ಸಾರಾಂಶ
ಮಂಡ್ಯ ತಾಲೂಕಿನ ಕನ್ನಲಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಸಿಮೆಂಟ್ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ 25 ಲಕ್ಷ ರು., ಹುಚ್ಚಲಗೆರೆ 25 ಲಕ್ಷ ರು., ಬಿ.ಗೌಡಗೆರೆ ಗ್ರಾಮದಲ್ಲಿ 1 ಕೋಟಿ ರು., ಕಟ್ಟೆದೊಡ್ಡಿ 30 ಲಕ್ಷ ರು.,ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1.80 ಕೋಟಿ ರು.ವೆಚ್ಚದಲ್ಲಿ ವಿವಿಧ ಗ್ರಾಮಗಳ ಸಿಮೆಂಟ್ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ರವಿಕುಮಾರ್‌ಗೌಡ ಗಣಿಗ ಭೂಮಿ ಪೂಜೆ ನೆರವೇರಿಸಿದರು.ತಾಲೂಕಿನ ಕನ್ನಲಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಸಿಮೆಂಟ್ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ 25 ಲಕ್ಷ ರು., ಹುಚ್ಚಲಗೆರೆ 25 ಲಕ್ಷ ರು., ಬಿ.ಗೌಡಗೆರೆ ಗ್ರಾಮದಲ್ಲಿ 1 ಕೋಟಿ ರು., ಕಟ್ಟೆದೊಡ್ಡಿ 30 ಲಕ್ಷ ರು.,ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಮಲ್ಲಯ್ಯನದೊಡ್ಡಿಯಿಂದ ಕಟ್ಟೆದೊಡ್ಡಿವರೆಗೂ ಸರಿ ಸುಮಾರು 50 ವರ್ಷದಿಂದ ರಸ್ತೆ ಆಭಿವೃದ್ಧಿಯಾಗಿಲ್ಲ, 3.50 ಕೋಟಿ ರು.ವೆಚ್ಚದಲ್ಲಿ ಕ್ರೀಯಾಯೋಜನೆ ರೂಪಿಸಿ ಟೆಂಡರ್ ಹಂತದಲ್ಲಿದೆ, ಟೆಂಡರ್ ತೆರೆದ ತಕ್ಷಣ ಕಾಮಗಾರಿಯನ್ನು ಆರಂಭಿಸುತ್ತೇವೆ ಎಂದರು.ಈ ವೇಳೆ ಮನ್ಮುಲ್ ನಿರ್ದೇಶಕ ಶಿವಪ್ಪ ಉಮ್ಮಡಹಳ್ಳಿ, ಸ್ಥಳೀಯ ಗ್ರಾಪಂ ಪಿಡಿಒ, ಸದಸ್ಯರು, ಮುಖಂಡರು ಹಾಜರಿದ್ದರು.ಪ್ರಧಾನ ಮಂತ್ರಿ ಶಿಷ್ಯ ವೇತನಕ್ಕಾಗಿ ಅರ್ಜಿ ಆಹ್ವಾನ
ಮಂಡ್ಯ:ವೃತ್ತಿಪರ ಕೋರ್ಸ್ 2024-25 ನೇ ಸಾಲಿನಲ್ಲಿ ಮೊದಲನೇ ವರ್ಷದಲ್ಲಿ ಓದುತ್ತಿರುವ ಮಾಜಿ ಸೈನಿಕರ ಮಕ್ಕಳಿಗೆ (ಸೈನ್ಯಾಧಿಕಾರಿಗಳ ಮಕ್ಕಳನ್ನು ಹೊರತುಪಡಿಸಿ) ಕೇಂದ್ರೀಯ ಸೈನಿಕ ಮಂಡಳಿಯಿಂದ ಪ್ರಧಾನ ಮಂತ್ರಿ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆ ದಿನವಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು www.ksb.gov.in ಮೂಲಕ ಸಲ್ಲಿಸತಕ್ಕದ್ದು ಎಂದು ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.