ಕನ್ನಡಪ್ರಭ ವಾರ್ತೆ ಬಾಗಲಕೋಟೆಕರ್ತವ್ಯ ಲೋಪ ಹಾಗೂ ಕರ್ತವ್ಯ ನಿರ್ಲಕ್ಷ್ಯ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜಕುಮಾರ ಯರಗಲ್ ಅವರನ್ನು ಅಮಾನತು ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಶಿಸ್ತು ಪ್ರಾಧಿಕಾರ ಮತ್ತು ಆಯುಕ್ತ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕರ್ತವ್ಯ ಲೋಪ ಹಾಗೂ ಕರ್ತವ್ಯ ನಿರ್ಲಕ್ಷ್ಯ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜಕುಮಾರ ಯರಗಲ್ ಅವರನ್ನು ಅಮಾನತು ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಶಿಸ್ತು ಪ್ರಾಧಿಕಾರ ಮತ್ತು ಆಯುಕ್ತ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.

ಡಾ.ರಾಜಕುಮಾರ ಯರಗಲ್ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಇವರ ಪುತ್ರಿ ಡಾ.ಅಂಕಿತಾ ಯರಗಲ್ ಪೂರ್ಣಾವಧಿ ಎಂಡಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದ ಅವಧಿಯಲ್ಲೇ ಬಾಗಲಕೋಟೆಯ ವಾಂಬೆ ಕಾಲೋನಿಯಲ್ಲಿರುವ ನಮ್ಮ ಕ್ಲಿನಿಕ್‌ನಲ್ಲಿ ಗುತ್ತಿಗೆ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರಿಗೆ ₹ 75 ಸಾವಿರ ವೇತನ ಪಾವತಿಸಿರುವುದಾಗಿ ಹಾಗೂ ಅವರು ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿದ್ದರು. ನಿಯಮಬಾಹಿರವಾಗಿ ವೇತನ ಪಾವತಿ ಮತ್ತು 2 ಕಡೆಗಳಲ್ಲಿ ಹಾಜರಾತಿ ದಾಖಲಾಗಿತ್ತು. ಅಲ್ಲದೇ ಸರ್ಕಾರಿ ಅಧಿಕಾರಿಗೆ ಇರಬೇಕಾದ ಕನಿಷ್ಠ ಮಟ್ಟದ ವೃತ್ತಿಪರತೆ ಮತ್ತು ಶಿಸ್ತನ್ನು ಪಾಲಿಸದೆ ಸಹೋದ್ಯೋಗಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರೊಂದಿಗೆ ಹೊಣೆಗೇಡಿತನ ವರ್ತನೆಯನ್ನು ಡಾ.ರಾಜಕುಮಾರ ಯರಗಲ್ ಮಾಡುತ್ತಿದ್ದರು ಎಂದು ಜಿಪಂ ಸಿಇಒ ಅವರ ವರದಿಯಲ್ಲಿ ಹೇಳಲಾಗಿದೆ. ಅಮಾನತು ಅವಧಿಯಲ್ಲಿ ಜೀವನಾಂಶ ಭತ್ಯೆಯನ್ನು ಪಡೆಯಲು ಸಲುವಾಗಿ ಡಾ.ರಾಜಕುಮಾರ ಯರಗಲ್ ಅವರನ್ನು ಗದಗ ಜಿಲ್ಲಾಸ್ಪತ್ರೆಗೆ ತುರ್ತು ಚಿಕಿತ್ಸಾ ವೈದ್ಯಾಧಿಕಾರಿ ಹುದ್ದೆಗೆ ಸ್ಥಳಾಂತರಿಸಲಾಗಿದೆ.

ಈಗಾಗಲೇ ಡಾ.ರಾಜಕುಮಾರ್ ಯರಗಲ್ ಅವರು ನಾಲ್ಕು ಬಾರಿ ಅಮಾನತು ಆಗಿದ್ದಾರೆ ಹೇಳಲಾಗುತ್ತಿದ್ದು, ಸ್ಥಳೀಯ ಶಾಸಕ ಉಮೇಶ ಮೇಟಿ ಅವರ ಮಾವನವರಾಗಿದ್ದಾರೆ. ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಡಿಎಚ್‌ಒ ಹುದ್ದೆಗೆ ಲಾಬಿ ಮಾಡಿ ಬಾಗಲಕೋಟೆಯಲ್ಲಿ ಇರುತ್ತಿದ್ದರು. ಮಾಜಿ ಶಾಸಕ ದಿ.ಎಚ್.ವೈ.ಮೇಟಿ ಅವರ ಅಳಿಯಂದಿರಾಗಿದ್ದಾರೆ.