ಸಾರಾಂಶ
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹುದ್ದೆಯನ್ನು ಹಿರಿತನ ಮತ್ತು ನಿಷ್ಠೆ ಹಿನ್ನೆಲೆ ತಮಗೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿ ಪಕ್ಷದ ಕೇಂದ್ರ ಮತ್ತು ರಾಜ್ಯ ವರಿಷ್ಠರಿಗೆ ಹಾಗೂ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಚ್ಯುತಿ ಬಾರದಂತೆ ದಕ್ಷತೆಯಿಂದ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ಚಿಕ್ಕರಸಿನಕೆರೆಯ ಶ್ರೀ ಕಾಲಭೈರವೇಶ್ವರ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ಪವಾಡ ಬಸವಪ್ಪನಿಂದ ಆಶೀರ್ವಾದ ಪಡೆದರು.ನಂತರ ಮಾತನಾಡಿದ ಅವರು, ಶ್ರೀ ಕ್ಷೇತ್ರಕ್ಕೆ ಈ ಹಲವು ಬಾರಿ ಭೇಟಿ ನೀಡಿದ್ದು, ಆಸ್ತಿಕರ ನಂಬಿಕೆಯ ಕ್ಷೇತ್ರವಾದ ಇಲ್ಲಿ ವರ ಸಿದ್ಧಿ ಆಗುತ್ತದೆ ಎಂಬ ಪ್ರತೀತಿ ಹಿಂದಿನಿಂದಲೂ ಇದೆ. ಲೋಕಾಯುಕ್ತರಂತೆ ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿರುವ ಹತ್ತು- ಹಲವು ವ್ಯಾಜ್ಯಗಳನ್ನು ಖುದ್ದು ಬಗೆ ಹರಿಸಿರುವ ಕಾಲಭೈರವೇಶ್ವರನ ಬಸವಪ್ಪನವರ ಪವಾಡ ಪುಣ್ಯ ಕ್ಷೇತ್ರವಿದು ಎಂದರು.
ರಾಜ್ಯದ ಉನ್ನತ ಹುದ್ದೆ ಸ್ವೀಕರಿಸಿದ ತರುವಾಯ ಸ್ವಕ್ಷೇತ್ರ ಮಳವಳ್ಳಿಗೆ ತೆರಳುವ ಮುನ್ನ ರಾಜಧಾನಿಯಿಂದ ಕುಟುಂಬ ಸದಸ್ಯರ ಜತೆ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ತೆರಳುತ್ತಿರುವುದು ಹರ್ಷ ತಂದಿದೆ ಎಂದು ತಿಳಿಸಿದರು.ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹುದ್ದೆಯನ್ನು ಹಿರಿತನ ಮತ್ತು ನಿಷ್ಠೆ ಹಿನ್ನೆಲೆ ತಮಗೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿ ಪಕ್ಷದ ಕೇಂದ್ರ ಮತ್ತು ರಾಜ್ಯ ವರಿಷ್ಠರಿಗೆ ಹಾಗೂ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಚ್ಯುತಿ ಬಾರದಂತೆ ದಕ್ಷತೆಯಿಂದ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.
ಕಾಲಭೈರವೇಶ್ವರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಿಕ್ಕರಸಿನಕೆರೆ ಯಜಮಾನ್ ಶಿವಲಿಂಗೇಗೌಡ, ಡಿ.ಎ.ಕೆರೆ ರಘು, ಪುಟ್ಟರಾಜು, ಚನ್ನೇಗೌಡ, ನಿಂಗೇಗೌಡ, ವಸಂತ್‌ಕುಮಾರ್ ಸೇರಿ ಮತ್ತಿತರರಿದ್ದರು.