ಒಂದೇ ರಾತ್ರಿ ಸುರಿದ ಮಳೆಗೆ ಹಳ್ಳಗಳು ತುಂಬಿ ಹರಿದಿವೆ. ಜತೆಗೆ ಹುಬ್ಬೆ ಹುಣಸೆ ಜಲಾಶಯ ಭರ್ತಿಯಾಗಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು

ಕನ್ನಡಪ್ರಭ ವಾರ್ತೆ ಹನೂರು

ಒಂದೇ ರಾತ್ರಿ ಸುರಿದ ಮಳೆಗೆ ಹಳ್ಳಗಳು ತುಂಬಿ ಹರಿದಿವೆ. ಜತೆಗೆ ಹುಬ್ಬೆ ಹುಣಸೆ ಜಲಾಶಯ ಭರ್ತಿಯಾಗಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು

ಸಮೀಪ ಉದ್ದನೂರ ಬಳಿ ಇರುವ ಹುಬ್ಬೆ ಹುಣಸೆ ಜಲಾಶಯಕ್ಕೆ ಬಾಗಿನ ಅರ್ಪಿಸಿ ನಂತರ ಮಾತನಾಡಿ, ಒಂದು ರಾತ್ರಿಯ ಎರಡು ಮೂರು ಗಂಟೆ ಬಂದ ಮಳೆಗೆ ಇಷ್ಟು ಹಳ್ಳ ಬಂದು ಇಷ್ಟೆಲ್ಲಾ ಕೇವಲ ಒಂದೇ ಒಂದು ದಿನದಲ್ಲಿ ಡ್ಯಾಂ ಎಲ್ಲ ತುಂಬಿ ಹೋಯಿತು. ಭಗವಂತ ನಮಗೆಲ್ಲರಿಗೂ, ಅದರಲ್ಲೂ ರೈತರಿಗೆ ಕರುಣಿಸಿರುವ ಮಳೆ. ನಾವೆಲ್ಲ ರೈತರೇ, ನಿಜಕ್ಕೂ ಉತ್ತಮ ಮಳೆಯಾಗಿ ಈ ಭಾಗದ ರೈತರ ಜೀವನ ರೆಡಿಯಾಗಿರುವ ಜಲಾಶಯ ವರದಾನವಾಗಿದೆ ಎಂದರು.

ಕಳೆದ ಗಣೇಶ ಹಬ್ಬದವರೆಗೂ ನೀರಿಗೆ ಹಾಹಾಕಾರವಿತ್ತು. ಟ್ಯಾಂಕರ್ ನೀರಿಗೂ ಪರದಾಟ, ಬೋರ್‌ವೆಲ್‌ಗಳಲ್ಲಿ ನೀರಿಲ್ಲದ ಪರಿಸ್ಥಿತಿ ಇತ್ತು. ರಾಜ್ಯದಲ್ಲೇ ಅತಿ ಕಡಿಮೆ ಮಳೆ ಬಿದ್ದ ತಾಲೂಕು ಎಂಬ ಹಣೆಪಟ್ಟಿ ಹೊತ್ತಿತ್ತು ಎಂದರು.

ಹರ್ಷಗೊಂಡ ರೈತರು:

ಉತ್ತಮ ಮಳೆಯಾಗುವ ಮೂಲಕ ಜಲಾಶಯ ಭರ್ತಿ ಹರ್ಷಗೊಂಡ ರೈತರು ಬಾಗಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಚಾಮುಲ್ ನಿರ್ದೇಶಕ ಮಹದೇವ ಪ್ರಸಾದ್, ಗಿರೀಶ್ ಕುಮಾರ್, ಚಂದ್ರು ನೀರಾವರಿ ಇಲಾಖೆ ಇಂಜಿನಿಯರ್ ಕರುಣಾಮಯಿ, ವಿವಿಧ ಭಾಗಗಳಿಂದ ಆಗಮಿಸಿದ್ದ ರೈತ ಮುಖಂಡರು ಇದ್ದರು.