ಸಾರಾಂಶ
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಮುಂಚೂಣಿ ಹೋರಾಟ ನಡೆಸಿ ಜಗತ್ತಿಗೆ ಯುದ್ದದಿಂದಲ್ಲದೆ ಕೇವಲ ಶಾಂತಿಯಿಂದಲೇ ಸ್ವಾತಂತ್ರ್ಯ ತಂದುಕೊಡಬಹುದೆಂದು ತೋರಿಸಿದ ಮಹಾತ್ಮ ಗಾಂಧಿಜೀ ಅವರ ಸಂದೇಶಗಳನ್ನು ಪಾಲನೆ ಮಾಡಿ
ಚವಡಾಪುರ: ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಮುಂಚೂಣಿ ಹೋರಾಟ ನಡೆಸಿ ಜಗತ್ತಿಗೆ ಯುದ್ದದಿಂದಲ್ಲದೆ ಕೇವಲ ಶಾಂತಿಯಿಂದಲೇ ಸ್ವಾತಂತ್ರ್ಯ ತಂದುಕೊಡಬಹುದೆಂದು ತೋರಿಸಿದ ಮಹಾತ್ಮ ಗಾಂಧಿಜೀ ಅವರ ಸಂದೇಶಗಳನ್ನು ಪಾಲನೆ ಮಾಡಿ ಎಂದು ಶಾಸಕ ಎಂ.ವೈ ಪಾಟೀಲ್ ಕರೆ ನೀಡಿದರು.
ಅಫಜಲ್ಪುರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮ ಗಾಂಧಿಜೀ ಜಯಂತಿ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಗಾಂಧಿಜೀ ತತ್ವ ಆದರ್ಶಗಳನ್ನು ಜಗತ್ತಿನ ಎಲ್ಲಾ ದೇಶಗಳು ಅನುಸರಿಸುತ್ತವೆ. ಇನ್ನೂ ಎಷ್ಟು ವರ್ಷಗಳು ಉರುಳಿದರೂ ಕೂಡ ಗಾಂಧಿಜೀ ಆದರ್ಶಗಳು ಜೀವಂತವಾಗಿರುತ್ತವೆ ಎಂದರು. ಈ ಸಂದರ್ಭದಲ್ಲಿ ಪ್ರಮುಖರಾದ ರಮೇಶ ಪೂಜಾರಿ, ಚಂದು ದೇಸಾಯಿ, ಸಿದ್ದಾರ್ಥ ಬಸರಿಗಿಡ, ಶರಣು ಕುಂಬಾರ, ಶಿವಾನಂದ ಗಾಡಿ, ಅನಸೂಯ ಸೂಲೇಕರ, ಜ್ಞಾನೇಶ್ವರಿ ಪಾಟೀಲ್, ಪ್ರವೀಣ ಕಲ್ಲೂರ, ವಿಶ್ವನಾಥ ಮಲಘಾಣ, ಎಸ್.ಎಸ್ ಪಾಟೀಲ್, ರಾಜಕುಮಾರ ಬಬಲಾದ ಸೇರಿದಂತೆ ಅನೇಕರು ಇದ್ದರು.