ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಶಾಸಕ ಪಿ.ರವಿಕುಮಾರ್ ಜನ್ಮದಿನದ ಅಂಗವಾಗಿ ನಗರದ ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡ್ ಬಳಿ ಗರ್ಭಿಣಿಯರು, ಬಾಣಂತಿಯರು ಹಾಗೂ ರೋಗಿಗಳ ಸಂಬಂಧಿಕರಿಗೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಎಚ್.ಅಶೋಕ್ ನೇತೃತ್ವದಲ್ಲಿ ಅನ್ನದಾಸೋಹ ನಡೆಯಿತು.ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ, ಮಮತೆಯ ಮಡಿಲು ಅನ್ನದಾಸೋಹ ಕೇಂದ್ರದಲ್ಲಿ ದಾಸೋಹಕ್ಕೆ ಚಾಲನೆ ನೀಡಿದ ಹಾಲಹಳ್ಳಿ ಅಶೋಕ್ ಮಾತನಾಡಿ, ಯುವಧ್ವನಿ, ಮಂಡ್ಯ ಅಭಿವೃದ್ಧಿ ಕನಸಿನ ತರುಣ, ಶಾಸಕ ಪಿ.ರವಿಕುಮಾರ್ ಅವರು ಮಂಡ್ಯ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡುವ ನಿಟ್ಟಿನಲ್ಲಿ ಉತ್ತಮವಾಗಿ ಕೆಲಸ ಮಾಡಲಿ ಎಂದರು.
ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಸಮಾಜಮುಖಿ ಕೆಲಸಗಳನ್ನು ಹಮ್ಮಿಕೊಳ್ಳುವ ಮೂಲಕ ಕ್ಷೇತ್ರಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಮಮತೆಯ ಮಡಿಲು ಅನ್ನದಾಸೋಹ ಕೇಂದ್ರದಲ್ಲಿ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಅನ್ನದಾಸೋಹ ವಿತರಣೆ ಮಾಡಲಾಗಿದೆ ಎಂದರು.ಶಾಸಕ ರವಿಕುಮಾರ್ ಅವರಿಗೆ ತಾಯಿ ಚಾಮುಂಡೇಶ್ವರಿ ಆಯಸ್ಸು, ಆರೋಗ್ಯ ಕರುಣಿಸುವ ಮೂಲಕ ಮಂಡ್ಯ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸ ಮಾಡಲು ಉನ್ನತ ಸ್ಥಾನ ಸಿಗಲಿ ಎಂದು ಶುಭ ಕೋರಿದರು.
ಈ ವೇಳೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಅಂಜನಾ ಶ್ರೀಕಾಂತ್, ಉಪಾಧ್ಯಕ್ಷೆ ನೀಲಾ ಮೂರ್ತಿ, ನಗರಸಭಾ ಮಾಜಿ ಸದಸ್ಯ ಕೆ.ಎಲ್.ನಾಗೇಂದ್ರ, ಬೇಲೂರು ಪುರುಷೋತ್ತಮ್, ಗ್ರಾಪಂ ಸದಸ್ಯ ಪ್ರದೀಪ್ ಸಿದ್ದೇಗೌಡ, ಅಜಿತ್, ಮಂಗಲ ಯೋಗೇಶ್ ಇತರರು ಭಾಗವಹಿಸಿದ್ದರು.ಶ್ರೀಬಸವೇಶ್ವರ ದೇವಸ್ಥಾನದ ಬಳಿ ಜ.14ರಿಂದ ಭಾರಿ ದನಗಳ ಜಾತ್ರೆ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣತಾಲೂಕಿನ ಕೆಆರ್‌ಎಸ್ ರೈಲ್ವೆ ಸ್ಟೇಷನ್ ಸಮೀಪದ ಹಳೇ ಉಂಡುವಾಡಿ ರಸ್ತೆಯ ಉಪ್ಪರಿಕೆ ಶ್ರೀಬಸವೇಶ್ವರ ದೇವಸ್ಥಾನದ ಬಳಿ ಜನವರಿ 14 ರಿಂದ 43ನೇ ವರ್ಷದ ದನಗಳ ಜಾತ್ರೆ ನಡೆಯಲಿದೆ ಎಂದು ದೇವಾಲಯದ ಟ್ರಸ್ಟ್ ತಿಳಿಸಿದೆ.
ಸಂಕ್ರಾಂತಿ ಹಬ್ಬದಿಂದ ಒಂದು ವಾರಗಳ ಕಾಲ ಬಾರಿ ದನಗಳ ಜಾತ್ರೆ ಆರಂಭವಾಗಲಿದ್ದು, ಕಳೆದ 42 ವರ್ಷಗಳಿಂದ ದನಗಳ ಜಾತ್ರೆ ಅದ್ಧೂರಿಯಾಗಿ ನಡೆಯುತ್ತಾ ಬಂದಿದೆ.ಶ್ರೀಉಪ್ಪರಿಕೆ ಬಸವೇಶ್ವರ ಸ್ವಾಮಿ ಸನ್ನಿಧಿಯಲ್ಲಿ 50 ಸಾವಿರ ರಾಸುಗಳನ್ನು ಕಟ್ಟಲು ವಿಶಾಲವಾದ ಜಾಗವಿದ್ದು, ಜಾತ್ರೆಗೆ ಬರುವ ರೈತರು ಹಾಗೂ ದನಕರುಗಳಿಗೆ ಮೂಲ ಸೌಕರ್ಯ ಹಾಗೂ ಇಲ್ಲಿಗೆ ನಾನಾ ಭಾಗಗಳಿಂದ ಬರುವವರಿಗೆ ಬಸ್ಸಿನ ಸೌಕರ್ಯವಿದೆ. ಉತ್ತಮ ರಾಸುಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಜ.15ರ ರಾತ್ರಿ 9 ಗಂಟೆಯೊಳಗೆ ತಮ್ಮ ರಾಸುಗಳೊಂದಿಗೆ ಜಾತ್ರೆ ಸಮಿತಿಯನ್ನು ಕಡ್ಡಾಯವಾಗಿ ಸಂಪರ್ಕಿಸುವಂತೆ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ-9980563599, ಮೊ-9900618113, ಮೊ-9845903019, ಮೊ-9980198510 ಸಂಪರ್ಕಿಸುವಂತೆ ಕೋರಿದ್ದಾರೆ.