ಮಲ್ಲಾಘಟ್ಟ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಪಿ.ರವಿಕುಮಾರ್‌

| Published : Nov 15 2024, 12:35 AM IST

ಮಲ್ಲಾಘಟ್ಟ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಪಿ.ರವಿಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಹಲವು ವರ್ಷಗಳಿಂದ ಕೆರೆ ತುಂಬದೇ ನೀರಿನ ಸಮಸ್ಯೆ ಈ ಭಾಗದ ಜನರಲ್ಲಿ ಹೆಚ್ಚು ಕಾಡುತ್ತಿತ್ತು, ಈ ವರ್ಷ ಮಳೆ ಸಂತೃಪ್ತಿಯಾಗಿ ಗ್ರಾಮದವರೆಲ್ಲಾ ಸೇರಿ ಗಂಗೆ ಪೂಜೆ ಬಾಗಿನ ಅರ್ಪಿಸಿದ್ದಾರೆ. 77 ಎಕರೆ ಇರುವ ಈ ಕೆರೆ ಪಕ್ಕದಲ್ಲಿ ರಸ್ತೆ ನಿರ್ಮಾಣದ ಟೆಂಡರ್‌ ಕರೆದು ಅಭಿವೃದ್ಧಿ ಪಡಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಮಲ್ಲಾಘಟ್ಟ ಗ್ರಾಮದ ಕೆರೆತುಂಬಿ ಕೋಡಿ ಬಿದ್ದ ಹಿನ್ನೆಲೆ ಶಾಸಕ ಪಿ.ರವಿಕುಮಾರ್‌ ಬಾಗಿನ ಅರ್ಪಿಸಿದರು.

ನಂತರ ಮಾತನಾಡಿ, ಹಲವು ವರ್ಷಗಳಿಂದ ಕೆರೆ ತುಂಬದೇ ನೀರಿನ ಸಮಸ್ಯೆ ಈ ಭಾಗದ ಜನರಲ್ಲಿ ಹೆಚ್ಚು ಕಾಡುತ್ತಿತ್ತು, ಈ ವರ್ಷ ಮಳೆ ಸಂತೃಪ್ತಿಯಾಗಿ ಗ್ರಾಮದವರೆಲ್ಲಾ ಸೇರಿ ಗಂಗೆ ಪೂಜೆ ಬಾಗಿನ ಅರ್ಪಿಸಿದ್ದಾರೆ. 77 ಎಕರೆ ಇರುವ ಈ ಕೆರೆ ಪಕ್ಕದಲ್ಲಿ ರಸ್ತೆ ನಿರ್ಮಾಣದ ಟೆಂಡರ್‌ ಕರೆದು ಅಭಿವೃದ್ಧಿ ಪಡಿಸುವ ಭರವಸೆ ನೀಡಿದರು.

ಈ ಕೆರೆ ತುಂಬಿರುವುದರಿಂದ ಸುತ್ತಮುತ್ತಲಿನ ರೈತರು ಫಲವತ್ತಾಗುವ ಬೆಳೆ ಬರುವ ಮುನ್ಸೂಚನೆ ಕಂಡು ಹರ್ಷ ವ್ಯಕ್ತಪಡಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಉಪ್ಪಾರಕನಹಳ್ಳಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಪುನೀತ್‌, ಉಪಾಧ್ಯಕ್ಷ ಚಿಕ್ಕಯ್ಯ, ಮುಖಂಡರಾದ ಸಿದ್ದರಾಜು, ಕರೀಗೌಡ, ಸಿ.ಯೋಗಾನಂದ, ಗುರುಸ್ವಾಮಿ, ಅಶ್ವಥ್‌, ರಾಮಕೃಷ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.

ನರ್ಸಿಂಗ್‌ ಕಾಲೇಜಿನ ಸಂಸ್ಥಾಪನಾ ದಿನಾಚರಣೆ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಹೊರ ವಲಯದ ಶ್ರೀನಿವಾಸಪುರ ಗೇಟ್‌ನ ಸ್ಯಾಂಜೋ ಸ್ಕೂಲ್ ಮತ್ತು ನರ್ಸಿಂಗ್ ಕಾಲೇಜು ವತಿಯಿಂದ ನರ್ಸಿಂಗ್ ಕಾಲೇಜಿನ ಸಂಸ್ಥಾಪನಾ ದಿನಾಚರಣೆ ಮತ್ತು ಹೊಸ ಕಟ್ಟಡ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಪಿ.ರವಿಕುಮಾರ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸಿಸ್ಟರ್ ರೆನಿಟಾ ಮಾತನಾಡಿ, ನರ್ಸಿಂಗ್ ವಿದ್ಯಾರ್ಥಿಗಳ ಕಲಿಕೆಗೆ ಅವಕಾಶವಾಗುವಂತೆ ಸುಸಜ್ಜಿತವಾದ ಕಟ್ಟಡವನ್ನು ಕಟ್ಟಿದ್ದು ನುರಿತ ಶಿಕ್ಷಕರಿಂದ ಬೋಧನೆ ಮಾಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾದೇಶಿಕ ನಿರ್ದೇಶಕ ಸೋಜನ್ ಸಾಂಜೋ ಆಸ್ಪತ್ರೆ ಆಡಳಿತಾಧಿಕಾರಿ ಸಿಸ್ಟರ್ ಜೋಯಲ್ ಪ್ರಾಂಶುಪಾಲೆ ಅನಿತಾ ಸೇರಿದಂತೆ ಹಲವರು ಭಾಗವಹಿಸಿದ್ದರು.