ಸಾರಾಂಶ
ಕೋಮುಲ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಶಾಸಕ ನಾರಾಯಣಸ್ವಾಮಿ ಅವರಿಗೆ ಯಾವುದೇ ಆಸೆ ಇರಲಿಲ್ಲವಂತೆ, ಆದರೆ ಅಲ್ಲಿ ರೈತರ ಹೆಸರಲ್ಲಿ ಕೋಟ್ಯತರ ಹಣ ದುರುಪಯೋಗವಾಗಿದ್ದು, ಆ ಹಣವನ್ನು ಮರಳಿ ಅರ್ಹರಿಗೆ ಕೊಡಿಸುವ ಉದ್ದೇಶದಿಂದ ಚುನಾವಣೆಯಲ್ಲಿ ಸರ್ಧಿಸಲಿದ್ದಾರಂತೆ. ಇದಕ್ಕಾಗಿ ಮತದಾರರ ಬೆಂಬಲ ಕೋರಿದ್ದಾರೆ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕೋಮುಲ್‌ನಲ್ಲಿ ರೈತ ಹೆಸರಿನಲ್ಲಿ ನಡೆದಿರುವ ಕೋಟ್ಯತರ ರು.ಗಳ ಅವ್ಯವಹಾರವನ್ನು ತಡೆಗಟ್ಟಿ ಮತ್ತೆ ರೈತರಿಗೇ ಹಣವನ್ನು ವಾಪಸ್ ಕೊಡಿಸಲು ತಾವು ಈ ಬಾರಿ ಕೋಮುಲ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.ತಾಲೂಕಿನ ಬೂದಿಕೋಟೆ ಹೋಬಳಿಯ ವ್ಯಾಪ್ತಿಯ ಗ್ರಾಮೀಣ ರಸ್ತೆಗಳಿಗೆ ೬ ಕೋಟಿ ವೆಚ್ಚದಲ್ಲಿ ಡಾಂಬರೀಕರಣಕ್ಕೆ ಭೂಮಿ ಪೂಜೆ ಸಲ್ಲಸಿ ಬಳಿಕ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.ಕೋಟ್ಯಂತರ ರು. ಅವ್ಯವಹಾರ
ತಮಗೆ ಕೋಮುಲ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುವ ಯಾವುದೇ ಆಸೆ ಇರಲಿಲ್ಲ, ಆದರೆ ಅಲ್ಲಿ ರೈತರ ಹೆಸರಲ್ಲಿ ಕೋಟ್ಯತರ ಹಣ ದುರುಪಯೋಗವಾಗಿದೆ, ಆ ಹಣವನ್ನು ಮರಳಿ ಅರ್ಹರಿಗೆ ಕೊಡಿಸಲು ಚುನಾವಣೆಯಲ್ಲಿ ಸರ್ಧಿಸಲು ಮುಂದಾಗಿರುವೆ ಇದಕ್ಕೆ ಎಲ್ಲರ ಬೆಂಬಲ ಅಗತ್ಯವೆಂದು ಕೋರಿದರು.ಮುಂದೆ ಬರುವ ಜಿಪಂ,ತಾಪಂ ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಯಾರೇ ಅಭ್ಯರ್ಥಿಯಾಗಿದ್ದರೂ ಅದು ನಾನೇ ಅಭ್ಯರ್ಥಿ ಎಂದು ತಿಳಿದು ಎಲ್ಲರೂ ಒಂದಾಗಿ ಚುನಾವಣೆ ಎದುರಿಸಿದರೆ ಮಾತ್ರ ನನ್ನ ಕೈ ಬಲವಾಗಲಿದೆ ಎಂದರು.ಬೂದಿಕೋಟೆ ಆಸ್ಪತ್ರೆ ಮೇಲ್ದರ್ಜೆಗೆ
ಬೂದಿಕೋಟೆ ಆಸ್ಪತ್ರೆಯನ್ನು ೩೦ಹಾಸಿಗೆಯಿಂದ ನೂರು ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು. ವಿರೋಧ ಪಕ್ಷಗಳ ನಾಯಕರು ಈ ಬಾರಿ ಶಾಸಕರನ್ನು ಸೋಲಿಸಲು ಜನರು ತುದಿಗಾಲಲ್ಲಿ ನಿಂತಿದ್ದಾರೆಂದು ಟೀಕೆ ಮಾಡುತ್ತಿದ್ದಾರೆ. ಆದರೆ ಅದು ಅಸಾಧ್ಯವಾದ ಮಾತು. ತಾವು ಜನರ ವಿಶ್ವಾಸ ಉಳಿಸಿಕೊಂಡಿರುವುದರಿಂದಲೆ ಮೂರು ಬಾರಿ ಶಾಸಕರಾಗಲು ಸಾಧ್ಯವಾಗಿದೆ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.ಈ ವೇಳೆ ಗ್ರಾಪಂ ಅಧ್ಯಕ್ಷ ಮಂಜುನಾಥ್, ಸಂತೋಷ್, ರಾಮಶೆಟ್ಟಿ, ನಾರಾಯಣಮ್ಮ, ಮುಖಂಡರಾದ ಎ.ಬಾಬು, ಮುನಿರಾಜು, ವಿಜಿಕುಮಾರ್, ಮಹಾದೇವ್, ಅ.ನಾ.ಹರೀಶ್, ಕೆ.ವಿ.ನಾಗರಾಜ್, ಅನುಚಂದ್ರಶೇಖರ್ ಇತರರು ಇದ್ದರು.