ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಮಾರ್ಗದರ್ಶನದಂತೆ ಕಾರ್ಯಕ್ರಮ ರೂಪಿಸಲಾಗಿದೆ. ಅನುಭವದ ಕೊರತೆ ಇದ್ದರೂ ಕೂಡ ಶಕ್ತಿ ಮೀರಿ ಕಾರ್ಯಕ್ರಮ ರೂಪಿಸಿದ್ದು, ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಬೆಂಬಲನೀಡಿ ಮಳವಳ್ಳಿಗೆ ಕೀರ್ತಿ ತರಲಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದಲ್ಲಿ ಸುತ್ತೂರು ಆದಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವವನ್ನು ಶ್ರೀಗಳ ಆಶಯದಂತೆ ಯಶಸ್ವಿಗೊಳಿಸಲು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ಹೊರವಲಯದ ರಾಗಿಬೊಮ್ಮನಗೇಟ್‌ನಲ್ಲಿರುವ ಅರುಣೋದಯ ಸಮುದಾಯ ಭವನದಲ್ಲಿ ನಡೆದ ಶಿವರಾಯೋಗಿಗಳ 1067ನೇ ಜಯಂತ್ಯುತ್ಸವದ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಮಾರ್ಗದರ್ಶನದಂತೆ ಕಾರ್ಯಕ್ರಮ ರೂಪಿಸಲಾಗಿದೆ. ಅನುಭವದ ಕೊರತೆ ಇದ್ದರೂ ಕೂಡ ಶಕ್ತಿ ಮೀರಿ ಕಾರ್ಯಕ್ರಮ ರೂಪಿಸಿದ್ದು, ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಬೆಂಬಲನೀಡಿ ಮಳವಳ್ಳಿಗೆ ಕೀರ್ತಿ ತರಲಾಗಿದೆ ಎಂದರು.

ಚಾಮರಾಜನಗರ, ಗುಂಡ್ಲುಪೇಟೆ, ನಂಜನಗೂಡು, ಕೊಳ್ಳೇಗಾಲ, ಹನೂರು, ಪಿರಿಯಾಪಟ್ಟಣ, ಮೈಸೂರು, ಮಂಡ್ಯ ತಾಲೂಕು, ಕೆ.ಆರ್ ಪೇಟೆ, ಕೂಡಲಸಂಗಮ, ನಂಜನಗೂಡು, ಶ್ರೀರಂಗಪಟ್ಟಣ ಸೇರಿದಂತೆ ಹಲವು ಜಿಲ್ಲೆಗಳ ಭಕ್ತರು ತಮ್ಮ ಸ್ಥಳಗಳಲ್ಲಿ ಮುಂದಿನ ಜಯಂತಿ ಮಹೋತ್ಸವ ಆಚರಿಸಬೇಕೆಂಬ ಬೇಡಿಕೆ ಸಲ್ಲಿಸಿದ್ದಾರೆ. ಸುತ್ತೂರು ಶ್ರೀಗಳು ಮಠದಲ್ಲಿಯೇ ಸಭೆ ನಡೆಸಿ ಅಂತಿಮ ನಿರ್ಧಾರವನ್ನು ಘೋಷಣೆ ಮಾಡಲಿದ್ದಾರೆಂದು ಹೇಳಿದರು.

ಸಭೆಯಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ದೇಗುಲಮಠದ ಚನ್ನ ಬಸವನಂದ ಸ್ವಾಮೀಜಿ, ವಾಟಾಳು ಶ್ರೀ ಸೂರ್ಯ ಸಿಂಹಾಸನ ಮಠದ ಸಿದ್ಧಲಿಂಗಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕರು ಮುಖಂಡರು ಇದ್ದರು.

ಸುತ್ತೂರು ಮಠ ನಾಡಿನ ಬಡವರ ಕಲ್ಯಾಣಕ್ಕೆ ರೂಪಿತವಾದ ಕ್ಷೇತ್ರ: ಚಲುವರಾಯಸ್ವಾಮಿ

ಮಳವಳ್ಳಿ: ಸುತ್ತೂರು ಮಠ ನಾಡಿನ ಬಡವರ ಕಲ್ಯಾಣದೊಂದಿಗೆ ಆರೋಗ್ಯ, ಶಿಕ್ಷಣಕ್ಕಾಗಿ ಮುಡಿಪಾಗಿಟ್ಟ ಕ್ಷೇತ್ರವಾಗಿ ರೂಪಿತವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಸುತ್ತೂರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ಜಯಂತ್ಯುತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸುತ್ತೂರು ಕ್ಷೇತ್ರ ನಿರಂತರವಾಗಿ ಶಿಕ್ಷಣಕ್ಕೆ ಮಾನ್ಯತೆ ಕೊಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡವರ ಕಲ್ಯಾಣ ಹಾಗೂ ವಿಭಿನ್ನ ರೀತಿಯಲ್ಲಿ ರಾಜ್ಯದ ಅಭಿವೃದ್ಧಿ, ಜನಪರ ಕಾರ್ಯಕ್ರಮ ಜಾರಿ ಮಾಡಿದ್ದಾರೆ ಎಂದರು.

ಸುತ್ತೂರು ಮಠದ ಕ್ಷೇತ್ರದ ಮೇಲಿನ ಅಭಿಮಾನದಿಂದ ಇಲ್ಲಿಗೆ ಬಂದಿದ್ದಾರೆ. ಇದು ಶ್ರೀಕ್ಷೇತ್ರದ ಒಂದು ಸಾಧನೆ ಚರಿತ್ರೆಯಲ್ಲಿ ಬರೆದಿಡುವಂತಾಗಿದೆ. ಮಳವಳ್ಳಿಯಲ್ಲಿ ಜಯಂತ್ಯುತ್ಸವ ಆಚರಮೆಯ ಸಂತಸದೊಂದಿಗೆ ದೊಡ್ಡ ಪ್ರಮಾಣದಲ್ಲಿ ಗೌರವ ಸಿಕ್ಕಿದೆ. ದೇವರು ಸುತ್ತೂರು ಶ್ರೀಗಳಿಗೆ ಮತ್ತಷ್ಟು ಶಕ್ತಿ ನೀಡಲಿ ಎಂದು ಆಶಿಸಿದರು.

ಮುಂದಿನ ಜಯಂತ್ಯುತ್ಸವ ಗುಂಡ್ಲುಪೇಟೆಯಲ್ಲಿ:

ಮಳವಳ್ಳಿಯಲ್ಲಿ ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತ್ಯುತ್ಸವ ಅದ್ಧೂರಿಯಾಗಿ ನಡೆದಿದ್ದು,

ಮುಂದಿನ ಬಾರಿ ಗುಂಡ್ಲುಪೇಟೆಯಲ್ಲಿ ಶಿವರಾತ್ರಿ ಶಿವಯೋಗಿಯವರ 1067 ಜಯಂತ್ಯುತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆಯಲ್ಲಿ ಘೋಷಣೆ ಮಾಡಿದರು.