ಹನೂರಿನಲ್ಲಿ ಬ್ಯಾರಿಕೇಡ್‌ ಕಾಮಗಾರಿ ಪರಿಶೀಲಿಸಿದ ಶಾಸಕ ಎಂ.ಆರ್.ಮಂಜುನಾಥ್

| Published : Aug 10 2024, 01:36 AM IST

ಹನೂರಿನಲ್ಲಿ ಬ್ಯಾರಿಕೇಡ್‌ ಕಾಮಗಾರಿ ಪರಿಶೀಲಿಸಿದ ಶಾಸಕ ಎಂ.ಆರ್.ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಹನೂರು ಪಟ್ಟಣದ ಪ್ರಮುಖ ಮುಖ್ಯ ರಸ್ತೆ ಎರಡು ಬದಿಯಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ನಿರ್ಮಾಣವಾಗುತ್ತಿರುವ ಬ್ಯಾರಿಕೇಡ್ ಕಾಮಗಾರಿಯನ್ನು ಶಾಸಕ ಎಂ.ಆರ್‌. ಮಂಜುನಾಥ್‌ ಅವರು ಪರಿಶೀಲನೆ ನಡೆಸಿದರು.

ಹನೂರು: ಪಟ್ಟಣದ ಪ್ರಮುಖ ಮುಖ್ಯ ರಸ್ತೆ ಎರಡು ಬದಿಯಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ನಿರ್ಮಾಣವಾಗುತ್ತಿರುವ ಬ್ಯಾರಿಕೇಡ್ ಕಾಮಗಾರಿಯನ್ನು ಶಾಸಕ ಎಂ.ಆರ್‌. ಮಂಜುನಾಥ್‌ ಅವರು ಪರಿಶೀಲನೆ ನಡೆಸಿದರು.

₹108 ಕೋಟಿ ವೆಚ್ಚದ ಕೆಶಿಪ್ ರಸ್ತೆ ಕಾಮಗಾರಿ ಪರಿಶೀಲಿಸಿದ ನಂತರ ಗುತ್ತಿಗೆದಾರರ ಜೊತೆ ಮಾತನಾಡಿದ ಅವರು, ಎರಡು ರಸ್ತೆ ಬದಿಯಲ್ಲಿ ಮಾಡಲಾಗುತ್ತಿರುವ ಬ್ಯಾರಿಕೇಡ್ ಗುಣಮಟ್ಟದಿಂದ ಕೂಡಿಲ್ಲ. ಜೊತೆಗೆ ಅದಕ್ಕೆ ಬಣ್ಣ ಬಳಿಯುತ್ತಿರುವುದು ಮಣ್ಣು ಮತ್ತು ಎರಡು ಬದಿಯಲ್ಲಿರುವ ಕಂಬಿಗಳಲ್ಲಿ ಧೂಳನ್ನು ಸ್ವಚ್ಛಗೊಳಿಸದೆ ಬಣ್ಣ ಬಳಿಯಲಾಗುತ್ತಿದೆ. ಕಳಪೆ ಮಟ್ಟದ ಕಾಮಗಾರಿಯಾಗಿದ್ದು, ಕಾಮಗಾರಿ ಉತ್ತಮ ಗುಣಮಟ್ಟದ ಪೈಪ್‌ಗಳನ್ನು ಬಳಸಿ ಬ್ಯಾರಿಕೇಡ್ ನಿರ್ಮಾಣ ಮಾಡಬೇಕು ಎಂದು ಸೂಚನೆ ನೀಡಿದರು.

ಪಟ್ಟಣ ಪ್ರದೇಶಗಳಲ್ಲಿ ಹಾಕಲಾಗುತ್ತಿರುವ ಗುಣಮಟ್ಟದ ಪೈಪ್ ಬಳಸಿಕೊಂಡು ಬ್ಯಾರಿಕೇಡ್ ನಿರ್ಮಾಣ ಮಾಡಬೇಕು. ಮಾಡುತ್ತಿರುವ ಜೋಡಣೆ ಸಹ ಸರಿಯಾದ ಕ್ರಮವಲ್ಲ, ನಿಯಮಾನುಸಾರದಂತೆ ಎರಡು ಕಡೆ ರಸ್ತೆ ಬದಿಗಳಲ್ಲಿ ಅಳವಡಿಸಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವ ಮೂಲಕ ಬಿಲ್ ತಡೆಹಿಡಿಯಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು.ಪಟ್ಟಣ ಹಾಗೂ ಮಂಗಲ ಕಾಮಗೆರೆ ವಿವಿಧ ಗ್ರಾಮಗಳಲ್ಲಿ ಅಳವಡಿಸಿರುವ ಬ್ಯಾರಿಕೇಡ್ ಪರಿಶೀಲಿಸಿ ಲೋಪ ದೋಷವಿಲ್ಲದಂತೆ ಉತ್ತಮ ರೀತಿಯಲ್ಲಿ ಜೋಡಣೆ ಮಾಡಬೇಕು. ಅದಕ್ಕೆ ಸೂಕ್ತವಾದ ಬಣ್ಣ ಬಳಿಯುವ ಮೂಲಕ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.