ಸಾರಾಂಶ
ಶಿಗ್ಗಾಂವಿ: ಬೇಸಿಗೆ ಬಿಸಿ ಹೆಚ್ಚಾಗಿದ್ದು, ಕ್ಷೇತ್ರದ ಯಾವುದೇ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಬಾರದು. ಪ್ರತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು(ಪಿಡಿಒ) ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಶಾಸಕ ಯಾಸೀರ ಅಹ್ಮದಖಾನ್ ಪಠಾಣ ಅಧಿಕಾರಿಗಳಿಗೆ ಸಲಹೆ ನೀಡಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದೆ ಎಂಬ ಸಾರ್ವಜನಿಕರಿಂದ ದೂರುಗಳು ಬಾರದಂತೆ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಈ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ತ್ವರಿತವಾಗಿ ಕ್ರಮ ಕೈಗೊಂಡು ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಸೂಚಿಸಿದರು. ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಜೆಜೆಎಂ ಯೋಜನೆ ಆಮೆವೇಗದಲ್ಲಿ ಸಾಗಿದೆ. ಹೀಗಾಗಿ ಯೋಜನೆ ಕಾಮಗಾರಿ ಕಾರ್ಯ ವೇಗವಾಗಬೇಕು ಎಂದರು.
ಬೇಸಿಗೆಯಲ್ಲಿ ಜನರಿಗೆ ಹೆಚ್ಚಿನ ಕುಡಿಯುವ ನೀರು ನೀಡಲು ಸಾಧ್ಯವಾಗುತ್ತದೆ. ಯೋಜನಾಬದ್ಧವಾಗಿ ಕಾರ್ಯ ನಿಭಾಯಿಸುವ ಕೆಲಸ ನಮ್ಮದಾಗಬೇಕು ಎಂದರು.ಕೋಣನಕೇರಿ ಹತ್ತಿರದ ಸಕ್ಕರೆ ಕಾರ್ಖಾನೆ ಗ್ರಾಮ ಪಂಚಾಯಿತಿಗೆ ತೆರಿಗೆ ಹಣ ಕಟ್ಟಿಲ್ಲ. ತಕ್ಷಣ ಅದನ್ನು ಸಂದಾಯ ಮಾಡಿಸಿಕೊಂಡು ಅಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಬೇಕು ಎಂದರು.
ವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಲಾರ್ ಪ್ಲ್ಯಾಂಟ್ಟ್ ತೆರಿಗೆ ಹಣದಿಂದ ಸರ್ಕಾರಿ ಶಾಲೆಗಳ ಶೈಕ್ಷಣಿಕ ಸುಧಾರಣೆಗೆ ಹೆಚ್ಚಿನ ಆದ್ಯತೆ ಕಲ್ಪಿಸಬೇಕು ಎಂದರು.ತಹಸೀಲ್ದಾರ್ ರವಿ ಕೊರವರ, ತಾಪಂ ಇಒ ಕುಮಾರ ಮಣ್ಣವಡ್ಡರ, ಸವಣೂರ ತಹಸೀಲ್ದಾರ್ ಭರತಕುಮಾರ, ಸವಣೂರ ಇಒ ನವೀನ ಕಟ್ಟಿಮನಿ, ಗ್ಯಾರಂಟಿ ಯೋಜನೆ ಜಿಲ್ಲಾ ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ತಾಲೂಕು ಅಧ್ಯಕ್ಷ ಎಸ್.ಎಫ್. ಮಣಕಟ್ಟಿ, ಸವಣೂರ ತಾಲೂಕು ಅಧ್ಯಕ್ಷ ಸುಭಾಸ ಮಜ್ಜಗಿ, ಜೆಜೆಎಂ ತಾಲೂಕು ಅಧಿಕಾರಿ ಸಿ.ವಿ. ಜಿನಗಾ, ತಾಪಂ ಅಧಿಕಾರಿಗಳಾದ ಶಿವಾನಂದ ಸಣ್ಣಕ್ಕಿ, ಪ್ರಕಾಶ ಔದಕರ ಸೇರಿದಂತೆ ಶಿಗ್ಗಾವಿ- ಸವಣೂರು ತಾಲೂಕಿನ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಇದ್ದರು.ಗ್ರಾಮದೇವಿಗೆ ಉಡಿ ಅರ್ಪಿಸಿದ ಶಾಸಕ ಮಾನೆ ದಂಪತಿಹಾನಗಲ್ಲ: ಗ್ರಾಮದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆ ಇಲ್ಲಿನ ಪಾದಗಟ್ಟಿ ದೇವಸ್ಥಾನದ ಅರಮನೆ ಮಂಟಪದಲ್ಲಿ ವಿರಾಜಮಾನಳಾದ ಗ್ರಾಮದೇವಿಗೆ ಶಾಸಕ ಶ್ರೀನಿವಾಸ ಮಾನೆ ಕುಟುಂಬ ಸಮೇತ ಉಡಿ ಅರ್ಪಿಸಿ ತಾಲೂಕಿನ ಜನತೆಯ ಸುಭಿಕ್ಷೆಗೆ ಪ್ರಾರ್ಥಿಸಿದರು.
ತಾಯಿ ನಿರ್ಮಲಾ, ಪತ್ನಿ ಉಷಾ, ಮಕ್ಕಳಾದ ವಿಶಾಲ, ಸೂರಜ್ ಅವರೊಂದಿಗೆ ಗ್ರಾಮದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರತಿ 4 ವರ್ಷಗಳಿಗೊಮ್ಮೆ ನಡೆಯುತ್ತಿರುವ ಗ್ರಾಮದೇವಿ ಜಾತ್ರೆ ಇಡೀ ತಾಲೂಕಿನಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಯಾವುದೇ ತೊಂದರೆ ಇಲ್ಲದೇ ಜಾತ್ರೆ ಸುಸೂತ್ರವಾಗಿ ನಡೆಯುತ್ತಿದೆ. ಲಕ್ಷಾಂತರ ಭಕ್ತರಿಗೆ ಅಗತ್ಯ ಸೌಲಭ್ಯ ದೊರಕಿಸಲು ಕಾಳಜಿ ವಹಿಸಲಾಗಿದೆ ಎಂದರು.ತಹಸೀಲ್ದಾರ್ ರೇಣುಕಾ ಎಸ್., ಜಾತ್ರಾ ಸಮಿತಿ ಅಧ್ಯಕ್ಷ ಮಂಜುನಾಥ ನಾಗಜ್ಜನವರ, ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಉಪಾಧ್ಯಕ್ಷೆ ವೀಣಾ ಗುಡಿ, ಮುಖ್ಯಾಧಿಕಾರಿ ಜಗದೀಶ ವೈ.ಕೆ., ಮುಖಂಡರಾದ ಮಂಜಣ್ಣ ನೀಲಗುಂದ, ಆದರ್ಶ ಶೆಟ್ಟಿ, ರಾಜೂ ಗುಡಿ, ಸುರೇಶ ನಾಗಣ್ಣನವರ, ವಿನಾಯಕ ಬಂಕನಾಳ, ಮಂಜು ಗೊರಣ್ಣನವರ, ಶಿವು ತಳವಾರ, ಶಿವಾನಂದ ಕ್ಯಾಲಕೊಂಡ, ನಾಗರಾಜ ಆರೇರ ಇದ್ದರು.