ಶಾಸಕ ಕೃಷ್ಣಮೂರ್ತಿಗೆ ಎಆರ್‌ಕೆ ಅಭಿಮಾನಿಗಳಿಂದ ಸನ್ಮಾನ

| Published : Oct 02 2024, 01:09 AM IST

ಶಾಸಕ ಕೃಷ್ಣಮೂರ್ತಿಗೆ ಎಆರ್‌ಕೆ ಅಭಿಮಾನಿಗಳಿಂದ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದಲ್ಲಿ ರಾಜ್ಯ ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷರಾಗಿ ನೇಮಕವಾಗಿರುವ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರನ್ನು ಎಆರ್‌ಕೆ ಅಭಿಮಾನಿಗಳ ಬಳಗದಿಂದ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಜ್ಯ ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷರಾಗಿ ನೇಮಕವಾಗಿರುವ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರನ್ನು ಎಆರ್‌ಕೆ ಅಭಿಮಾನಿಗಳ ಬಳಗದಿಂದ ಸನ್ಮಾನಿಸಲಾಯಿತು.

ನಗರದ ಅವರ ನಿವಾಸದಲ್ಲಿ ಎಆರ್‌ಕೆ ಅಭಿಮಾನಿಗಳ ಬಳಗದಿಂದ ಭಾರಿ ಗಾತ್ರದ ಹಾರ ಹಾಕಿ ಸಿಹಿ ಹಂಚಿಸುವ ಮೂಲಕ ತಮ್ಮ ನೆಚ್ಚಿನ ನಾಯಕರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಸಂಭ್ರಮ ಆಚರಣೆ ಮಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಎ.ಆರ್.ಕೃಷ್ಣಮೂರ್ತಿ, ವಿಧಾನಸಭೆಯ ಸಬಾಧ್ಯಕ್ಷರು ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯನ್ನು ರಚನೆ ಮಾಡಿದ್ದು, ನನ್ನನ್ನು ಸೇರಿದಂತೆ ರಾಜ್ಯ ವಿವಿಧ ಭಾಗಗಳಿಂದ ಆಯ್ಕೆಯಾಗಿರುವ ೧೫ ಮಂದಿ ಶಾಸಕರು ಹಾಗೂ ೫ ಮಂದಿ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಬಳಿಕ ಈ ಸಮಿತಿಯ ಅಧ್ಯಕ್ಷನ್ನಾಗಿ ನೇಮಕಮಾಡಿಕೊಂಡಿರುವುದು ತುಂಬಾ ಸಂತಸ ತಂದಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಎರಡು ಇಲಾಖೆಗಳ ಸಚಿವರು, ವಿಧಾನಸಭೆ ಸಭಾಧ್ಯಕ್ಷರು ಹಾಗೂ ಸಮಿತಿಯ ಎಲ್ಲಾ ಶಾಸಕರಿಗೆ ಅಭಾರಿಯಾಗಿದ್ದಾರೆ. ಎರಡು ವರ್ಗಗಳ ಕಲ್ಯಾಣ ಯೋಜನೆಗಳು ಅರ್ಹ ಬಡವರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಮುಖಂಡ ಕಂದಹಳ್ಳಿ ನಂಜುಂಡಸ್ವಾಮಿ ನೂತನ ಅಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿ, ನಮ್ಮ ನೆಚ್ಚಿನ ನಾಯಕರಾದ ಎ.ಆರ್.ಕೃಷ್ಣಮುರ್ತಿ ಅವರು ಹಿಂದುಳಿದ ಹಾಗೂ ಅಲ್ಪ ಸಂಖ್ಯಾತರ ಘಟಕ ಅಧ್ಯಕ್ಷರಾಗಿರುವುದು ಹೆಮ್ಮೆ ತಂದಿದೆ. ನಮ್ಮ ಜಿಲ್ಲೆಯಲ್ಲಿ ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರ ಸಮುದಾಯ ಹೆಚ್ಚಾಗಿದ್ದು, ಈ ಸಮುದಾಯಗಳಿಗೆ ಹೆಚ್ಚಿನ ಯೋಜನೆಗಳನ್ನು ಜಾರಿ ಮಾಡುವ ಜೊತೆಗೆ ಸವಲತ್ತುಗಳು ಹೆಚ್ಚು ದೊರೆಯುವಂತೆ ಮಾಡಲಿ, ಅವರಿಗೆ ಇನ್ನು ಸಹ ಹೆಚ್ಚಿನ ರಾಜಕೀಯ ಅಧಿಕಾರ ಲಭಿಸಲಿ ಎಂದು ಶುಭ ಕೋರಿದರು.

ಈ ಸಂದರ್ಭದಲ್ಲಿ ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ಯಳಂದೂರು ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಬುದಿತಿಟ್ಟು ಸತೀಶ್, ಹೊನ್ನೂರು ರಾಘವೇಂದ್ರ, ಮಸಣಾಪುರ ವಿಜಯಾ, ದಾಸನಹುಡಿ ಸಚಿನ್, ಗೌಡಹಳ್ಳಿ ಮಹೇಶ್, ಬಸವರಾಜು, ರಾಜೇಶ್, ಮೊದಲಾದವರು ಇದ್ದರು.