ಅಭಿವೃದ್ಧಿ ಕಾರ್ಯಗಳಿಗೆ ಶಾಸಕಿ ಲತಾ ಮಲ್ಲಿಕಾರ್ಜುನ ಚಾಲನೆ

| Published : Jul 31 2024, 01:06 AM IST

ಸಾರಾಂಶ

ಸ್ಥಳೀಯ ಹರಿಹರ ರಸ್ತೆಯ ಆಶ್ರಯ ಬಡಾವಣೆಯ ಸ.ಹಿ.ಪ್ರಾ. ಶಾಲೆಯಲ್ಲಿ ನೀರು ಸಂಗ್ರಹಣಾ ಟ್ಯಾಂಕ್ ನಿರ್ಮಾಣ ಸೇರಿದಂತೆ ಭೌತಿಕ ಮೂಲ ಸೌಲಭ್ಯಗಳ ಒದಗಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ಹರಪನಹಳ್ಳಿ: ಪಟ್ಟಣ, ತಾಲೂಕಿನ ವಿವಿಧ ಅಭಿವೃದ್ಧಿ ಕಾರ್ಯಗಳ ನಿರ್ಮಾಣ ಕಾಮಗಾರಿಗಳಿಗೆ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಮಂಗಳವಾರ ಚಾಲನೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ₹1.46 ಕೋಟಿ ಮೂರು ಮಹಿಳಾ ವಿಶ್ರಾಂತಿ ಕೊಠಡಿಗಳು, 10 ಮಹಿಳಾ ಶೌಚಾಲಯಗಳು, 10 ಪುರುಷ ಶೌಚಾಲಯಗಳು, ಪ್ರಾಂಶುಪಾಲರ ಕೊಠಡಿ ನವೀಕರಣ, ಕಚೇರಿ ನವೀಕರಣ, ಗ್ರಂಥಾಲಯ ನವೀಕರಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಸ್ಥಳೀಯ ಹರಿಹರ ರಸ್ತೆಯ ಆಶ್ರಯ ಬಡಾವಣೆಯ ಸ.ಹಿ.ಪ್ರಾ. ಶಾಲೆಯಲ್ಲಿ ನೀರು ಸಂಗ್ರಹಣಾ ಟ್ಯಾಂಕ್ ನಿರ್ಮಾಣ ಸೇರಿದಂತೆ ಭೌತಿಕ ಮೂಲ ಸೌಲಭ್ಯಗಳ ಒದಗಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ಬಾಣಗೇರಿ ಜೆಯು ಎಚ್‌ ಪಿಎಸ್‌ ಶಾಲೆಯಲ್ಲಿ 2 ಕೊಠಡಿಗಳ ನಿರ್ಮಾಣಕ್ಕೆ, ಮೇಗಳಪೇಟೆ ಶಾಲೆಯಲ್ಲಿ 1 ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.

ಬಾಗಳಿ ಗ್ರಾಮದಲ್ಲಿ ಸಿಸಿ ರಸ್ತೆ, ಹಿಕ್ಕಿಂಗೇರಿಯಲ್ಲಿ ಸಿಸಿ ರಸ್ತೆ, ಕಾಲುವೆ ನಿರ್ಮಾಣ, ಕಡಬಗೇರಿ, ಕೊಮಾರನಹಳ್ಳಿ, ದ್ಯಾಪನಾಯಕನಹಳ್ಳಿ, ನಿಚ್ಚವನಹಳ್ಳಿ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ತಲಾ ಒಂದೊಂದು ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಮುತ್ತಿಗೆ ಗ್ರಾಮದಲ್ಲಿ ಇಟಗಿ-ಕಂಚಿಕೇರಿ ರಾಜ್ಯ ಹೆದ್ದಾರಿ 151 ಕಿ.ಮೀ. ರಸ್ತೆ ಅಭಿವೃದ್ಧಿ ಹಾಗೂ ಇಟಗಿ -ಕಂಚಿಕೇರಿ ರಸ್ತೆ ಅಭಿವೃದ್ಧಿ, ಅಳಗಂಚಿಕೇರಿಯಲ್ಲಿ ಸಿಸಿ ರಸ್ತೆ ಉದ್ಘಾಟನೆಯನ್ನು ಶಾಸಕರು ನೆರವೇರಿಸಿದರು. ಗುತ್ತಿಗೆದಾರರಾದ ಚಿದಾನಂದ ಗುಡದೂರು, ತೋಟಪ್ಪಶೆಟ್ಟಿ, ಎನ್‌.ಶಂಕರ, ಮತ್ತೂರು ಬಸವರಾಜ, ಪುರಸಭಾ ಸದಸ್ಯರಾದ ಉದ್ದಾರ ಗಣೇಶ, ಮಂಜುನಾಥ ಇಜಂತಕರ್, ಜಾಕೀರ ಹುಸೇನ್, ಎಇಇ ಪ್ರಕಾಶ ಪಾಟೀಲ್, ಎಇಇ ನಾಗಪ್ಪ, ಎಲ್. ಮಂಜನಾಯ್ಕ, ಕನಕನ ಬಸ್ಸಾಪುರ ಮಂಜುನಾಥ, ಶಿವರಾಜ, ಒ.ಮಹಾಂತೇಶ ಪಾಲ್ಗೊಂಡಿದ್ದರು.