ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹುಟ್ಟುಹಬ್ಬದ ಅಂಗವಾಗಿ ಪರಿಸರ ಸಂಸ್ಥೆಯ ಮಮತೆಯ ಮಡಿಲು ನಿತ್ಯ ಅನ್ನದಾಸೋಹ ಕೇಂದ್ರದಲ್ಲಿ ರೋಗಿಗಳು ಮತ್ತು ಸಂಬಂಧಿಕರಿಗೆ ಉಪಹಾರ ಹಾಗೂ ಊಟ ವಿತರಣೆ ಮಾಡಲಾಯಿತು.ನಗರದ ಜಿಲ್ಲಾಸ್ಪತ್ರೆ ಹೆರಿಗೆ ವಾರ್ಡ್ ಆವರಣದಲ್ಲಿರುವ ನಿತ್ಯ ಅನ್ನದಾಸೋಹ ಕೇಂದ್ರಕ್ಕೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹುಟ್ಟುಹಬ್ಬಕ್ಕೆ ಶುಭಕೋರಿ ಅನ್ನದಾಸೋಹ ನೆರವೇರಿಸಿದರು.
ಈ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಅಶೋಕ್ ಮಾತನಾಡಿ, ಮಳವಳ್ಳಿ ವರಪುತ್ರ ಪಿ.ಎಂ.ನರೇಂದ್ರಸ್ವಾಮಿ ಈಗಾಗಲೇ ಮಾಜಿ ಸಚಿವರಾಗಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಜನರ ಸೇವೆ ಮಾಡಲು ಮಂತ್ರಿಯಾಗಲಿ ಎಂದು ಶುಭ ಹಾರೈಸಿದರು.ನಗರಸಭಾ ಸದಸ್ಯ ಎಂ.ಎನ್.ಶ್ರೀಧರ್ ಮಾತನಾಡಿ, ಒಂದು ಬಾರಿ ಮಂತ್ರಿಯಾಗಿ ಕೆಲಸ ಮಾಡಿರುವ ಪಿ.ಎಂ. ನರೇಂದ್ರಸ್ವಾಮಿ ಅವರಿಗೆ ಮುಂದಿನ ದಿನಗಳಲ್ಲಿ ರಾಜ್ಯದ ಮಂತ್ರಿಯಾಗುವ ಅವಕಾಶ ಸಿಗಲಿ. ದೇವರು ಅವರಿಗೆ ಆಯಸ್ಸು, ಆರೋಗ್ಯ,ಉನ್ನತ ಸ್ಥಾನಮಾನದ ಯಶಸ್ಸು ಲಭಿಸಲಿ ಎಂದು ಶುಭ ಕೋರಿದರು.
ಈ ವೇಳೆ ಜಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಕೆ.ರುದ್ರಪ್ಪ, ಮಹಿಳಾ ಕಾಂಗ್ರೆಸ್ ಮುಖಂಡರಾದ ವೀಣಾ, ನೀಲಾ, ಕಾಂಗ್ರೆಸ್ ಮುಖಂಡ ಸೋಮಶೇಖರ್, ಮಮತೆಯ ಮಡಿಲು ಅನ್ನದಾಸೋಹ ಕೇಂದ್ರದ ಮಂಗಲ ಎಂ.ಯೋಗೀಶ್, ದೀಪಕ್, ಹರೀಶ್, ಚನ್ನಪ್ಪ ಸೇರಿದಂತೆ ಇತರರು ಹಾಜರಿದ್ದರು.ಪಿ.ಎಂ.ನರೇಂದ್ರಸ್ವಾಮಿ ಹುಟ್ಟುಹಬ್ಬ: ಅನ್ನಸಂತರ್ಪಣೆ
ಹಲಗೂರು:ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಲಯನ್ಸ್ ಕ್ಲಬ್ ಪ್ರತಿದಿನ ನಡೆಯುವ ಹಸಿವು ನಿವಾರಣೆದಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳಿಂದ ಅನ್ನಸಂತರ್ಪಣೆ ನಡೆಯಿತು.
ಅಭಿಮಾನಿಗಳಾದ ಎಚ್.ಎನ್.ರಾಜೇಂದ್ರ ಮತ್ತು ಜಗದೀಶ ಮಾತನಾಡಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಪ್ಪಟ ಅಭಿಮಾನಿಯಾಗಿ ಅವರ 63ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಶಾಲು ಹಾರ ಹಾಕುವುದನ್ನು ಬಿಟ್ಟು ಹಸಿದವರಿಗೆ ಅನ್ನ ಹಾಕುತ್ತಿದ್ದೇವೆ ಎಂದರು.ದೇವರು ಶಾಸಕರಿಗೆ ಆರೋಗ್ಯ ಭಾಗ್ಯವನ್ನು ನೀಡಲಿ. ಇನ್ನಷ್ಟು ಉನ್ನತ ಅಧಿಕಾರಗಳನ್ನು ಪಡೆದು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಕೆಲಸ ಮಾಡಲು ದೇವರ ಆಶೀರ್ವಾದ ಸದಾ ಇರಲಿ ಎಂದರು.
ಈ ಸಂದರ್ಭದಲ್ಲಿ ಸಾಗ್ಯ ಜಗದೀಶ್ ಮತ್ತು ಲಯನ್ಸ್ ಕ್ಲಬ್‌ನ ಡಾ.ಶಂಷುದ್ದೀನ್, ಡಿ.ಎಲ್.ಮಾದೇಗೌಡ ಎಂ.ಜಯಶಂಕರ ( ಜಯಣ್ಣ) , ಎಚ್.ಎನ್. ರಾಜೇಂದ್ರ ಸೇರಿದಂತೆ ಇತರರು ಇದ್ದರು.