ಕನ್ನಡಪ್ರಭ ವಾರ್ತೆ ಯಳಂದೂರು
ತಾಲೂಕಿನ ಅಂಬಳೆ, ದುಗ್ಗಹಟ್ಟಿ, ಕಂದಹಳ್ಳಿ ಗ್ರಾಮದ ವಿವಿಧ ಜನಾಂಗದ ಬಡವಾವಣೆಗಳ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಭೂಮಿಪೂಜೆ ನೆರವೇರಿಸಿದರು.ಈ ವೇಳೆ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಇಡೀ ಕ್ಷೇತ್ರದ ಎಲ್ಲಾ ಗ್ರಾಮಗಳ, ಎಲ್ಲಾ ಜನಾಂಗಗಳ ಬೀದಿಗೂ ರಸ್ತೆ, ಚರಂಡಿ ಅಭಿವೃದ್ಧಿ ಮಾಡುವುದು ನನ್ನ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ನಾನು ಕಾರ್ಯನಿರತನಾಗಿದ್ದೇನೆ. ಕಳೆದ 2 ದಿನಗಳ ಅವಧಿಯಲ್ಲಿ 4.85 ಕೋಟಿ ರು. ವೆಚ್ಚದ ಕಾಮಗಾರಿಗಳಿಗೆ ಚಾಲನೆಯನ್ನು ನೀಡಿದ್ದೇನೆ. ಹೋದಲ್ಲೆಡೆ ನನಗೆ ಇನ್ನೂ ಅನೇಕ ಕೆಲಸಗಳು ಆಗಿಲ್ಲವೆಂದು ಸಾರ್ವಜನಿಕರು ದೂರು ನೀಡುತ್ತಾರೆ. ಇದನ್ನು ನಯವಾಗಿ ಪುರಸ್ಕರಿಸಿ ಆ ಕೆಲಸಗಳನ್ನು ಪೂರ್ಣಗೊಳಿಸಲು ನಾನು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದರು.
ಮಹಿಳೆಯರೊಂದಿಗೆ ಸಂವಾದ:ಬಳಿಕ ಕಂದಹಳ್ಳಿ ಗ್ರಾಮದ ಉಪ್ಪಾರ ಜನಾಂಗದ ಬೀದಿಯಲ್ಲಿ ಮಹಿಳೆಯರ ಜೊತೆ ಶಾಸಕ ಎ.ಆರ್. ಕೃಷ್ಣಮೂರ್ತಿ ಕೆಲ ಕಾಲ ಸಂವಾದ ನಡೆಸಿದರು. ಬಿಸಿಲಿನ ಬೇಗೆಯಲ್ಲೂ ತಮಗಾಗಿ ಕಾಯುತ್ತಿದ್ದ ಮಹಿಳೆಯರ ಜೊತೆ ಉಭಯ ಕುಶಲೋಪರಿ ವಿಚಾರಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಕೆಆರ್‌ಐಡಿಎಲ್‌ನ ಎಇಇ ಚಿಕ್ಕಲಿಂಗಯ್ಯ, ಜೆಇ ಶ್ರೀನಿವಾಸ್ ಮುಖಂಡ ಕಂದಹಳ್ಳಿ ನಂಜುಂಡಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಅಂಬಳೆ ಸಿದ್ಧನಾಯಕ, ನವೀನ್, ಪಿಡಿಒ ಸಿ.ಎನ್. ಕಾವ್ಯ ಸೇರಿದಂತೆ ಅನೇಕರು ಇದ್ದರು.
---
2904ವೈಎಲ್‌ಡಿಪಿ01ಯಳಂದೂರು ತಾಲೂಕಿನ ಕಂದಹಳ್ಳಿ ಗ್ರಾಮದ ಉಪ್ಪಾರ ಬಡಾವಣೆಯ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಶಾಸಕ ಎ.ಆರ್. ಕೃಷ್ಣಮೂರ್ತಿ ಚಾಲನೆ ನೀಡಿ ಮಹಿಳೆಯರ ಜೊತೆ ಕೆಲ ಕಾಲ ಸಂವಾದ ನಡೆಸಿದರು.