ಸರ್ಕಾರಿ ಸ್ವತ್ತುಗಳ ಸಂರಕ್ಷಣೆಗೆ ಶಾಸಕ ಪ್ರಸಾದ ಅಬ್ಬಯ್ಯ ಸೂಚನೆ

| Published : Aug 27 2025, 01:01 AM IST

ಸರ್ಕಾರಿ ಸ್ವತ್ತುಗಳ ಸಂರಕ್ಷಣೆಗೆ ಶಾಸಕ ಪ್ರಸಾದ ಅಬ್ಬಯ್ಯ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾಲಿಕೆ ಅನೇಕ ಸ್ವತ್ತುಗಳನ್ನು ಸರ್ಕಾರದ ಪರವಾನಗಿ ಪಡೆಯದೇ ಪಾಲಿಕೆ ಸಭೆಯಲ್ಲಿ ಠರಾವ್ ಮಾಡುವ ಮೂಲಕ ಮಾರಾಟ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿವೆ. ಸಾರ್ವಜನಿಕ ಅನುಕೂಲಕ್ಕಾಗಿ ಕಟ್ಟಡ ನಿರ್ಮಾಣ ಮಾಡಲು ಕ್ಷೇತ್ರದ ಸರ್ಕಾರಿ ಸ್ವತ್ತುಳನ್ನೆಲ್ಲ ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು.

ಹುಬ್ಬಳ್ಳಿ: ಪಾಲಿಕೆ ಸ್ವತ್ತುಗಳ ಬಗ್ಗೆ ಸಮೀಕ್ಷೆ ಕೈಗೊಳ್ಳಬೇಕು. ಸರ್ಕಾರದ ಆದೇಶ ಪಾಲನೆ ಮಾಡದೇ ಮಾರಾಟ ಅಥವಾ ಲೀಸ್ ನೀಡಿರುವ ಪಾಲಿಕೆ ಅಥವಾ ಸರ್ಕಾರಿ ಸ್ವತ್ತುಗಳನ್ನು ಮರಳಿ ಪಡೆಯುವ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಕ್ರಮ ವಹಿಸಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ತಮ್ಮ ಗೃಹ ಕಚೇರಿಯಲ್ಲಿ ಮಂಗಳವಾರ ವಿವಿಧ ಸ್ಲಂ ಬಡಾವಣೆಗಳ ಹಕ್ಕುಪತ್ರ ವಿತರಣೆಗೆ ಸಂಬಂಧಿಸಿದಂತೆ ನಡೆಸಿದ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಸೂಚನೆ ನೀಡಿದರು.

ಪಾಲಿಕೆ ಅನೇಕ ಸ್ವತ್ತುಗಳನ್ನು ಸರ್ಕಾರದ ಪರವಾನಗಿ ಪಡೆಯದೇ ಪಾಲಿಕೆ ಸಭೆಯಲ್ಲಿ ಠರಾವ್ ಮಾಡುವ ಮೂಲಕ ಮಾರಾಟ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿವೆ. ಸಾರ್ವಜನಿಕ ಅನುಕೂಲಕ್ಕಾಗಿ ಕಟ್ಟಡ ನಿರ್ಮಾಣ ಮಾಡಲು ಕ್ಷೇತ್ರದ ಸರ್ಕಾರಿ ಸ್ವತ್ತುಳನ್ನೆಲ್ಲ ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಕಳೆದ 50ವರ್ಷಗಳಲ್ಲಿ ಸರ್ಕಾರಿ ಸ್ವತ್ತುಗಳನ್ನು ಹೇಗೆ ಹಂಚಿಕೆ ಮಾಡಲಾಗಿದೆ ಎಂಬುದರ ಬಗ್ಗೆ ವಿಸ್ತೃತ ವರದಿ ಸಲ್ಲಿಸುವಂತೆ ಶಾಸಕ ಪ್ರಸಾದ ಅಬ್ಬಯ್ಯ ಸೂಚಿಸಿದರು.

ಈ ಸಂದರ್ಭದಲ್ಲಿ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಸೀಲ್ದಾರ್ ಮಹೇಶ ಗಸ್ತಿ, ಭೂದಾಖಲೆಗಳ ಸಹಾಯಕ ನಿರ್ದೇಶಕ ಮೋಹನ್ ಶಿವಣ್ಣವರ, ಎಡಿಎಲ್‌ಆರ್ ಅನಿಲ ಜಲಗೇರಿ, ರಾಜಶೇಖರ್ ಹಳ್ಳೂರ, ಸ್ಲಮ್‌ಬೋರ್ಡ್ ಕಾರ್ಯನಿರ್ವಾಹಕ ಅಭಿಯಂತರ ಪ್ರವೀಣಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.