ಆರ್‌ವಿಎನ್‌ ಸಾಮಾಜಿಕ ಸೇವೆ ಅಗ್ರಗಣ್ಯ: ಮುಕುಂದ ನಾಯಕ

| Published : Feb 29 2024, 02:02 AM IST

ಆರ್‌ವಿಎನ್‌ ಸಾಮಾಜಿಕ ಸೇವೆ ಅಗ್ರಗಣ್ಯ: ಮುಕುಂದ ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ಸುರಪುರ ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಕಸಾಪದಿಂದ ಹಮ್ಮಿಕೊಂಡಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕರಿಗೆ ನುಡಿನ ನಮನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಸುರಪುರ

ಜನರ ಸೇವೆಗಾಗಿಯೇ 40 ವರ್ಷಗಳ ಮುಡುಪಾಗಿಟ್ಟ ಧೀಮಂತ ನಾಯಕ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರನ್ನು ಕಳೆದುಕೊಂಡು ಸುರಪುರ ಅನಾಥವಾಗಿದೆ ಎಂದು ಪಬ್ಲಿಕ್ ರಿಕ್ರಿಯೆಶನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಹೇಳಿದರು.

ನಗರದ ಗರುಡಾದ್ರಿ ಕಲಾಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಪಬ್ಲಿಕ್ ರಿಕ್ರಿಯೆಶನ್ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕರಿಗೆ ನುಡಿನ ನಮನ ಕಾರ್ಯಕ್ರಮದಲ್ಲಿ ಮಾನತಾಡಿದ ಅವರು, ಜಾತಿ, ಮತ ಪಂಥವೆನ್ನದೆ ಸಾಮಾಜಿಕ ಕಾರ್ಯಗಳನ್ನು ಮಾಡಿ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ ಮಾತನಾಡಿ, ಸಾಹಿತ್ತಿಕ ಸಾಂಸ್ಕೃತಿಕ ಕ್ಷೇತ್ರಕ್ಕೆ ಹಿರಿಯ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಕೊಡುಗೆ ಅನುಪಮ ಎಂದು ಸ್ಮರಿಸಿದರು.

ಹಿರಿಯ ಸಾಹಿತಿಗಳಾದ ಶ್ರೀನಿವಾಸ ಜಾಲವಾದಿ, ನಬಿಲಾಲ ಮಕಾಂದರ, ಉದ್ಯಮಿ ಕಿಶೋರಚಂದ ಜೈನ್, ನ್ಯಾಯವಾದಿಗಳಾದ ಮಲ್ಲಿಕಾರ್ಜುನಯ್ಯ ಹಿರೇಮಠ, ಜಯಲಲಿತಾ ಪಾಟೀಲ್ ಮಾತನಾಡಿದರು.

ರಾಜಾ ಪಾಮ ನಾಯಕ, ರಾಮನಗೌಡ ಸುಬೇದಾರ್, ಬಸವರಾಜ ಜಮದ್ರಖಾನಿ, ಪ್ರಕಾಶ್ ಸಜ್ಜನ್. ಮಂಜುನಾಥ್ ಗುಳಗಿ. ಗೋಪಾಲದಾಸ ಲಡ್ದಾ, ಸೋಮನಾಥ ದೊಣ್ಣೆಗೇರಿ ಗೋವರ್ಧನ್ ಜಂವಾರ್, ಪ್ರಕಾಶ್ ಗುತ್ತೇದಾರ್ ಎಸ್ ಎನ್ ಪಾಟೀಲ್. ಡಾ. ಎಂ.ಎಸ್. ಕನಕರೆಡ್ಡಿ. ಸುಭಾಷ ಬೋಡಾ, ಚಂದ್ರಕಾಂತ್ ಚೋಂಡು, ಆಬೀದಲಿ, ನಾಸಿರ್ ಅಹಮ್ಮದ್, ಶಿವರಾಜ್ ಅವ್ವಂಟಿ, ಸೋಮರಾಯ ಶಾಕಾಪುರ, ಡಾ. ಮಹಮ್ಮದ್ ಮನ್ಸೂರ್ ಬೋಡೇ, ಅಬ್ದುಲ್ ಪಾಷಾ, ಅರವಿಂದ ಚಂದ್ರಗಿರಿ, ಶ್ರೀನಿವಾಸ್ ರಫ್ಗಾರ್, ಉದಯ್ ಸಿಂಗ್, ಸಾಹಿತಿಗಳಾದ ಕನಕಪ್ಪ ವಾಗಣಿಗೇರಿ ವೆಂಕಟೇಶ್ ಎಂ. ಪಾಟೀಲ್, ಎಚ್.ವೈ ರಾಠೋಡ್, ವೆಂಕಣ್ಣ ಯಾದವ, ಬಸವರಾಜ ಕುಂಬಾರ ಸೇರಿದಂತೆ ಇತರರಿದ್ದರು. ಶ್ರೀಶೈಲ್ ಯಂಕಂಚಿ ಸ್ವಾಗತಿಸಿದರ. ದೇವು ಎಸ್. ಹೆಬ್ಬಾಳ್ ನಿರೂಪಿಸಿದರು.