಗತಿಸಿಕೊಂಡು ಮಾತನಾಡಿ, ಇಂದಿನ ಯುವಕರು ಅಣ್ಣ ಬಸವಣ್ಣನವರ ವಚನಗಳನ್ನು ಪ್ರತಿದಿನ ಒದಬೇಕು. ಅವುಗಳನ್ನು ಪಾಲನೆ ಮಾಡಲು ಮುಂದಾಗಬೇಕು. ಇದೇ ತಿಂಗಳ ೨೯ ಹಾಗೂ ೩೦ರಂದು ರಾಜ್ಯ ಸರ್ಕಾರ ಬಸವಣ್ಣನವರ ಐಕ್ಯ ತಾಣ ಕೂಡಲಸಂಗಮದಲ್ಲಿ ರಾಜ್ಯಮಟ್ಟದ ಬಸವ ಜಯಂತಿ ಆಚರಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರು ಆಗಮಿಸುವರು. ಈ ರಥ ಶುಕ್ರವಾರ ಇಳಕಲ್ಲದಿಂದ ಹುನಗುಂದ, ಬಾಗಲಕೋಟೆ ಮಾರ್ಗವಾಗಿ ಸಂಚರಿಸಿ ಕೂಡಲಸಂಗಮಕ್ಕೆ ಬರಲಿದೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಗುರುಮಹಾಂತ ಶ್ರೀಗಳು ಮಾತನಾಡಿ, ಅಣ್ಣ ಬಸವಣ್ಣ ನಮ್ಮ ಆರಾಧ್ಯ ದೇವರು. ಅವರ ವಚನಗಳು ಇಂದಿಗೂ ಜಗತ್ತಿನಲ್ಲಿ ಪ್ರಸಿದ್ದವಾಗಿವೆ. ಅವುಗಳನ್ನು ಒದುವುದರಿಂದ ಮನಸಿಗೆ ನೆಮ್ಮದಿ ಹಾಗೂ ಶಾಂತಿ ಲಭಿಸಲಿದೆ ಎಂದರು.ಬಸವ ರಥ ಶ್ರೀಮಠದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಡಾ.ಅಂಬೇಡ್ಕರ್ ವೃತ್ತ, ಕಂಠಿ ವೃತ್ತ ಮಾರ್ಗವಾಗಿ ಬಸವ ವ್ರತ್ತಕ್ಕೆ ಬಂದು ಅಲ್ಲಿಂದ ಹುನಗುಂದ ಪಟ್ಟಣಕ್ಕೆ ಪ್ರಯಾಣ ಬೆಳಸಿತು.