ಸಾರಾಂಶ
ರೇಷನ್ ಕಾರ್ಡ್ ಪಡೆಯಲು ಇನ್ನು ಕಾಲಾವಕಾಶ ನೀಡಲಾಗಿದ್ದು, ಜನರು ಯಾವುದೇ ಭಯಪಡೆಯಬೇಕಾಗಿಲ್ಲ, ಈ ಬಗ್ಗೆ ತಹಸೀಲ್ದಾರ್ ಅಧಿಕೃತ ಹೇಳಿಕೆಯನ್ನು ಮಾಧ್ಯಮ ಮೂಲಕ ನೀಡಲಿ ಎಂದು ಶಾಸಕರು ಸೂಚನೆ ನೀಡಿದರು.
ಬಂಟ್ವಾಳ: ರೇಷನ್ ಕಾರ್ಡ್ ವಿತರಣೆ ನಡೆಯುವ ತಾಲೂಕಿನ ಆಡಳಿತ ಸೌಧದ ಕಚೇರಿಯ ಆಹಾರ ಶಾಖೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಂಗಳವಾರ ದಿಡೀರ್ ಬೇಟಿ ನೀಡಿ ಅಧಿಕಾರಿಗಳನ್ನು ಕರೆದು ಜನರಿಗೆ ಸರಿಯಾದ ಮಾಹಿತಿ ನೀಡುವಂತೆ ಸೂಚಿಸಿದರು.
ಡಿ.30 ರಂದು ಸೋಮವಾರ ಮತ್ತು 31 ಮಂಗಳವಾರ ಎರಡು ದಿನಗಳಲ್ಲಿ ಕಂದಾಯ ಇಲಾಖೆಯಲ್ಲಿ ರೇಷನ್ ಕಾರ್ಡ್ ಪಡೆಯುವುದಕ್ಕೆ ನೂರಾರು ಜನ ಸೇರಿದ್ದು, ಇಡೀ ದಿನ ಇಲಾಖೆಯಲ್ಲಿ ಸರಣಿ ಸಾಲಿನಲ್ಲಿ ನಿಂತು ಸುಸ್ತಾದ ಫಲಾನುಭವಿಗಳು ಶಾಸಕರಿಗೆ ಪೋನ್ ಸಂಪರ್ಕ ಮೂಲಕ ದೂರು ನೀಡಿದ್ದರು.ಈ ಹಿನ್ನೆಲೆಯಲ್ಲಿ ಶಾಸಕರು ದಿಢೀರ್ ಭೇಟಿ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದುಕೊಂಡು, ಅಧಿಕಾರಿಗಳನ್ನು ಕರೆದು ಜನರಿಗೆ ತೊಂದರೆಯಾಗದಂತೆ ರೇಷನ್ ಕಾರ್ಡ್ ವಿತರಿಸಲು ಸೂಚನೆ ನೀಡಿದರು.ಡಿ.31ರಂದು ಕಾರ್ಡ್ ನೀಡಲು ಕೊನೆಯ ದಿನ ಎಂದು ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಸುದ್ದಿ ಹರಡುತ್ತಿದ್ದು, ಜನರು ಭಯದಿಂದ ಇಲಾಖೆಯ ಬಾಗಿಲಿಗೆ ಬಂದು ಕ್ಯೂ ನಿಲ್ಲುವಂತಾಗಿದೆ. ರೇಷನ್ ಕಾರ್ಡ್ ಪಡೆಯಲು ಇನ್ನು ಕಾಲಾವಕಾಶ ನೀಡಲಾಗಿದ್ದು, ಜನರು ಯಾವುದೇ ಭಯಪಡೆಯಬೇಕಾಗಿಲ್ಲ, ಈ ಬಗ್ಗೆ ತಹಸೀಲ್ದಾರ್ ಅಧಿಕೃತ ಹೇಳಿಕೆಯನ್ನು ಮಾಧ್ಯಮ ಮೂಲಕ ನೀಡಲಿ ಎಂದು ಶಾಸಕರು ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಪ್ರಮುಖರಾದ ವಿಕಾಸ್ ಪುತ್ತೂರು, ಶಾಂತವೀರ ಪೂಜಾರಿ, ಶಶಿಕಾಂತ್ ಶೆಟ್ಟಿ ಆರುಮುಡಿ ಸರಪಾಡಿ, ಅನೂಪ್ ಮಯ್ಯ, ಮೋಹನ್, ಶಿವರಾಜ್ ಕಾಂದಿಲ, ಪ್ರಣಾಮ್ ಅಜ್ಜಿಬೆಟ್ಟು, ಆನಂದ ಶಂಭೂರು ಮತ್ತಿತರರು ಉಪಸ್ಥಿತರಿದ್ದರು.