ಔರಾದ್‌-ಬೆಳಕುಣಿ ರಸ್ತೆ ಕಾಮಗಾರಿ ಪರಿಶೀಲಿಸಿ ಶಾಸಕ ಪ್ರಭು ಚವ್ಹಾಣ್‌

| Published : Sep 20 2024, 01:36 AM IST

ಔರಾದ್‌-ಬೆಳಕುಣಿ ರಸ್ತೆ ಕಾಮಗಾರಿ ಪರಿಶೀಲಿಸಿ ಶಾಸಕ ಪ್ರಭು ಚವ್ಹಾಣ್‌
Share this Article
  • FB
  • TW
  • Linkdin
  • Email

ಸಾರಾಂಶ

ಔರಾದ್‌-ಬೆಳಕುಣಿ ರಸ್ತೆ ಕಾಮಗಾರಿ ಪರಿಶೀಲಿಸಿ ಶಾಸಕ ಪ್ರಭು ಚವ್ಹಾಣ್‌

ಕನ್ನಡಪ್ರಭ ವಾರ್ತೆ ಔರಾದ್‌

ತಾಲೂಕಿನ ಬೆಳಕುಣಿ( ಚೌ) ಗ್ರಾಮದಲ್ಲಿ ನಡೆಯುತ್ತಿರುವ ಔರಾದ್‌ ಬೆಳಕುಣಿ ರಸ್ತೆ ಕಾಮಗಾರಿ ವೀಕ್ಷಿಸಿ ಗುಣಮಟ್ಟದ ಕುರಿತು ಶಾಸಕ ಪ್ರಭು ಚವ್ಹಾಣ್‌ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.

ಕಾಮಗಾರಿ ಸ್ಥಳಕ್ಕೆ ದಿಢೀರ್‌ ಭೇಟಿ ನೀಡಿದ ಶಾಸಕರು, ಚಾಲ್ತಿಯಲ್ಲಿರುವ ಕೆಲಸದ ಸ್ಥಳದಲ್ಲಿ ಸಂಚರಿಸಿ ಕೆಲಸದ ಗುಣಮಟ್ಟ ಪರಿಶೀಲಿಸಿದರು. ರಸ್ತೆಗೆ ದೊಡ್ಡ ಗಾತ್ರದ ಕಲ್ಲು ಬಳಸುತ್ತಿರುವುದು ಕಂಡು ಬೇಸರ ಹೊರ ಹಾಕಿದರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ವಿವರಣೆ ಪಡೆದರು. ಜೆಇ ಜುಂಜೆರಾವ್‌ ನಾಯಕ್‌ ಅವರು ಕೆಲಸದ ಬಗ್ಗೆ ಸ್ಥಳೀಯರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಕೆಲಸ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು.

ಕಾಮಗಾರಿಗೆ ಕಳಪೆ ಸಾಮಗ್ರಿ ಬಳಸಿದರೆ ರಸ್ತೆ ಬಹಳಷ್ಟು ದಿನ ಬಾಳಿಕೆ ಬರುವುದಿಲ್ಲ. ಕೆಲವೇ ದಿನಗಳಲ್ಲೇ ಪುನಃ ದುರಸ್ತಿಗೆ ಬರುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಯಾವುದೇ ಕಾರಣಕ್ಕೂ ಕಳಪೆ ಸಾಮಗ್ರಿಗಳನ್ನು ಬಳಸಬಾರದು. ಗುಣಮಟ್ಟದಲ್ಲಿ ಲೋಪಗಳು ಕಾಣಿಸಿದಲ್ಲಿ ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲವೆಂದು ಗುತ್ತಿಗೆದಾರರಿಗೆ ಎಚ್ಚರಿಸಿದರು.

ಜನತೆಗೆ ಸಮಸ್ಯೆಯಾಗುತ್ತಿರುವುದನ್ನು ಗಮನಿಸಿ ₹4.19ಕೋಟಿ ವೆಚ್ಚದ ಮೊತ್ತದಲ್ಲಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮುಂಗನಾಳ, ಚೌಧರಿ ಬೆಳಕುಣಿ ಸೇರಿದಂತೆ ಹಲವಾರು ಗ್ರಾಮಸ್ಥರಿಗೆ ಅನುಕೂಲಕರವಾಗಿರುವ ಈ ರಸ್ತೆ ಕಾಮಗಾರಿ ನಿಗದಿತ ಅವಧಿಯೊಳಗೆ ಮತ್ತು ಗುಣಮಟ್ಟದಿಂದ ಮಾಡಬೇಕು ಎಂದು ಸೂಚಿಸಿದರು.