ಸಾರಾಂಶ
ಪಶು ಚಿಕಿತ್ಸಾಲಯದ ನೂತನ ಕಟ್ಟಡ ಕಾಮಗಾರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಭೂಮಿಪೂಜೆ ನೆರವೇರಿಸಿದರು.
ತುರುವೇಕೆರೆ: ತಾಲೂಕಿನ ದಂಡಿನಶಿವರ ಹೋಬಳಿಯ ದೊಂಬರನಹಳ್ಳಿ ಗ್ರಾಮದಲ್ಲಿ ಆರ್.ಡಿ.ಎಫ್ ಯೋಜನೆ ಅಡಿಯಲ್ಲಿ ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಪಶು ಚಿಕಿತ್ಸಾಲಯದ ನೂತನ ಕಟ್ಟಡ ಕಾಮಗಾರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಭೂಮಿಪೂಜೆ ನೆರವೇರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೈತರು ಆರ್ಥಿಕ ಸ್ವಾವಲಂಬಿಯಾಗಲು ಹೈನುಗಾರಿಕೆಯೇ ಮುಖ್ಯ ಕಾರಣವಾಗಿದೆ. ಹಾಗಾಗಿ ರಾಸುಗಳ ಸಂರಕ್ಷಣೆ ಮಾಡಲು ಪಶು ಚಿಕಿತ್ಸಾಲಯಗಳು ಅತ್ಯಗತ್ಯವಾಗಿದೆ. ಕಾಲಕಾಲಕ್ಕೆ ರಾಸುಗಳಿಗೆ ಬರುವ ವಿವಿಧ ರೋಗಗಳ ನಿಯಂತ್ರಣಕ್ಕೆ ಪಶು ಆಸ್ಪತ್ರೆಗಳು ಅನಿವಾರ್ಯವಾಗಿದೆ. ಈಗಾಗಲೇ ತಾಲ್ಲೂಕಿನ ಹಲವೆಡೆ ಹೊಸ ಪಶು ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.ಈ ಸಂಧರ್ಭದಲ್ಲಿ ತಾಲೂಕು ಪಶು ಇಲಾಖಾ ಸಹಾಯಕ ನಿರ್ದೇಶಕ ಡಾ.ರೇವಣಸಿದ್ದಪ್ಪ, ಪಶು ವೈದ್ಯರುಗಳಾದ ಡಾ.ಪುಟ್ಟರಾಜು, ಡಾ.ಮಹೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಶೋಭಾ ಭೋಜರಾಜು, ಕೀರ್ತಿ, ಪೈಂಟ್ ರಂಗನಾಥ್, ಕಾಂತರಾಜು, ತೀರ್ಥಕುಮಾರ್, ಶಶಿ, ಕಲ್ಲಬೋರನಹಳ್ಳಿ ರವಿಕುಮಾರ್, ಕೊಂಡಜ್ಜಿ ನಟರಾಜು, ಗ್ರಾಮದ ಗುಡಿಗೌಡರಾದ ರಾಜಣ್ಣ, ಯೋಗೀಶ್, ಡಿ.ಎಸ್.ಸಿದ್ಧಲಿಂಗಸ್ವಾಮಿ, ಮುನಿಯಪ್ಪ, ಪಶು ಚಿಕಿತ್ಸಾಲಯದ ಸಿಬ್ಬಂದಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.